ಎಚ್‌ಪಿವಿ ಬಗ್ಗೆ ಜಾಗೃತಿ ಮೂಡಿಸಲು ಸ್ಟಾಂಡಪ್ ಕಾಮಿಡಿಯನ್ ಆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

By ಫಿಲ್ಮಿಬೀಟ್ ಡೆಸ್ಕ್

ನಾಳೆ (ಮಾರ್ಚ್ 4) ಅಂತರಾಷ್ಟ್ರೀಯ ಎಚ್‌ಪಿವಿ ಜಾಗೃತಿ ದಿನ. ಹೀಗಾಗಿ ಬಾಲಿವುಡ್‌ನ ಜನಪ್ರಿಯ ನಟಿ ಜಾಹ್ನವಿ ಕಪೂರ್ ಈ ಎಚ್‌ಪಿವಿ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಮುಂದಾಗಿದ್ದಾರೆ. ವಿಶಿಷ್ಟವಾಗಿ ಜಾಗೃತಿ ಮೂಡಿಸುವ ಸಲುವಾಗ ಶ್ರೀದೇವಿ ಪುತ್ರಿ ಇದೇ ಮೊದಲ ಬಾರಿಗೆ ಸ್ಟಾಂಡಪ್ ಕಾಮಿಡಿಯನ್ ಆಗಿ ಜನರಲ್ಲಿ ಅರಿವು ಮೂಡಿಸಿಲು ಹೊರಟಿದ್ದಾರೆ.

ಅಂತರಾಷ್ಟ್ರೀಯ ಎಚ್‌ಪಿವಿ ಜಾಗೃತಿ ದಿನದಂದು ಈ ಕಾರ್ಯಕ್ರಮಕ್ಕೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೈ ಜೋಡಿಸಿದೆ. ಈ ಮೂಲಕ 'ಐ ಪ್ಲೆಡ್ಜ್‌ ಟು ಪ್ರಿವೆಂಟ್' ಅನ್ನುವ ಹೆಸರಿನಲ್ಲಿ ಜಾಗೃತಿ ಮೂಡಿಸಲು ಮುಂದೆ ಬಂದಿದೆ. ಈ ಕಾರ್ಯಕ್ರಮದ ಅಂಗವಾಗಿ ಜಾಹ್ನವಿ ಕಪೂರ್ ಇದೇ ಮೊದಲ ಬಾರಿಗೆ ಸ್ಟಾಂಡಲ್ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ. 'ಲೀಪ್, ಲಾಫ್‌ & ಲರ್ನ್‌' ಕಾರ್ಯಕ್ರಮದ ಮೂಲಕ ಜನರಲ್ಲಿ ಅರಿವು ಮೂಡಿಸುವುದಕ್ಕೆ ಮುಂದಾಗಿದ್ದಾರೆ.

Janhvi Kapoor became a stand-up comedian

ಎಚ್‌ಪಿವಿ ಹಾಗೂ ಕ್ಯಾನ್ಸರ್ ಎರಡೂ ಖತರ್ನಾಕ್ ಜೋಡಿ ಎಂದು ಜಾಹ್ನವಿ ಕಪೂರ್ ತಿಳುವಳಿಕೆ ಮೂಡಿಸಿದ್ದಾರೆ. ಇದರ ಜೊತೆ ಗರ್ಭಕಂಠ, ಯೋನಿ, ಗುದ ಮತ್ತು ಬಾಯಿಯ ಕ್ಯಾನ್ಸರ್‌ಗಳು ಎಚ್‌ಪಿವಿ ಕಾರಣದಿಂದಲೇ ಬರುತ್ತವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, "ಎಚ್‌ಪಿವಿ ಮಹಿಳೆಯರಿಗೆ ಮಾತ್ರ ಬರುತ್ತದೆ" ಎಂಬ ಸುಳ್ಳನ್ನು ಅವರು ತೊಡೆದು ಹಾಕಿದ್ದಾರೆ.

ದೇಹಕ್ಕೆ ಎಚ್‌ಪಿವಿ ಸೋಂಕದಂತೆ ರಕ್ಷಿಸಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗೂ ಅವರು ಉತ್ತರ ಕೊಟ್ಟಿದ್ದಾರೆ. ಮೊದಲು ವೈದ್ಯರ ಜೊತೆಗೆ ಮಾತನಾಡಬೇಕು. ಹಾಗೇ 9 ರಿಂದ 26 ವರ್ಷದವರು ಎಚ್‌ಪಿವಿ ಲಸಿಕೆಯನ್ನು ತೆಗೆದುಕೊಳ್ಳುವುದು ಅಷ್ಟೇ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಸ್ಟಾಂಡ್ ಅಪ್ ಸ್ಪೆಷಲ್‌ ಕೊನೆಯ ಹಂತದಲ್ಲಿ ಎಚ್‌ಪಿವಿ ತಡೆಯುವುದಾಗಿ ಪ್ರಮಾಣ ಮಾಡಿ ಎಂದು ಜನರನ್ನು ಹುರಿದುಂಬಿಸಿದ್ದಾರೆ.

"ಒಬ್ಬ ನಟಿಯಾಗಿ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಐ ಪ್ಲೆಡ್ಜ್‌ ಟು ಪ್ರಿವೆಂಟ್ ಅಂತಹ ಕಾರ್ಯಕ್ರಮಗಳು ಸಮಾಜವನ್ನು ಬದಲಾಯಿಸಬಹುದು. ಈಗ ಎಚ್‌ಪಿವಿಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಜೀವವನ್ನೇ ತೆಗೆಯಬಹುದು. ಗರ್ಭಕಂಠದ ಕ್ಯಾನ್ಸರ್‌ಗೆ ಎಡೆ ಮಾಡಿಕೊಡಬಹುದು. ಇಲ್ಲಿವರೆಗೆ ಎಚ್‌ಪಿವಿ ಬಗ್ಗೆ ಹೆಚ್ಚು ಜನರಲ್ಲಿ ಅರಿವಿಲ್ಲದೆ ಇರುವುದರಿಂದ ಈಗ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ" ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.

ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಷ್ಟೇ ಅಲ್ಲ ದಕ್ಷಿಣ ಭಾರತದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಜೂ.ಎನ್‌ಟಿಆರ್ ನಟಿಸುತ್ತಿರುವ 'ದೇವರ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ 'ಮಿಸ್ಟರ್ ಅಂಡ್ ಮಿಸ್ಸಸ್ ಮಾಹಿ', 'ಉಲ್ಜಾ'ದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Janhvi Kapoor became a stand-up comedian to spread awareness about HPV
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X