ಟ್ರೋಲಿಗರಿಗೆ ಮತ್ತೆ ಆಹಾರವಾದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್.!

By Harshitha

Recommended Video

ಹಿಂಗೆಲ್ಲ ಬಟ್ಟೆ ಹಾಕೊಂಡು ಫೋಟೋ ತೆಗೆಸಿಕೊಂಡಿದ್ದೆ ತಪ್ಪಾಯ್ತು | Filmibeat Kannada

ಜನಪ್ರಿಯ 'ವೋಗ್ ಇಂಡಿಯಾ' ಮ್ಯಾಗಝೀನ್ 'ಕವರ್ ಗರ್ಲ್' ಆಗಿ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮಿಂಚಿದ್ದಾರೆ.

ಇದೇ 'ವೋಗ್ ಇಂಡಿಯಾ' ಮ್ಯಾಗಝೀನ್ ಗೆ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಸೋನಂ ಕಪೂರ್ 'ಕವರ್ ಗರ್ಲ್' ಆಗಿದ್ದಾಗ ಬಾಲಿವುಡ್ ಪ್ರಿಯರು ಖುಷಿ ಪಟ್ಟಿದ್ದರು. ಆದ್ರೆ, ಅದೇ ಜಾಗಕ್ಕೆ ಈಗ ಜಾಹ್ನವಿ ಕಪೂರ್ ಬಂದಿರುವುದು ಕೆಲವರಿಗೆ ಬೇಸರ ತರಿಸಿದೆ.

ಜಾಹ್ನವಿ ಕಪೂರ್ ಫೋಟೋ ಇರುವ 'ವೋಗ್ ಇಂಡಿಯಾ' ಮುಖಪುಟ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗುತ್ತಿದ್ದಂತೆಯೇ, ನೆಗೆಟಿವ್ ಕಾಮೆಂಟ್ ಗಳ ಸುರಿಮಳೆ ಶುರು ಆಯ್ತು.

Janhvi Kapoor gets slammed for Vogue Cover

''ಶ್ರೀದೇವಿ ಮೃತಪಟ್ಟು ಇನ್ನೂ ವರ್ಷ ಆಗಿಲ್ಲ. ಅಷ್ಟು ಬೇಗ ಪುತ್ರಿ ಜಾಹ್ನವಿ ಕಪೂರ್ ಎಲ್ಲವನ್ನೂ ಮರೆತಿರುವ ಹಾಗಿದೆ. ಅಮ್ಮನ ಸಾವು ಆಕೆಯ ಜೀವನದಲ್ಲಿ ಏನೂ ಪ್ರಭಾವ ಬೀರಿಲ್ಲ ಅಂತ ಕಾಣುತ್ತೆ. ಆಕೆಯ ಚಿತ್ರಕ್ಕೆ ಈಗ ಸಿಂಪಥಿ ಬೇಕಾಗಿದೆ ಅಷ್ಟೇ'' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

''ಬೆಳ್ಳಿತೆರೆ ಮೇಲೆ ಮಿಂಚುವ ಮುನ್ನವೇ ಮೂಗು ಹಾಗೂ ತುಟಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ. ಆದರೂ, ಪೂರ್ತಿ ಮುಖ ದರ್ಶನ ವೋಗ್ ಮ್ಯಾಗಝೀನ್ ಕವರ್ ನಲ್ಲಿ ಇಲ್ಲ'' ಅಂತ ಕೆಲವರು ಜಾಹ್ನವಿ ಲುಕ್ ಬಗ್ಗೆ ಲೇವಡಿ ಮಾಡಿದ್ದಾರೆ.

Janhvi Kapoor gets slammed for Vogue Cover

''ಜಾಹ್ನವಿ ಚೊಚ್ಚಲ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಅಷ್ಟು ಬೇಗ ಆಕೆ ಕವರ್ ಗರ್ಲ್.! ಕಷ್ಟ ಪಡುವ ಎಷ್ಟೋ ಮಾಡೆಲ್ ಗಳಿದ್ದಾರೆ. ಆದರೆ, ಅವರಿಗೆ ಇಂತಹ ಸುವರ್ಣಾವಕಾಶ ಸಿಗುವುದಿಲ್ಲ'' ಅಂತೆಲ್ಲ ಹೇಳುವ ಸಾಲು ಸಾಲು ಕಾಮೆಂಟ್ ಗಳು ಇನ್ಸ್ಟಾಗ್ರಾಮ್ ನಲ್ಲಿದೆ.

ಒಟ್ನಲ್ಲಿ, ಶ್ರೀದೇವಿ ಮರಣ ಹೊಂದಿದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಬಹುತೇಕರ ಕಣ್ಣು ಜಾಹ್ನವಿ ಹಾಗೂ ಖುಷಿ ಕಪೂರ್ ಮೇಲಿದೆ.

More from Filmibeat

English summary
Janhvi Kapoor gets slammed for Vogue Cover.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X