ವಿದೇಶಿ ಪೌರತ್ವ ಹೊಂದಿರುವ ಬಾಲಿವುಡ್ ನಟ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು?
ಬಾಲಿವುಡ್ ಚಲನಚಿತ್ರಗಳಲ್ಲಿ ಮಿಂಚುವ ಸೆಲೆಬ್ರಿಟಿಗಳಲ್ಲಿ ಹಲವು ಮಂದಿಗೆ ಭಾರತೀಯ ಪೌರತ್ವವೇ ಇರುವುದಿಲ್ಲ. ಕೆಲವರು ಕೆನಡಾ, ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳ ಪೌರತ್ವ ಹೊಂದಿದ್ದಾರೆ. ಈಗ ಈ ವಿಷಯ ಏಕೆ ಚರ್ಚೆಗೆ ಬಂದಿದೆ ಎಂದರೆ, ಇಷ್ಟು ದಿನ ಕೆನಡಾದ ಪ್ರಜೆಯಾಗಿದ್ದ ನಟ ಅಕ್ಷಯ್ ಕುಮಾರ್ ಸ್ವಾತಂತ್ರ್ಯ ದಿನದಂದು ತಮಗೆ ಭಾರತೀಯ ಪೌರತ್ವ ದೊರೆತಿರುವ ಬಗ್ಗೆ ಘೋಷಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಮಿಂಚುವ ಆಸೆಯಿಂದ ಪ್ರಪಂಚದ ಹಲವು ಭಾಗಗಳಿಂದ ಕಲಾವಿದರು ಮುಂಬೈಗೆ ಬರುತ್ತಾರೆ. ಅದರಲ್ಲೂ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಜನಪ್ರಿಯತೆ ಮತ್ತು ವೆಬ್ ಸರಣಿಗಳ ಬೆಳವಣಿಗೆಯಿಂದಾಗಿ ಅಂತಾರಾಷ್ಟ್ರೀಯ ಕಲಾವಿದರನ್ನು ಬಳಸಿಕೊಳ್ಳುವುದು ಹೆಚ್ಚಾಗಿದೆ.
ಭಾರತವು ನಾಗರಿಕರಿಗೆ ಬಹು ಅಥವಾ ದ್ವಿ ಪೌರತ್ವವನ್ನು ಹೊಂದಲು ಅನುಮತಿ ನೀಡುವುದಿಲ್ಲ. ಆದ್ದರಿಂದ ಒಬ್ಬ ವ್ಯಕ್ತಿಯು ಮತ್ತೊಂದು ದೇಶದ ಪೌರತ್ವವನ್ನು ಪಡೆದ ನಂತರ ಅವರ ಭಾರತೀಯ ಪೌರತ್ವವನ್ನು ತ್ಯಜಿಸಬೇಕಾಗುತ್ತದೆ. ದೀರ್ಘಕಾಲದವರೆಗೆ ವಿದೇಶಿ ನಾಗರಿಕರಾಗಿರುವ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಆಲಿಯಾ ಭಟ್
'ದಿ ಸ್ಟೂಡೆಂಟ್ ಆಫ್ ದಿ ಇಯರ್' ಸಿನಿಮಾದಿಂದ ಬಾಲಿವುಡ್‌ನಲ್ಲಿ ಸಿನಿ ಜರ್ನಿ ಆರಂಭಿಸಿ ಬಾಳಿವುಡ್ ಸ್ಟಾರ್ ಆಗಿರುವ ನಟಿ ಆಲಿಯಾ ಭಟ್ ಭಾರತದ ಪ್ರಜೆಯಲ್ಲ. ಬ್ರಿಟಿಷ್ ಪ್ರಜೆಯಾಗಿರುವ ತನ್ನ ತಾಯಿ ಸೋನಿಯಾ ರಜ್ದಾನ್ ಅವರ ಕಾರಣದಿಂದ ಬ್ರಿಟಿಷ್ ಪೌರತ್ವವನ್ನು ಹೊಂದಿದ್ದಾರೆ. ಆದರೆ, ಆಲಿಯಾ ಭಟ್ ತಂದೆ ಮಹೇಶ್ ಭಟ್ ಭಾರತೀಯ ಪ್ರಜೆ.
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್, ಬಾಲಿವುಡ್‌ಗೆ ಕಾಲಿಡುವ ಮೊದಲು ಶ್ರೀಲಂಕಾದ ಸೂಪರ್‌ಸ್ಟಾರ್ ಆಗಿದ್ದರು. ಶ್ರೀಲಂಕಾದಲ್ಲಿ ಜನಿಸಿಸ ಅವರು ಅಲ್ಲಿಯೇ ಮಾಡೆಲ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2006 ರ ಮಿಸ್ ಯೂನಿವರ್ಸ್ ಶ್ರೀಲಂಕಾವನ್ನು ಗೆದ್ದ ಜಾಕ್ವೆಲಿನ್ ಫರ್ನಾಂಡಿಸ್, 2009 ರಲ್ಲಿ ಬಾಲಿವುಡ್ ಪ್ರವೇಶಿಸಿದರು. ಆದರೆ, ಅವರು ಇನ್ನೂ ಶ್ರೀಲಂಕಾದ ಪ್ರಜೆ.

ಅಕ್ಷಯ್ ಕುಮಾರ್
ಪಂಜಾಬ್‌ನಲ್ಲಿ ಜನಿಸಿದ ನಟ ಅಕ್ಷಯ್ ಕುಮಾರ್, ದೇಶದ ಅತಿ ಹೆಚ್ಚು ತೆರಿಗೆದಾರರಲ್ಲಿ ಒಬ್ಬರಾಗಿದ್ದಾರೆ. ಕೆನಡಾದ ಪೌರತ್ವ ಹೊಂದಿದ್ದ ಅವರು, ಈಗ ಮತ್ತೆ ಭಾರತೀಯ ಪೌರತ್ವ ಪಡೆದಿದ್ದಾರೆ. ಸ್ವಾತಂತ್ರ್ಯ ದಿನದಂದು ತಮಗೆ ಭಾರತೀಯ ಪೌರತ್ವ ದೊರೆತಿರುವ ಬಗ್ಗೆ ಘೋಷಿಸಿದ್ದಾರೆ. ಇನ್ನು, ಹೃದಯ ಮತ್ತು ಪೌರತ್ವ ಎರಡೂ ಹಿಂದೂಸ್ಥಾನಿ ಎಂದು ಖುಷಿ ಹಂಚಿಕೊಂಡಿದ್ದಾರೆ.
ನರ್ಗೀಸ್ ಫಕ್ರಿ
ನರ್ಗೀಸ್ ಫಕ್ರಿ ಪೋಷಕರು ಇಬ್ಬರೂ ಪಾಕಿಸ್ತಾನದವರು. ಆದರೆ ಅವರ ಮೂಲ ಜೆಕ್. ನಟಿ ನರ್ಗೀಸ್ ಫಕ್ರಿ ಹುಟ್ಟಿದ್ದು ಅಮೆರಿಕಾದಲ್ಲಿ. ಕಳೆದ ದಶಕದಿಂದ ಬಾಲಿವುಡ್ ಭಾಗವಾಗಿರುವ ನರ್ಗೀಸ್ ಫಕ್ರಿ ಅಮೆರಿಕಾದ ಪೌರತ್ವವನ್ನು ಹೊಂದಿದ್ದಾರೆ.

ಕತ್ರಿನಾ ಕೈಫ್
ಹಾಂಗ್ ಕಾಂಗ್‌ನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಕತ್ರಿನಾ ಕೈಫ್ ತಂದೆ ಉದ್ಯಮಿ. ಅವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದರು. ಆದರೆ, ಇವರು ಕಾಶ್ಮೀರಿ ಮೂಲದವರು ಮತ್ತು ಅವರ ತಾಯಿ ಬ್ರಿಟಿಷ್ ನ್ಯಾಯಾಲಯದಲ್ಲಿ ವಕೀಲರಾಗಿದ್ದರು. ಹೋಗಾಗಿ ಕತ್ರಿನಾ ಕೈಫ್ ಬ್ರಿಟನ್ ಪೌರತ್ವ ಪಡೆದಿದ್ದಾರೆ.
ಸನ್ನಿ ಲಿಯೋನ್
ಸನ್ನಿ ಲಿಯೋನ್ ಎಂದು ಪ್ರಸಿದ್ಧರಾಗಿರುವ ಕರಂಜಿತ್ ಕೌರ್ ಫೋಷಕರು ಕೆನಡಾ ಮತ್ತು ಅಮೆರಿಕನ್ ಪೌರತ್ವ ಹೊಂದಿದ್ದರು. ಸನ್ನಿ ಲಿಯೋನ್ ಮಾಡೆಲಿಂಗ್ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಯಶಸ್ವಿ ವೃತ್ತಿಜೀವನವನ್ನು ಹೊಂದಿದ್ದು, ಬಾಲಿವುಡ್‌ನಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆದರೂ, ಅವರು ಇನ್ನೂ ತನ್ನ ಕೆನಡಾದ ಪೌರತ್ವ ಮತ್ತು ಪಾಸ್‌ಪೋರ್ಟ್ ಅನ್ನು ಉಳಿಸಿಕೊಂಡಿದ್ದಾರೆ.
ಆಮಿ ಜಾಕ್ಸನ್
ಆಮಿ ಜಾಕ್ಸನ್ ಭಾರತೀಯ ಮಾಡೆಲ್ ಆಗಿದ್ದು, ಬಾಲಿವುಡ್ ಸೇರಿ ದಕ್ಷಿಣ ಭಾರತದ ಸಿನಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಮತ್ತು ರಜನಿಕಾಂತ್ ಅವರಂತಹ ಸೂಪರ್‌ಸ್ಟಾರ್‌ಗಳ ಜೊತೆಗೆ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಬ್ರಿಟನ್‌ನ ಲಿವರ್‌ಪೂಲ್‌ನಲ್ಲಿ ಜನಿಸಿದ್ದರಯ, ಈಗಲೂ ಬ್ರಿಟಿಷ್ ಪ್ರಜೆಯಾಗಿದ್ದು ಯುಕೆ ಪಾಸ್‌ಪೋರ್ಟ್ ಹೊಂದಿದ್ದಾರೆ.
ಹೆಲೆನ್
ಬಾಲಿವುಡ್‌ನ ಸುವರ್ಣ ಯುಗದ ನಟಿ ಹೆಲೆನ್ ಬರ್ಮಾ ದೇಶದಲ್ಲಿ ಹುಟ್ಟಿ ಬೆಳೆದು, ಆ ದೇಶದ ಡೀಫಾಲ್ಟ್ ಪ್ರಜೆ. ಬಾಲಿವುಡ್‌ನಲ್ಲಿ ದೀರ್ಘಕಾಲ ಕೆಲಸ ಮಾಡಿದ ನಂತರ ಮತ್ತು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರನ್ನು ಮದುವೆಯಾದ ನಂತರ ಅವರು ಭಾರತೀಯ ಪೌರತ್ವವನ್ನು ಪಡೆದಿದ್ದರು.

ನೋರಾ ಫತೇಹಿ
ಬಾಲಿವುಡ್‌ನಲ್ಲಿ ಇತ್ತೀಚೆಗೆ ವಿಶೇಷ ಗೀತೆಗಳಿಗೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟ ನೋರಾ ಫತೇಹಿ ಕಳೆದ ಅರ್ಧ ದಶಕದಿಂದ ತಮ್ಮ ನೃತ್ಯ ಕೌಶಲ್ಯದಿಂದ ದೊಡ್ಡ ಪರದೆಯ ಕಾಣಿಸಿಕೊಂಡಿದ್ದಾರೆ. ಅವರು ಕೆನಡಾ ದೇಶದಲ್ಲಿ ಹುಟ್ಟಿ ಬೆಳೆದಿದ್ದು, ಕೆನಡಾದ ಪಾಸ್‌ಪೋರ್ಟ್ ಹೊಂದಿದ್ದಾರೆ. ನೋರಾ ಫತೇಹಿ ಪೂರ್ವಜರು ಮೊರಾಕೊ ದೇಶದವರು.
ಸಪ್ನಾ ಪಬ್ಬಿ
'ಖಾಮೋಶಿಯಾನ್' ಚಿತ್ರದಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ಸಪ್ನಾ ಪಬ್ಬಿ ಬ್ರಿಟಿಷ್ ಮೂಲದವರಾಗಿದ್ದು, ಲಂಡನ್‌ನಲ್ಲಿ ಹುಟ್ಟಿ ಬೆಳೆದಿದ್ದಾರೆ. ಸಿನಿಮಾಗಳು ಮತ್ತು ವೆಬ್ ಸರಣಿಗಳಲ್ಲಿ ನಟಿಸುತ್ತಿರುವ ಅವರು ಇನ್ನೂ ಬ್ರಿಟಿಷ್ ಪ್ರಜೆ.
ಕಲ್ಕಿ ಕೋಚ್ಲಿನ್
ಭಾರತದಲ್ಲಿನ ಪುದುಚೇರಿ ನಗರದಲ್ಲಿ ಹುಟ್ಟಿ ತನ್ನ ಬಾಲ್ಯವನ್ನು ಅಲ್ಲಿಯೇ ಕಳೆದಿದ್ದರೂ, ಕಲ್ಕಿ ಫ್ರೆಂಚ್ ಮೂಲದ ಕುಟುಂಬದವರು. ಹೀಗಾಗಿ ಅವರು ಇನ್ನು ತಮ್ಮ ಫ್ರೆಂಚ್ ಪೌರತ್ವ ಉಳಿಸಿಕೊಂಡಿದ್ದಾರೆ. '


Click it and Unblock the Notifications











