For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ ಆರ್ಯನ್ ಜೊತೆ ನಟಿ ಶ್ರೀದೇವಿ ಮಗಳ ರೋಮ್ಯಾನ್ಸ್

  |

  ಬಾಲಿವುಡ್ ನ ಎವರ್ ಗ್ರೀನ್ ನಟಿ ಶ್ರೀದೇವಿ ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್, ಇತ್ತೀಚಿನ ದಿನಗಳಲ್ಲಿ ಪದೆ ಪದೆ ಸುದ್ದಿಯಾಗುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಆಕೆ ಧರಿಸುವ ಕಾಸ್ಟ್ಯೂಮ್ ಅಭಿಮಾನಿಗಳ ಕಣ್ಣುಕುಕ್ಕುತ್ತಿದೆ. ಮೊದಲ ಚಿತ್ರದಲ್ಲಿ ಸ್ವಲ್ಪ ದಪ್ಪ ಇದ್ದ ಜಾಹ್ನವಿ ಈಗ ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಬಳಕುವ ಬಳ್ಳಿ ಆಗಿರುವ ಜಾಹ್ನವಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

  ತುಂಡುಡುಗೆ ತೊಟ್ಟು ಜಿಮ್ ಗೆ ಹೋಗುವ ಜಾಹ್ನವಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಇದರ ನಡುವೆ ಈಗ ಜಾಹ್ನವಿ ಕಡೆಯಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಅಂದ್ರೆ ಜಾಹ್ನವಿ ಲವ್ ಲ್ಲಿ ಬಿದ್ರಾ, ಎಂದು ಶಾಕ್ ಆಗಬೇಡಿ. ಜಾಹ್ನವಿ ಹೊಸ ಸಿನಿಮಾ ಅನೌನ್ಸ್ ಆಗಿದೆ.

  ಅಂದು ಶ್ರೀದೇವಿ ಮಾಡಿದ ತಪ್ಪನ್ನೇ ಈಗ ಮಗಳು ಮಾಡಿದ್ಲು.!

  ಜಾಹ್ನವಿ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಸಿನಿಮಾದಲ್ಲಿ ಜಾಹ್ನವಿ ಮತ್ತು ಕಾರ್ತಿಕ್ ಇಬ್ಬರು ತೆರೆಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ. ಅಂದ್ಹಾಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ದೋಸ್ತಾನ ಪಾರ್ಟ್-2 ಚಿತ್ರದಲ್ಲಿ.

  2008ರಲ್ಲಿ ತೆರೆಗೆ ಬಂದಿದ್ದ 'ದೋಸ್ತಾನ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕರಣ್ ಜೋಹರ್ ನಿರ್ಮಾಣದಲ್ಲಿ ಸಿನಿಮಾ ಮೂಡಿ ಬಂದಿತ್ತು. ಚಿತ್ರಕ್ಕೆ ತರುಣ್ ಮನ್ಸುಖಾನಿ ಆಕ್ಷನ್ ಕಟ್ ಹೇಳಿದ್ರು. ಆದ್ರೀಗ 'ದೋಸ್ತಾನ-2' ಚಿತ್ರಕ್ಕೆ ಕಾಲಿನ್ ಡಿ ಸಿನ್ಹ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ದೋಸ್ತಾನ' ಮೊದಲ ಭಾಗದಲ್ಲಿ ಜಾನ್ ಅಬ್ರಾಹಾಂ, ಅಭಿಷೇಕ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರ ಕಾಣಿಸಿಕೊಂಡಿದ್ದರು. ಪ್ರಿಯಾಂಕಾ ಜಾಗದಲ್ಲೀಗ ಜಾಹ್ನವಿ ಕಪೂರ್ ಇದ್ದಾರೆ. ಸದ್ಯ ಕಾರ್ತಿಕ್ ಆರ್ಯನ್ ಒಬ್ಬರು ಆಯ್ಕೆ ಆಗಿದ್ದಾರೆ ಇನ್ನೋರ್ವ ನಟನಿಗಾಗಿ ಹುಡುಕಾ ಮಾಡುತ್ತಿದೆ ಚಿತ್ರತಂಡ.

  English summary
  Bollywood actress Janhvi Kapoor and karthik Aryan are teaming up for the film of Dostana-2. This movie is produced by Karan Johar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X