ಕರೀನಾ ಮದುವೆಗೆ 15 ಬಗೆಯ ಜೈಪುರ್ ಪಾನ್

By Rajendra

ಬಾಲಿವುಡ್ ತಾರೆ ಕರೀನಾ ಕಪೂರ್ ಹಾಗೂ ಸೈಫ್ ಆಲಿ ಖಾನ್ ಮದುವೆಗೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಇದೇ ಅಕ್ಟೋಬರ್ ತಿಂಗಳಲ್ಲಿ ಇಬ್ಬರ ಮದುವೆ ನೆರವೇರುತ್ತಿದೆ. ಇದಕ್ಕಾಗಿ 15 ಬಗೆಯ ಪಾನ್ ಗಳನ್ನು ಜೈಪುರದಿಂದ ಆರ್ಡರ್ ನೀಡಲಾಗಿದೆ.

ಪಾನ್ ಲಡ್ಡು, ಡ್ರೈಫ್ರೂಟ್ ಪಾನ್ ಲಡ್ಡು, ಅನು ಕಿ ಪೊಟ್ಲಿ, ಬಟರ್ ಸ್ಕಾಚ್, ವೆನಿಲ್ಲಾ, ಚಾಕೋಲೇಟ್ ಸ್ವಾದಗಳ ಪಾನ್ ಗಳಿಗೆ ಆರ್ಡರ್ ನೀಡಲಾಗಿದೆ ಎಂದು ಜೈಪುರದ ಪಾನ್ ತಯಾರಕರಾದ ಅನು ದಾಸ್ವಾನಿ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

ಮದುವೆಗೆ ಆಗಮಿಸುವ ಅತಿಥಿಗಳಿಗೆ ನೀಡುವ ತಾಂಬೂಲವೇ ಇಷ್ಟೊಂದು ವೈವಿಧ್ಯಭರಿತವಾಗಿದ್ದರೆ ಇನ್ನು ವಿವಾಹ ಭೋಜನ ಹೇಗಿರುತ್ತದೋ ಏನೋ? ಎಂದು ಬಾಲಿವುಡ್ ಮಂದಿ ಆಗಲೇ ಬಾಯಿಚಪ್ಪರಿಸುತ್ತಿದ್ದಾರೆ.

ಮದುವೆಗೆ ಆಗಮಿಸುವ ಅತಿಥಿಗಳು ಮ್ಯಾಂಗೋ, ಆರೆಂಜ್, ಚಂದನ್ ಸೇರಿದಂತೆ ತಮಗಿಷ್ಟವಾದ ಸ್ವಾದಿಷ್ಟದ ಪಾನ್ ಆಯ್ಕೆ ಮಾಡಿಕೊಂಡು ಮೆಲ್ಲಬಹುದು. ಪಟೌಡಿ ಹಾಗೂ ಮುಂಬೈನಲ್ಲಿ ನಡೆಯಲಿರುವ ಎರಡೂ ಸಮಾರಂಭಗಳಲ್ಲೂ ಇದೇ ರೀತಿಯ ಪಾನ್ ಆತಿಥ್ಯ ನೀಡಲಾಗುತ್ತದೆ ಎನ್ನುತ್ತವೆ ಮೂಲಗಳು.

ಆದರೆ ಕರೀನಾ ಕಪೂರ್ ಹಾಗೂ ಸೈಫ್ ಮದುವೆ ದಿನಾಂಕ ಮಾತ್ರ ಇನ್ನೂ ಗುಟ್ಟಾಗಿ ಇಡಲಾಗಿದೆ. "ಮದುವೆಗೆ ಎರಡು ದಿನಗಳ ಮುಂಚೆ ನಾವು ತಿಳಿಸುತ್ತೇನೆ. ಆಗ ಪಾನ್ ಗಳನ್ನು ತಂದುಕೊಡಿ ಎಂದು ಕರೀನಾ ಹಾಗೂ ಸೈಫ್ ಕಡೆಯವರು ಪಾನ್ ತಯಾರಕರಿಗೆ ತಿಳಿಸಿದ್ದಾರಂತೆ. ಹಾಗಾಗಿ ಅವರು ಇನ್ನೂ ಮದುವೆ ದಿನಾಂಕ ತಿಳಿಸಿಲ್ಲ ಎಂದಿದ್ದಾರೆ.

ಈ ಹಿಂದೆ ಅನು ದಾಸ್ವಾನಿ ಅವರು ಬಾಲಿವುಡ್ ತಾರೆಗಳಾದ ಶಿಲ್ಪಾ ಶೆಟ್ಟಿ, ಸಂಜಯ್ ದತ್, ಅಭಿಷೇಕ್ ಬಚ್ಚನ್, ಬಾಬ್ಬಿ ಡಿಯೋಲ್ ಮದುವೆಗಳಿಗೆ ಪಾನ್ ಸರಬರಾಜು ಮಾಡಿದ್ದರು. ಈಗ ಕರೀನಾ ಮದುವೆಗೂ ತರಹೇವಾರಿ ಪಾನ್ ತಯಾರಿಸಿಕೊಡಲಿದ್ದಾರೆ ಅನು ದಾಸ್ವಾನಿ. (ಏಜೆನ್ಸೀಸ್)

More from Filmibeat

English summary
Saif Ali Khan and Kareena Kapoor will tie the knot this October. It has been revealed that for Saifeena's wedding more than fifteen varieties of paans from Jaipur which would be served to the guests at the entrance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X