twitter
    For Quick Alerts
    ALLOW NOTIFICATIONS  
    For Daily Alerts

    ಅಮ್ಮನ ನೆನಪಲ್ಲಿ ತಾಯಂದಿರ ದಿನ ಕಳೆದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್

    By Harshitha
    |

    ದೇವರು ಎಲ್ಲ ಕಡೆ ಇರಲು ಆಗಲ್ಲ ಅಂತ ತಾಯಂದಿರನ್ನು ಸೃಷ್ಟಿಸಿದ ಎಂಬ ಮಾತಿದೆ. ಮಕ್ಕಳಿಗೆ ತಾಯಿಯೇ ದೈವ, ಸರ್ವಸ್ವ.

    ಅಮ್ಮನ ಬಗ್ಗೆ ಎಷ್ಟು ಹೇಳಿದರೂ ಕಮ್ಮಿಯೇ, ಯಾಕಂದ್ರೆ 'ಅಮ್ಮ' ಎಂಬ ಪದದಲ್ಲಿ ಅಡಗಿರುವ ಅಪಾರ ಪ್ರೀತಿ ಅಂಥದ್ದು.

    ಅಂದ್ಹಾಗೆ, ನಿನ್ನೆ ವಿಶ್ವ ತಾಯಂದಿರ ದಿನಾಚರಣೆ. ಒಂಬತ್ತು ತಿಂಗಳು ಹೊತ್ತು-ಹೆತ್ತು ಸಾಕಿ-ಸಲಹುವ ಅಮ್ಮಂದಿರಿಗೆ ನಮನ ಸಲ್ಲಿಸುವ ದಿನ 'ಮದರ್ಸ್ ಡೇ'. ಈ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ತಮ್ಮ ತಾಯಂದಿರಿಗೆ ಹ್ಯಾಟ್ಸ್ ಆಫ್ ಹೇಳಿದ್ದಾರೆ. ತಮ್ಮ ತಾಯಿ ಮೇಲೆ ತಾವಿಟ್ಟಿರುವ ಅಗಾಧ ಪ್ರೀತಿಯನ್ನ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ನಲ್ಲಿ ತಾರೆಯರು ಹಂಚಿಕೊಂಡಿದ್ದಾರೆ.

    janhvi-kapoor-celebrates-mother-s-day-with-the-memories-of-sridevi

    'ಅಮ್ಮನ' ಆರಾಧನೆಗಾಗಿ ಈ 12 ಹಾಡುಗಳನ್ನ ಮಿಸ್ ಮಾಡದೆ ಕೇಳಿ.! 'ಅಮ್ಮನ' ಆರಾಧನೆಗಾಗಿ ಈ 12 ಹಾಡುಗಳನ್ನ ಮಿಸ್ ಮಾಡದೆ ಕೇಳಿ.!

    ಇಂತಹ ತಾಯಂದಿರ ದಿನದಂದು 'ಅಮ್ಮ'ನ ನೆನಪಿನಲ್ಲಿ ಕಳೆದಿದ್ದಾರೆ ನಟಿ ಜಾಹ್ನವಿ ಕಪೂರ್. ತಾಯಿಯನ್ನು ಕಳೆದುಕೊಂಡ ನೋವಿನಲ್ಲಿರುವ ಜಾಹ್ನವಿ ಕಪೂರ್ 'ಮದರ್ಸ್ ಡೇ' ಅಂದು ಅಮ್ಮ ಶ್ರೀದೇವಿಯನ್ನು ಬಹಳ ಮಿಸ್ ಮಾಡಿಕೊಂಡಿದ್ದಾರೆ.

    ಸ್ಟಾರ್ ಹಿಂದಿನ ಶಕ್ತಿ ಅವರ ಅಮ್ಮಂದಿರುಸ್ಟಾರ್ ಹಿಂದಿನ ಶಕ್ತಿ ಅವರ ಅಮ್ಮಂದಿರು

    ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಬಾಲ್ಯದ ಫೋಟೋ ಒಂದನ್ನು ಶೇರ್ ಮಾಡಿ, ಬಾಲ್ಯದಲ್ಲಿ ಅಮ್ಮನೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ ಜಾಹ್ನವಿ ಕಪೂರ್.

    ಶ್ರೀದೇವಿ ಪುತ್ರಿಯ ನೋವನ್ನು ಅರ್ಥೈಸಿಕೊಂಡ ನೆಟ್ಟಿಗರು ಇನ್ಸ್ಟಾಗ್ರಾಮ್ ನಲ್ಲಿ ಜಾಹ್ನವಿಗೆ ಧೈರ್ಯ ತುಂಬಿದ್ದಾರೆ.

    English summary
    Janhvi Kapoor celebrates Mother's day with the memories of Sridevi.
    Monday, May 14, 2018, 19:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X