For Quick Alerts
  ALLOW NOTIFICATIONS  
  For Daily Alerts

  ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲ ಎಂದು ತೆಲುಗು ಸಿನಿಮಾ ತಿರಸ್ಕರಿಸಿದ ನಟಿ ಜಾಹ್ನವಿ

  |

  ಬಾಲಿವುಡ್ ನ ಟ್ರೆಂಡಿ ನಾಯಕಿ ಜಾಹ್ನವಿ ಕಪೂರ್ ಸಿನಿಮಾಗಳಿಂದ ಹೆಚ್ಚಾಗಿ ಫೋಟೋಶೂಟ್ ಮೂಲಕವೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಜಾಹ್ನವಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡ್ತಾರೆ ಎನ್ನುವ ಸುದ್ದಿ ವರ್ಷದಿಂದ ಕೇಳಿ ಬರುತ್ತಿದೆ.

  ಇತ್ತೀಚಿಗೆ ಟಾಲಿವುಡ್ ನಟ ವಿಜಯ್ ದೇವರಕೊಂಡಗೆ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಇತ್ತೀಚಿಗೆ ಜೋರಾಗಿ ಹರಿದಾಡುತ್ತಿತ್ತು. ಆದೀಗ ಜಾಹ್ನವಿ ಟಾಲಿವುಡ್ ಕಡೆ ಮುಖ ಮಾಡುವುದಿಲ್ಲ ಎಂದು ಕಡ್ಡಿ ತುಂಡಾಗುವ ಹಾಗೆ ಹೇಳಿದ್ದಾರಂತೆ. ಟಾಲಿವುಡ್ ನ ಖ್ಯಾತ ನಿರ್ಮಾಪಕರೊಬ್ಬರು ಜಾಹ್ನವಿ ಅವರನ್ನು ಸಂಪರ್ಕಿಸಿದಾಗ ಜಾಹ್ನವಿ ಸಿನಿಮಾ ಆಫರ್ ಅನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರಂತೆ. ಅಲ್ಲದೆ ಶ್ರೀದೇವಿ ಪುತ್ರಿ ಹೇಳಿದ ಕಾರಣ ಕೇಳಿ ನಿರ್ಮಾಪಕರು ಶಾಕ್ ಆಗಿದ್ದಾರಂತೆ. ಮುಂದೆ ಓದಿ...

  ನಾಯಕಿಯರೂ ಗ್ಲಾಮರ್ ಬೊಂಬೆಗಳಷ್ಟೆ

  ನಾಯಕಿಯರೂ ಗ್ಲಾಮರ್ ಬೊಂಬೆಗಳಷ್ಟೆ

  ಟಾಲಿವುಡ್ ನಲ್ಲಿ ನಾಯಕಿಗಿಂತ ನಟರು ಮತ್ತು ನಿರ್ದೇಶಕರ ಪ್ರಾಬಲ್ಯ ಹೆಚ್ಚಾಗಿರುತ್ತಂತೆ. ನಾಯಕಿಯ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವುದಿಲ್ಲ, ನಾಯಕಿಯರು ಗ್ಲಾಮರ್ ಬೊಂಬೆಗಳ ಹಾಗೆ ಅಷ್ಟೆ ಇರಬೇಕು. ಸೈಡ್ ಆಕ್ಟರ್ ಹಾಗೆ ಇರುತ್ತಾರೆ. ಹಾಗಾಗಿ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಜಾಹ್ನವಿ ನಿರ್ಮಾಪಕರ ಬಳಿ ಹೇಳಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

  ತಾಯಿ ಟಾಲಿವುಡ್ ನಲ್ಲಿ ಖ್ಯಾತಿಗಳಿಸಿದ ನಟಿ

  ತಾಯಿ ಟಾಲಿವುಡ್ ನಲ್ಲಿ ಖ್ಯಾತಿಗಳಿಸಿದ ನಟಿ

  ಜಾಹ್ನವಿ ಪ್ರತಿಕ್ರಿಯೆ ಕೇಳಿ ಕೇವಲ ನಿರ್ಮಾಪಕ ಮಾತ್ರವಲ್ಲದೆ ಇಡೀ ಟಾಲಿವುಡ್ ಶಾಕ್ ಆಗಿದೆಯಂತೆ. ಜಾಹ್ನವಿ ಕಪೂರ್ ತಾಯಿ ಶ್ರೀದೇವಿ ತೆಲುಗು ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿಗಳಿಸಿದ್ದರು. ಅಲ್ಲದೆ ಮಗಳನ್ನು ತೆಲುಗು ಚಿತ್ರರಂಗದಿಂದನೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಿಬೇಕೆನ್ನುವ ಕನಸಿಟ್ಟುಕೊಂಡಿದ್ದರು. ಆದರೆ ಪುತ್ರಿ ಹೇಳಿದ ಮಾತುಗಳೀಗ ಟಾಲಿವುಡ್ ನಲ್ಲಿ ಚರ್ಚೆಗೆ ಕಾರಣವಗಿದೆ.

  ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲವಾ?

  ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರಲ್ಲವಾ?

  ಟಾಲಿವುಡ್ ನಲ್ಲಿ ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತೆ. ಜೊತೆಗೆ ಹೆಚ್ಚುಕಡಿಮೆ ನಾಯಕರು ಪಡೆಯುವ ಸಂಭಾವನೆಯಷ್ಟೆ ನಾಯಕಿಯರು ಪಡೆಯುತ್ತಾರೆ. ಆದರೆ ಜಾಹ್ನವಿಗೆ ಟಾಲಿವುಡ್ ಸಿನಿಮಾ ಮಾಡಲು ಇಷ್ಟವಿಲ್ಲದ ಕಾರಣ ಹೀಗೆಲ್ಲ ಹೇಳುತ್ತಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಿಂದ ಕೇಳಿ ಬರುತ್ತಿದೆ.

  ಬಾಲಿವುಡ್ ನಲ್ಲಿ ಬ್ಯುಸಿ ಜಾಹ್ನವಿ

  ಬಾಲಿವುಡ್ ನಲ್ಲಿ ಬ್ಯುಸಿ ಜಾಹ್ನವಿ

  ಜಾಹ್ನವಿ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಡಕ್ ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಜಾಹ್ನವಿ ಆ ನಂತರ ಯಾವ ಸಿನಿಮಾಗಳು ರಿಲೀಸ್ ಆಗಿಲ್ಲ. ನೆಟ್ ಫ್ಲಿಕ್ಸ್ ನ ಗೋಸ್ಟ್ ಸ್ಟೋರಿಸ್ ನಲ್ಲಿ ಕಾಣಿಸಿಕೊಂಡಿದ್ದರು, ಜೊತೆಗೆ ಅಂಗ್ರೇಜಿ ಮೀಡಿಯಂ ಸಿನಿಮಾದಲ್ಲಿ ಗೆಸ್ಟ್ ಪಾತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಗುಂಜನ್ ಸಕ್ಸೇನಾ, ರೂಹಿ ಅಫ್ಜಾನಾ ಮತ್ತು ದೋಸ್ತಾನಾ-2 ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Bollywood actress Janhvi Kapoor has turned down to Tollywood movies because of the fact that the heroine character showcased in the films.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X