ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

By Harshitha

ದೇವರು ಎಲ್ಲ ಕಡೆ ಇರಲು ಆಗಲ್ಲ ಅಂತ ತಾಯಂದಿರನ್ನು ಸೃಷ್ಟಿಸಿದ ಎಂಬ ಮಾತಿದೆ. ಮಕ್ಕಳಿಗೆ ತಾಯಿಯೇ ದೈವ, ಸರ್ವಸ್ವ.

ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ಯಾಕಂದ್ರೆ 'ಅಮ್ಮ' ಎಂಬ ಪದದಲ್ಲಿ ಅಡಗಿರುವ ಅಪಾರ ಪ್ರೀತಿ ಅಂಥದ್ದು.

ಅಂದ್ಹಾಗೆ, ನಿನ್ನೆ ವಿಶ್ವ ತಾಯಂದಿರ ದಿನಾಚರಣೆ. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಾಕಿ-ಸಲಹುವ ಅಮ್ಮಂದಿರಿಗೆ ನಮನ ಸಲ್ಲಿಸುವ ದಿನ 'ಮದರ್ಸ್ ಡೇ'. ಈ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ತಾಯಂದಿರಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ತಮ್ಮ ತಾಯಿ ಮೇಲೆ ತಾವಿಟ್ಟಿರುವ ಅಗಾಧ ಪ್ರೀತಿಯನ್ನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ತಾರೆಯರು ಹಂಚಿಕೊಂಡಿದ್ದಾರೆ.

janhvi-kapoor-celebrates-mother-s-day-with-the-memories-of-sridevi

ಇಂತಹ ತಾಯಂದಿರ ದಿನದಂದು 'ಅಮ್ಮ'ನ ನೆನಪಿನಲ್ಲಿ ಕಳೆದಿದ್ದಾರೆ ನಟಿ ಜಾಹ್ನವಿ ಕಪೂರ್. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಜಾಹ್ನವಿ ಕಪೂರ್ 'ಮದರ್ಸ್ ಡೇ' ಅಂದು ಅಮ್ಮ ಶ್ರೀದೇವಿಯನ್ನು ಬಹಳ ಮಿಸ್ ಮಾಡಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬಾಲ್ಯದ ಫೋಟೋ ಒಂದನ್ನು ಶೇರ್ ಮಾಡಿ, ಬಾಲ್ಯದಲ್ಲಿ ಅಮ್ಮನೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ ಜಾಹ್ನವಿ ಕಪೂರ್.

ಶ್ರೀದೇವಿ ಪುತ್ರಿಯ ನೋವನ್ನು ಅರ್ಥೈಸಿಕೊಂಡ ನೆಟ್ಟಿಗರು ಇನ್ಸ್ಟಾಗ್ರಾಮ್ ನಲ್ಲಿ ಜಾಹ್ನವಿಗೆ ಧೈರ್ಯ ತುಂಬಿದ್ದಾರೆ.

More from Filmibeat

English summary
Janhvi Kapoor celebrates Mother's day with the memories of Sridevi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X