For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷದ ಪ್ರಯುಕ್ತ ಹೊಸ ಐಷಾರಾಮಿ ಕಾರು ಖರೀದಿಸಿದ ಜಾಹ್ನವಿ ಕಪೂರ್

  |

  ಬಾಲಿವುಡ್ ನ ದಿವಂಗತ ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಪುತ್ರಿ ಜಾಹ್ನವಿ ಕಪೂರ್ ಹೊಸ ಕಾರು ಖರೀದಿಸಿದ್ದಾರೆ. ಬಿಳಿ ಬಣ್ಣದ ಐಷಾರಾಮಿ ಮರ್ಸಿಡೀಸ್ ಬೆಂಜ್ ಕೊಂಡುಕೊಳ್ಳುವ ಮೂಲಕ ಹೊಸ ವರ್ಷ 2020 ಯನ್ನು ಬರಮಾಡಿಕೊಂಡಿದ್ದಾರೆ ನಟಿ ಜಾಹ್ನವಿ ಕಪೂರ್.

  ನಟಿ ಜಾಹ್ನವಿ ಕಪೂರ್ ಬಳಿ ಈಗಾಗಲೇ ಒಂದು ಕಪ್ಪು ಬಣ್ಣದ ಮರ್ಸಿಡೀಸ್ ಇದೆ. ಅದರೊಂದಿಗೆ ಇದೀಗ ಬಿಳಿ ಬಣ್ಣದ ಮರ್ಸಿಡೀಸ್ ಹೈ ಎಂಡ್ ಕಾರು ಖರೀದಿ ಮಾಡಿದ್ದಾರೆ.

  ತಾಯಿ ಶ್ರೀದೇವಿ ನೆನಪಲ್ಲಿ ಹೊಸ ಮರ್ಸಿಡೀಸ್ ಖರೀದಿಸಿದ ಜಾಹ್ನವಿ ಕಪೂರ್ತಾಯಿ ಶ್ರೀದೇವಿ ನೆನಪಲ್ಲಿ ಹೊಸ ಮರ್ಸಿಡೀಸ್ ಖರೀದಿಸಿದ ಜಾಹ್ನವಿ ಕಪೂರ್

  ಹಳದಿ ಮತ್ತು ಬಿಳಿ ಬಣ್ಣದ ಸಲ್ವಾರ್ ತೊಟ್ಟಿದ್ದ ಜಾಹ್ನವಿ ಕಪೂರ್, ತಮ್ಮ ಹೊಸ ಕಾರಿನ ಜೊತೆಗೆ ನಿಂತು ಪೋಸ್ ನೀಡಿದ್ದಾರೆ. ಹೊಸ ಮರ್ಸಿಡೀಸ್ ನಲ್ಲಿ ಸಹೋದರಿ ಖುಷಿ ಕಪೂರ್ ಜೊತೆಗೆ ಒಂದು ರೌಂಡ್ ಹೋಗಿ ಬಂದು ಸಂತಸ ಪಟ್ಟಿದ್ದಾರೆ ಜಾಹ್ನವಿ ಕಪೂರ್.

  ಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  ಇನ್ನೂ ಸಿನಿಮಾ ವಿಷಯಕ್ಕೆ ಬರುವುದಾದರೆ, ಜಾಹ್ನವಿ ಕಪೂರ್ ಕೈಯಲ್ಲಿ 'ತಖ್ತ್' ಮತ್ತು 'ದೋಸ್ತಾನಾ-2' ಚಿತ್ರಗಳಿವೆ. ಜೊತೆಗೆ ಐ.ಎ.ಎಫ್ ಪೈಲಟ್ ಗುಂಜನ್ ಸಕ್ಸೇನಾ ಜೀವನ ಚರಿತ್ರೆ ಆಧಾರಿತ 'ಗುಂಜನ್ ಸಕ್ಸೇನಾ-ದಿ ಕಾರ್ಗಿಲ್ ಗರ್ಲ್' ಚಿತ್ರದಲ್ಲಿ ಜಾಹ್ನವಿ ಕಪೂರ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.

  English summary
  Bollywood Actress Janhvi Kapoor buys brand new high end Mercedes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X