ಶ್ರೀದೇವಿ ಪುತ್ರಿಯ ಪಿಂಕ್ ಡ್ರೆಸ್ ನೋಡಿ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು

ಬಾಲಿವುಡ್ ನಟಿಯರು ಹೇಗೆ ಡ್ರೆಸ್ ತೊಟ್ಟರು ಅದು ಸುದ್ದಿಯೇ. ಅದರಲ್ಲೂ ಕೆಲವರು ಸುದ್ದಿಯಾಗಲಿ ಎಂದೇ ಉದ್ದೇಶಪೂರ್ವಕವಾಗಿ ಕೆಲವು ಡ್ರೆಸ್ ಗಳನ್ನ ಹಾಕ್ಕೊಂಡು ಬರ್ತಾರೆ ಅನಿಸುತ್ತೆ. ಇದು ಬಿಟೌನ್ ಇಂಡಸ್ಟ್ರಿಯಲ್ಲಿ ಮಾಮೂಲಿ.

ಇದೀಗ, ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತೊಟ್ಟಿದ ಪಿಂಕ್ ಬಣ್ಣದ ಡ್ರೆಸ್ ಟ್ರೋಲ್ ಗೆ ಗುರಿಯಾಗಿದೆ. ಸಾರ್ವಜನಿಕವಾಗಿ ಜಾಹ್ನವಿ ಕಪೂರ್ ಹೀಗೂ ಇರ್ತಾರಾ ಎಂದು ಬಾಯಿ ಮೇಲೆ ಬೆರಳಿಟ್ಟು ನೋಡುವಂತಾಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇತ್ತೀಚಿಗಷ್ಟೆ ಜಾಹ್ನವಿ ಕಪೂರ್ ಪಿಂಕ್ ಬಣ್ಣ ಟೀ ಶರ್ಟ್ ಮತ್ತು ಮಿನಿ ಶಾರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ನೋಡಿದ್ರೆ, ಜಾಹ್ನವಿ ಕಪೂರ್ ಅವರ ಮಿನಿ ಶಾರ್ಟ್ ಕಾಣಿಸುವುದೇ ಇಲ್ಲ. ಇದನ್ನ ನೋಡಿದ ನೆಟ್ಟಿಗರು ಜಾಹ್ನವಿ ಪ್ಯಾಂಟ್ ಹಾಕದೇ ಬಂದಿದ್ದಾರೆ ಎಂದು ಟ್ರೋಲ್ ಮಾಡ್ತಿದ್ದಾರೆ.

Janhvi Kapoor get trolled for short dress

ಕೆಲವರು ಬಹುಶಃ ಜಾಹ್ನವಿ ಪ್ಯಾಂಟ್ ಹಾಕಿಕೊಳ್ಳುವುದನ್ನ ಮರೆತು ಬಂದಿರಬಹುದು ಎನ್ನುತ್ತಿದ್ದಾರೆ. ಇನ್ನು ಹಲವರು ಶ್ರೀದೇವಿ ಮಗಳು ಪ್ರಚಾರಕ್ಕಾಗಿಯೇ ಹೀಗೆ ಬಂದಿದ್ದಾಳೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂದ್ಹಾಗೆ, ಜಾಹ್ನವಿ ಕಪೂರ್ ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗ್ತಿರುವುದು ಇದೇ ಮೊದಲಲ್ಲ. ಹಲವು ಸರಿ ಇಂತಹದ್ದೇ ಕಾರಣಗಳಿಗೆ ಚರ್ಚೆಯಾಗಿದ್ದಾರೆ. ಆದ್ರೆ, ಈ ಬಾರಿ ಸ್ವಲ್ಪ ಜಾಸ್ತಿಯೇ ಟ್ರೋಲ್ ಆಗ್ತಿದ್ದಾರೆ.

Janhvi Kapoor get trolled for short dress

'ದಢಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಜಾಹ್ನವಿ ಕಪೂರ್ ಈಗ ಎರಡನೇ ಸಿನಿಮಾ ಮಾಡ್ತಿದ್ದಾರೆ. ಕರಣ್ ಜೋಹರ್ ನಿರ್ಮಾಣ ಮಾಡುತ್ತಿರುವ ಪೌರಾಣಿಕ ಚಿತ್ರದಲ್ಲಿ ಜಾಹ್ನವಿ ವಿಶೇಷ ಪಾತ್ರವನ್ನ ಮಾಡುತ್ತಿದ್ದಾರೆ.

More from Filmibeat

English summary
Sridevi’s elder daughter and Dhadak actress, Jhanvi Kapoor. She has been trolled for her outfit that she has been spotted wearing. However, it’s not the first time that the actress has faced the criticism for her dress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X