ಬಿಕಿನಿಯಲ್ಲಿ ಜಾನ್ವಿ ಕಪೂರ್ ವಾರೆನೋಟ: EMIಗಾಗಿ ಇಷ್ಟೆಲ್ಲಾ "ಪರದಾಟ"?

ಅತಿಲೋಕ ಸುಂದರಿ ಶ್ರೀದೇವಿ ಪುತ್ರಿ ಮತ್ತೊಮ್ಮೆ ಬಿಕಿನಿ ತೊಟ್ಟು ಪಡ್ಡೆ ಹುಡುಗ್ರ ಎದೆಗೆ ಕಿಚ್ಚು ಹಚ್ಚಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 'ಧಡಕ್' ಬೆಡಗಿಯ ಹಾಟ್ ಹಾಟ್ ಫೋಟೊಗಳು ಸಖತ್ ವೈರಲ್ ಆಗಿದೆ.

ಜಾನ್ವಿ ಕಪೂರ್‌ಗೆ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ಸಸ್ ಸಿಕ್ಕಿಲ್ಲ. ಮತ್ತೊಂದ್ಕಡೆ ಈ ಬಿಂದಾಸ್ ಬೆಡಗಿ ಸೌತ್ ಸಿನಿಮಾಗಳತ್ತ ಮುಖ ಮಾಡಿರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಶೀಘ್ರದಲ್ಲೇ ಜಾನ್ವಿ ತೆಲುಗು ಸಿನಿಮಾದಲ್ಲಿ ನಟಿಸುವ ಬಗ್ಗೆ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಶ್ರೀದೇವಿ ಪುತ್ರಿ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಫೋಟೊಶೂಟ್ ಮೂಲಕ ಮೋಡಿ ಮಾಡುತ್ತಿದ್ದಾರೆ. ಇದೀಗ ಮತ್ತೆ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಬಿಕಿನಿ ತೊಟ್ಟು ದರ್ಶನ ಕೊಟ್ಟಿದ್ದಾರೆ. ಆ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ಗಳ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದರು. "ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲಿ ಗ್ಲಾಮರಸ್‌ ಆಗಿ ಕಂಡು ಎಲ್ಲರೂ ಆಕರ್ಷಿತರಾದರೆ ನನ್ನ ಖಾತೆಗೆ ಮತ್ತಷ್ಟು ಬ್ರ್ಯಾಂಡ್‌ಗಳು ಜಮಾವಣೆ ಆಗುತ್ತದೆ. ಆಗ ನನ್ನ ಇನ್‌ವೆಸ್ಟ್‌ಮೆಂಟ್‌ಗೆ ಇಎಂಐ ಕಟ್ಟಬಹುದು" ಎಂದಿದ್ದರು. ಪರೋಕ್ಷವಾಗಿ ಇಎಂಐ ಕಟ್ಟಲು ಈ ರೀತಿ ಹಾಟ್ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು. ಹಾಗಾಗಿ ಜಾನ್ವಿ ಬಿಕಿನಿ ಫೋಟೊಗಳನ್ನು ನೋಡಿ "ಈ ಬಾರಿ ಇಎಂಐ ಕಟ್ಟೋಕೆ ಇಷ್ಟು ಸಾಕು" ಎಂದು ಕೆಲವರು ಬಿಂದಾಸ್ ಬೆಡಗಿಯ ಕಾಲೆಳೆಯುತ್ತಿದ್ದಾರೆ.

Janhvi Kapoor in Green bikini sets Instagram on fire with new pics from Maldives

ಕಳೆದೆರಡು ದಿನಗಳಿಂದ ದ್ವೀಪರಾಷ್ಟ್ರದಲ್ಲಿ ಜಾನ್ವಿ ಕಪೂರ್ ಬೀಡು ಬಿಟ್ಟಿದ್ದಾರೆ. ಅಲ್ಲಿನ ಸಮುದ್ರ ತೀರದ ರೆಸ್ಟೋರೆಂಟ್‌ನಲ್ಲಿ ಉಳಿದುಕೊಂಡಿರುವ ಚೆಲುವೆ ಬಿಕಿನಿ ತೊಟ್ಟು ನೀರಿನಲ್ಲಿ ಈಜಾಡಿ ಎಂಜಾಯ್ ಮಾಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಆಗಿಂದಾಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಆ ಫೋಟೊಗಳಿಗೆ ಲಕ್ಷ ಲಕ್ಷ ಲೈಕ್ಸ್, ಕಾಮೆಂಟ್ಸ್ ಸಿಗುತ್ತಿದೆ. ಸದ್ಯ ಜಾನ್ವಿ ಹಸಿರು ಬಣ್ಣದ ಬಿಕಿನಿ ಫೋಟೊಗಳಂತೂ ಸಖತ್ ವೈರಲ್ ಆಗಿದೆ.

Janhvi Kapoor in Green bikini sets Instagram on fire with new pics from Maldives

ಇನ್ನು ಜಾನ್ವಿ ಕಪೂರ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ಆಕೆ ನಟಿಸಿದ್ದ 'ಮಿಲಿ' ಸಿನಿಮಾ ರಿಲೀಸ್ ಆಗಿ ಅಟ್ಟರ್ ಫ್ಲಾಪ್ ಆಗಿತ್ತು. 'ಬಾವಲ್' ಎನ್ನುವ ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ. 'ಮಿ & ಮಿ ಮಾಹಿ' ಸಿನಿಮಾ ಚಿತ್ರೀಕರಣ ನಡೀತಿದೆ. ಇದರ ನಡುವೆಯೇ ತೆಲುಗು ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಮಾತುಗಳು ಕೇಳಿಬರ್ತಿದೆ. ಒಳ್ಳೆ ಅವಕಾಶ ಸಿಕ್ಕರೆ ಖಂಡಿತ ನಟಿಸುತ್ತೇನೆ ಎಂದು ಹೇಳಿದ್ದಾರೆ. ಶ್ರೀದೇವಿ ಕೂಡ ಮೊದಲು ದಕ್ಷಿಣದ ಸಿನಿಮಾಗಳಲ್ಲಿ ಕರಿಯರ್ ಆರಂಭಿಸಿದ್ದರು. ನಂತರ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಅಲ್ಲೇ ಸೆಟ್ಲ್ ಆಗಿದ್ದರು.

More from Filmibeat

English summary
Janhvi Kapoor in Green bikini sets Instagram on fire with Hot pics from Maldives. The beautiful photos show the Mili actress enjoying the sun and sea in Maldives. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X