Janhvi Kapoor: ಅವರ್ ಬಿಟ್, ಇವರ್ ಬಿಟ್ಟು ವರುಣ್ ಧವನ್ ಹಿಂದೆ ನಡೆದ ಜಾನ್ಹವಿ ಕಪೂರ್!

ಬಾಲಿವುಡ್‌ನಲ್ಲಿ ನಾಯಕಿ ಆಗಿ ಅದೃಷ್ಟ ಪರೀಕ್ಷೆಗಿಳಿದು, ದೊಡ್ಡ ಸಕ್ಸಸ್‌ಗಾಗಿ ಕನಸು ಕಾಣುತ್ತಿದ್ದಾರೆ ನಟಿ ಜಾನ್ಹವಿ ಕಪೂರ್. ಜಾನ್ಹವಿ ಕಪೂರ್ ಮೊದಲಿನಿಂದಲೂ ಅಂದುಕೊಂಡ ಮಟ್ಟಿಗೆ ಅಷ್ಟೇನು ಸದ್ದು ಮಾಡಲಿಲ್ಲ. ಈಕೆ ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಎನ್ನುವ ಕಾರಣಕ್ಕೆ ಈಕೆಯ ಎಂಟ್ರಿ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. 2018ರಲ್ಲಿ ಈ ಚೆಲುವೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಳು.

ಮೊದಲ ಚಿತ್ರ 'ಧಡಕ್'ನಲ್ಲಿ ನಾಯಕಿ ಆಗಿ ಗಮನ ಸೆಳೆದರು. ಆದರೆ ತನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲ ಆಗಲಿಲ್ಲ. ಆ ಬಳಿಕಾ ಜಾನ್ಹವಿ ಮಾಡಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಅಂತ ಅನಿಸಿಕೊಂಡಿಲ್ಲ. ಹಾಗಾಗಿ ಆಕೆಯ ಅಭಿಮಾನಿಗಳು ಜಾನ್ಹವಿಯನ್ನು ಸೂಪರ್ ಹಿಟ್ ಚಿತ್ರದಲ್ಲಿ ನೋಡಬೇಕು ಎಂದು ಕಾಯುತ್ತಿದ್ದಾರೆ.

ಈಗ ಜಾನ್ಹವಿ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಜಾನ್ಹವಿ ಕಪೂರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಜಾನ್ಹವಿ ಕಪೂರ್ ಮುಂದಿನ ಚಿತ್ರದಲ್ಲಿ ನಟ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಜಾಹ್ನವಿ ಮುಂದಿನ ಚಿತ್ರಕ್ಕೆ ನಾಯಕ ಯಾರು ಎನ್ನುವ ಕುತೂಹಲಕ್ಕೀಗ ತೆರೆ ಬಿದ್ದಿದೆ.

ಜಾನ್ಹವಿ ಕಪೂರ್ ಮುಂದಿನ ಚಿತ್ರ 'ಬವಾಲ್'!

ಜಾನ್ಹವಿ ಕಪೂರ್ ಮುಂದಿನ ಚಿತ್ರ 'ಬವಾಲ್'!

ನಟಿ ಜಾನ್ಹವಿ ಕಪೂರ್ ಮುಂದಿನ ಸಿನಿಮಾ 'ಬವಾಲ್'. ಸದ್ಯ ಚಿತ್ರದ ಟೈಟಲ್ ಜೊತೆಗೆ ಪೋಸ್ಟರ್ ಕೂಡ ರಿಲೀಸ್ ಮಾಡಿದೆ ಚಿತ್ರತಂಡ. 'ಬವಾಲ್' ಎಂದರೆ 'ಗದ್ದಲ' ಎಂದರ್ಥ. ಹಾಗಾಗಿ ಈ ಚಿತ್ರ ಕೇವಲ ಮರ ಸುತ್ತುವ ಲವ್ ಸ್ಟೋರಿ ಆಗಿರುವುದಿಲ್ಲ. ಬದಲಿಗೆ ಹೋರಾಟ ಹಾಗೂ ನೈಜ ಘಟನೆಯನ್ನು ಆಧರಿಸಿದೆ ಎನ್ನುವ ಸುಳಿವು ಕೊಟ್ಟಿದೆ. ಜಾನ್ಹವಿ ಈ ಚಿತ್ರದಲ್ಲಿ ತನ್ನ ಗ್ಲಾಮರ್ ಲುಕ್ ಬಿಟ್ಟು ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ.

ಟ್ವೀಟ್ ಮಾಡಿ ಸಂತಸ ಹಂಚಿಕೊಂಡ ಜಾನ್ಹವಿ!

ಚಿತ್ರತಂಡ ಈ ಹೊಸ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಟ್ವೀಟ್ ಮಾಡುವ ಮೂಲಕ ಟೈಟಲ್ ಮತ್ತು ಪಾತ್ರವರ್ಗದ ಬಗ್ಗೆ ಮಾಹಿತಿ ನೀಡಿದೆ. ಚಿತ್ರದ ಬಗ್ಗೆ ಪೋಸ್ಟ್ ಹಂಚಿಕೊಂಡ ನಟಿ ಜಾನ್ಹವಿ. "ನನ್ನ ಮುಂದಿನ ಚಿತ್ರ 'ಬವಾಲ್' ಎಂದು ಹೇಳಿಕೊಳ್ಳಲು ಬಹಳ ಸಂತಸ ಆಗುತ್ತಿದೆ. ವರುಣ್ ಧವನ್ ಜೊತೆಗೆ ಅಭಿನಯಿಸುತ್ತಾ ಇದ್ದೇನೆ." ಎಂದು ಬರೆದುಕೊಂಡಿದ್ದಾರೆ. ನಟ ವರಣ್ ಭವನ್ ಕೂಡ ಟ್ವೀಟ್ ಮಾಡಿ "ನನ್ನ ಮುಂದಿನ ಚಿತ್ರ 'ಬವಾಲ್' ಎಂದು ಹೇಳಿಕೊಳ್ಳಲು ಹೆಮ್ಮೆ ಮತ್ತು ಉತ್ಸುಕನಾಗಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

ನಿತೇಶ್ ತಿವಾರಿ ಕಥೆಯಲ್ಲಿ ಜಾನ್ಹವಿ ಕಪೂರ್!

ಬಾಲಿವುಡ್‌ನ ಭರವಸೆಯ ನಿರ್ದೇಶಕರಲ್ಲಿ ಒಬ್ಬರಾದ, ರಾಷ್ಟ್ರ ಪ್ರಶಸ್ತಿ ಪಡೆದ ನಿತೇಶ್ ತಿವಾರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. 'ದಂಗಲ್', 'ಚಿಚೋರೆ' ಸೇರಿದಂತೆ ಹಲವು ಚಿತ್ರಗಳಿಗೆ ಇವರ ನಿರ್ದೇಶನವಿದೆ. ಚಿತ್ರಕ್ಕೆ ಸಾಜಿದ್ ನಾಡಿಯಾದ್ವಾಲ ಬಂಡವಾಳ ಹಾಕುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್ ಜೊತೆಗೆ ರಿಲೀಸ್ ಡೇಟ್‌ ಅನ್ನೂ ಪ್ರಕಟ ಮಾಡಲಾಗಿದೆ. 2023 ಏಪ್ರಿಲ್ 7ಕ್ಕೆ ಚಿತ್ರದ ರಿಲೀಸ್ ಮಾಡಲಿದೆ ಚಿತ್ರತಂಡ.

ವರುಣ್ ಧವನ್ ಜೊತೆಗೆ ಜಾನ್ಹವಿ ಜೋಡಿ!

ವರುಣ್ ಧವನ್ ಜೊತೆಗೆ ಜಾನ್ಹವಿ ಜೋಡಿ!

ಅಷ್ಟಕ್ಕೂ ಜಾನ್ಹವಿ ಕಪೂರ್ ಮುಂದಿನ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಇತ್ತು. ಇತ್ತೀಚೆಗೆ ಜಾನ್ಹವಿ ಸೌತ್ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿತು. ಜೂ.ಎನ್‌ಟಿಆರ್ ಮುಂದಿನ ಚಿತ್ರಕ್ಕೆ ಜಾನ್ಹವಿ ಕಪೂರ್ ನಾಯಕಿ ಎನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ವಿಜಯ್ ದೇವರಕೊಂಡ ಅಭಿನಯ ಚಿತ್ರಕ್ಕೂ ಜಾನ್ಹವಿ ಹೆಸರು ಕೇಳಿ ಬಂದಿತ್ತು. ಇದಕ್ಕೂ ಮುನ್ನ 'RRR' ಚಿತ್ರದಲ್ಲಿ ಆಲಿಯಾ ಮಾಡಿದ್ದ ಪಾತ್ರಕ್ಕೆ ಮೊದಲು ಜಾಹ್ನವಿಗೆ ಆಫರ್ ಹೋಗಿತ್ತು. ಆದರೆ ಜಾನ್ಹವಿ ಕಪೂರ್ ಈಗ ಬಾಲಿವುಡ್‌ನಲ್ಲಿ ನಟ ವರುಣ್ ಧವನ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ.

More from Filmibeat

English summary
Janhvi Kapoor And Varun Dhawan Upcomming Movie Announced Title Is Bawaal, KNow More About The Team
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X