ಶ್ರೀದೇವಿ ಪುತ್ರಿಯ ಮಾತೃಪ್ರೇಮ: ಅಮ್ಮನ ಕೈ ಬರಹ ಟ್ಯಾಟೂ ಹಾಕಿಸಿದ ಜಾಹ್ನವಿ

ಜಾಹ್ನವಿ ಕಪೂರ್‌ಗೆ ತಮ್ಮ ತಾಯಿ ಶ್ರೀದೇವಿ ಅಂದ್ರೆ ಬಹಳ ಪ್ರೀತಿ. ಶ್ರೀದೇವಿ ಇಲ್ಲದೇ ಹೋದರು ಅವರ ನೆನಪಿನೊಂದಿಗೆ ಪ್ರತಿದಿನವನ್ನು ಜಾಹ್ನವಿ ಆರಂಭಿಸುತ್ತಾರೆ. ಶ್ರೀದೇವಿ ಪುತ್ರಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಹಾಲಿಡೇ ಎಂಜಾಯ್ ಮಾಡಿರುವ ನಟಿ ತಾವು ಎಲ್ಲೆಲ್ಲಿ ಹೋಗಿದ್ರಿ ಎನ್ನುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಸೆಲ್ಫಿ ಕ್ಲಿಕ್ಕಿಸಿರುವುದು, ದೇವಸ್ಥಾನಕ್ಕೆ ಭೇಟಿ ನೀಡಿರುವುದು, ಸ್ವಿಮ್ಮಿಂಗ್ ಪೂಲ್‌ನಲ್ಲಿ ಸ್ನಾನ ಮಾಡುತ್ತಿರುವುದು, ಯೋಗಾಭ್ಯಾಸ ಮಾಡುತ್ತಿರುವುದು, ಸೂರ್ಯಾಸ್ತವನ್ನು ಆನಂದಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಎಲ್ಲಾ ಫೋಟೋಗಳ ನಡುವೆ, ಹೊಸ ಟ್ಯಾಟೂ ಹಾಕಿಸಿಕೊಂಡಿರುವ ಫೋಟೋವೊಂದು ಎಲ್ಲರ ಗಮನ ಸೆಳೆದಿದೆ. ಏಕೆಂದರೆ ಆ ಟ್ಯಾಟೂದಲ್ಲಿ 'ಐ ಲವ್ ಯು ಮೈ ಲಬ್ಬು' ಎಂದು ಬರೆದಿದೆ.

ಈ ಟ್ಯಾಟೂ ವಿಶೇಷ ಏನಪ್ಪಾ ಅಂದ್ರೆ, ಅದು ಶ್ರೀದೇವಿ ಅವರ ಕೈ ಬರಹ. ತನ್ನ ಅಮ್ಮನ ಕೈ ಬರಹವನ್ನು ತಮ್ಮ ಕೈ ಮೇಲೆ ಟ್ಯಾಟೂ ಆಗಿ ಹಾಕಿಸಿಕೊಂಡಿದ್ದಾರೆ ಜಾಹ್ನವಿ. ಹಾಗಾಗಿ, ಇದು ಬಹಳ ವಿಶೇಷವೆನಿಸಿಕೊಂಡಿದ್ದಾರೆ. ಇನ್ನು ಲಬ್ಬು ಅಂದ್ರೆ ಅದು ಜಾಹ್ನವಿ ಪ್ರೀತಿಯಿಂದ ಅಮ್ಮನನ್ನು ಕರೆಯುತ್ತಿದ್ದ ಬಗೆ. ಶ್ರೀದೇವಿಯನ್ನು ಜಾಹ್ನವಿ ಲಬ್ಬು ಎಂದೇ ಕರೆಯುತ್ತಿದ್ದರು. ಮುಂದೆ ಓದಿ...

ಜಾಹ್ನವಿ ಕೆಲಸಕ್ಕೆ ನೆಟ್ಟಿಗರು ಚಪ್ಪಾಳೆ

ಜಾಹ್ನವಿ ಕೆಲಸಕ್ಕೆ ನೆಟ್ಟಿಗರು ಚಪ್ಪಾಳೆ

ಜಾಹ್ನವಿ ಟ್ಯಾಟೂ ಫೋಟೋ ಜೊತೆ ಟ್ಯಾಟೂ ಹಾಕಿಸಿಕೊಳ್ಳುತ್ತಿರುವ ವಿಡಿಯೋದ ಸಣ್ಣ ಝಲಕ್ ಸಹ ಶೇರ್ ಮಾಡಿದ್ದಾರೆ. ಟ್ಯಾಟೂ ಹಾಕುವ ವೇಳೆ ನೋವಿನ ಸಂದರ್ಭದಲ್ಲಿ ಜಾಹ್ನವಿ 'ಗೋವಿಂದ, ಗೋವಿಂದ' ಎಂದು ಜಪ ಮಾಡಿರುವುದು ವೈರಲ್ ಆಗಿದೆ. ಜಾಹ್ನವಿ ಅವರ ಈ ಹೊಸ ಟ್ಯಾಟೂ ನೋಡಿದ ಅಭಿಮಾನಿಗಳು ಆಕೆಯ ಬಗ್ಗೆ ಖುಷಿಪಟ್ಟಿದ್ದಾರೆ. ಜಾಹ್ನವಿ ಅಮ್ಮನ ಪ್ರೀತಿಯ ಮಗಳು ಎಂದು ಹೊಗಳುತ್ತಿದ್ದಾರೆ. ಈ ತರಹದ ಐಡಿಯಾಗಳು ಎಲ್ಲರಿಗೂ ಬರಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮ್ಮನ ಬಗ್ಗೆ ಭಾವುಕ ಪೋಸ್ಟ್ ಹಾಕಿದ ಜಾಹ್ನವಿ

ಅಮ್ಮನ ಬಗ್ಗೆ ಭಾವುಕ ಪೋಸ್ಟ್ ಹಾಕಿದ ಜಾಹ್ನವಿ

ಶ್ರೀದೇವಿಯವರ ಮೂರನೇ ವರ್ಷದ ಪುಣ್ಯ ಸ್ಮರಣೆಯಂದು ನಟಿ ಜಾಹ್ನವಿ ತನ್ನ ತಾಯಿಯ ಕೈಬರಹದ ಟಿಪ್ಪಣಿಯ ಚಿತ್ರವನ್ನು ಹಂಚಿಕೊಂಡಿದ್ದಳು. "ಐ ಲವ್ ಯೂ ಮೈ ಲಬ್ಬು. ಯೂ ಆರ್ ದಿನ ಬೆಸ್ಟ್ ಬೇಬಿ ಇನ್ ದಿ ವರ್ಲ್ಡ್ (ನಾನು ತುಂಬಾ ಪ್ರೀತಿಸುತ್ತೇನೆ ಲಬ್ಬು, ನೀನು ಈ ಜಗತ್ತಿನಲ್ಲಿ ನನಗೆ ಅತ್ಯುತ್ತಮ ಮಗು)'' ಎಂದು ಪೋಸ್ಟ್ ಹಾಕಿದ್ದರು. ಆಗಸ್ಟ್ ತಿಂಗಳಲ್ಲಿ ಶ್ರೀದೇವಿಯ ಹುಟ್ಟುಹಬ್ಬವಿತ್ತು. ಆ ದಿನವೂ ಭಾವುಕ ಪೋಸ್ಟ್ ಹಾಕಿದ್ದ ಜಾಹ್ನವಿ, ''ಹುಟ್ಟುಹಬ್ಬ ಶುಭಾಶಯಗಳು ಅಮ್ಮ. ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಎಲ್ಲವೂ ನಿಮಗಾಗಿ, ಯಾವಾಗಲೂ, ಪ್ರತಿದಿನ. ಲವ್ ಯೂ ಅಮ್ಮ" ಎಂದು ಬರೆದುಕೊಂಡಿದ್ದಾರೆ.

ಚೊಚ್ಚಲ ಚಿತ್ರಕ್ಕೆ ಮುಂಚೆ ಶ್ರೀದೇವಿ ನಿಧನ

ಚೊಚ್ಚಲ ಚಿತ್ರಕ್ಕೆ ಮುಂಚೆ ಶ್ರೀದೇವಿ ನಿಧನ

ತಮ್ಮ ಚೊಚ್ಚಲ ಸಿನಿಮಾ ಬಿಡುಗಡೆ ಮುಂಚೆಯೇ ತಮ್ಮ ತಾಯಿಯನ್ನು ಕಳೆದುಕೊಂಡು ಜಾಹ್ನವಿ ಕಪೂರ್. ಮೊದಲ ಸಿನಿಮಾವನ್ನು ನೋಡಬೇಕು ಎಂಬ ಆಸೆ ಹೊಂದಿದ್ದರು ಶ್ರೀದೇವಿ. ಆದರೆ ಆ ಚಿತ್ರ ತೆರೆಗೆ ಬರುವ ಮೊದಲೇ ಇಹಲೋಕ ತ್ಯಜಿಸಬೇಕಾಯಿತು. ಅಮ್ಮನ ಕಳೆದುಕೊಂಡ ದಿನದಿಂದಲೂ ಒಂದಲ್ಲ ಒಂದು ಸಂದರ್ಭದಲ್ಲಿ ಜಾಹ್ನವಿ ತಾಯಿಯನ್ನು ಸ್ಮರಿಸಿಕೊಳ್ಳುತ್ತಾ ಇರ್ತಾರೆ. ಜೊತೆಗೆ ಅಪರೂಪದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. 2018ರಲ್ಲಿ 'ಧಡಕ್' ಸಿನಿಮಾ ಬಿಡುಗಡೆಯಾಗಿತ್ತು. ಶಶಾಂಕ್ ಖೈತಾನ್ ನಿರ್ದೇಶಿಸಿದ್ದ ಈ ಚಿತ್ರ ಮರಾಠಿಯ 'ಸೈರಾಟ್' ಚಿತ್ರದ ಹಿಂದಿ ರಿಮೇಕ್ ಆಗಿತ್ತು. ಜಾಹ್ನವಿ ಜೊತೆ ಇಶಾನ್ ಕತ್ತಾರ್ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಆದ್ಮೇಲೆ 'ಗೋಸ್ಟ್ ಸ್ಟೋರಿಸ್', 'ಆಂಗ್ರೇಜಿ ಮೀಡಿಯಂ', 'ಗುಂಜನ್ ಸಕ್ಸೇನಾ', 'ರೂಹಿ' ಅಂತಹ ಚಿತ್ರಗಳಲ್ಲಿ ಜಾಹ್ನವಿ ಅಭಿನಯಿಸಿದ್ದಾರೆ.

ಜಾಹ್ನವಿ ಮುಂದಿನ ಚಿತ್ರಗಳು

ಜಾಹ್ನವಿ ಮುಂದಿನ ಚಿತ್ರಗಳು

ಕರಣ್ ಜೋಹರ್ ನಿರ್ಮಾಣದ ದೋಸ್ತಾನ 2 ಚಿತ್ರದಲ್ಲಿ ಜಾಹ್ನವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಸೇನಗುಪ್ತಾ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಗುಡ್ ಲಕ್ ಜೆರ್ರಿ' ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ. 'ಮಿಲಿ' ಎನ್ನುವ ಪ್ರಾಜೆಕ್ಟ್‌ವೊಂದು ಆರಂಭಿಸಿದ್ದಾರೆ.

More from Filmibeat

English summary
Bollywood Actress Janhvi kapoor gets a tattoo of Sridevi’s handwritten note her hand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X