ಸಿಂಪಲ್ ಸಲ್ವಾರ್ ಧರಿಸಿದ್ದರೂ ಟ್ರೋಲ್ ಆದ ಜಾಹ್ನವಿ ಕಪೂರ್.! ಕಾರಣ ಏನು.?
ಮೈಯೆಲ್ಲ ಕಣ್ಣಾಗಿದ್ದರೂ, ಪ್ರತಿ ಹೆಜ್ಜೆಯಲ್ಲಿ ಎಚ್ಚರಿಕೆ ವಹಿಸಿದರೂ.. ಕೆಲ ಸ್ಟಾರ್ ಗಳು ಮಾತ್ರ ಒಂದಲ್ಲಾ ಒಂದು ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ಜಾಹ್ನವಿ ಕಪೂರ್.
ಇತ್ತೀಚೆಗಷ್ಟೇ ಹಳದಿ ಬಣ್ಣದ ಸಲ್ವಾರ್ ಧರಿಸಿ ಕಾರ್ಯಕ್ರಮವೊಂದಕ್ಕೆ ಜಾಹ್ನವಿ ಕಪೂರ್ ಬಂದಿದ್ದರು. ನೋಡುವುದಕ್ಕೆ ಸಖತ್ ಸಿಂಪಲ್ ಆಗಿದ್ದರೂ ಜಾಹ್ನವಿ ಕಪೂರ್ ಟ್ರೋಲ್ ಆಗಿದ್ದಾರೆ.
ಅರೇ.. ಈ ಉಡುಗೆಯಲ್ಲಿ ಟ್ರೋಲ್ ಆಗುವಂಥದ್ದು ಏನಿದೆ ಅಂತ ನೀವು ಕೇಳಬಹುದು. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಅಂತ ಭಾವಿಸಿದರೂ.. ತಾವು ತೊಟ್ಟಿದ್ದ ದುಪಟ್ಟಾದಲ್ಲಿ ಜಾಹ್ನವಿ ಕಪೂರ್ ಪ್ರೈಸ್ ಟ್ಯಾಗ್ ತೆಗೆದಿರಲಿಲ್ಲ.

ದುಪಟ್ಟಾದಲ್ಲಿ ಪ್ರೈಸ್ ಟ್ಯಾಗ್ ಇಟ್ಟುಕೊಂಡೇ ಹೊರಗೆ ಬಂದಿದ್ದರು ಜಾಹ್ನವಿ ಕಪೂರ್. ಇದನ್ನ ನೋಡಿ ಕೆಲ ನೆಟ್ಟಿಗರು ನಗಾಡುತ್ತಿದ್ದರೆ, ಆತುರದಲ್ಲಿ ಪ್ರೈಸ್ ಟ್ಯಾಗ್ ತೆಗೆಯುವುದನ್ನ ಮರೆತಿರಬೇಕು ಎಂದು ಕೆಲವರು ಜಾಹ್ನವಿ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಒಟ್ನಲ್ಲಿ ಜಾಹ್ನವಿ ಮಾಡಿಕೊಂಡ ಒಂದು ಎಡವಟ್ಟು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಕಾರಣವಾಗಿದೆ. ಅಂದ್ಹಾಗೆ, ಜಾಹ್ನವಿ ಕಪೂರ್ ಸದ್ಯ 'ರೂಹಿ ಅಫ್ಜಾ', 'ದೋಸ್ತಾನಾ-2' ಮತ್ತು 'ತಖ್ತ್' ಚಿತ್ರಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











