ಬರಿಗಾಲಿನಲ್ಲಿ ತಿರುಪತಿ ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಶ್ರೀದೇವಿ ಪುತ್ರಿ.!
'ಧಡಕ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ ನಟಿ ಜಾಹ್ನವಿ ಕಪೂರ್. 'ದಢಕ್' ಚಿತ್ರದ ಬಳಿಕ ಮೂರ್ನಾಲ್ಕು ಚಿತ್ರಗಳಲ್ಲಿ ಬಿಜಿಯಾಗಿರುವ ಜಾಹ್ನವಿ ಕಪೂರ್ ಇದೀಗ ದೇವರ ಮೊರೆ ಹೋಗಿದ್ದಾರೆ.
ಸಿನಿಮಾ ಶೂಟಿಂಗ್ ನಿಂದ ಕೊಂಚ ಗ್ಯಾಪ್ ಪಡೆದ ಜಾಹ್ನವಿ ಕಪೂರ್, ತಿರುಪತಿಗೆ ಭೇಟಿ ಕೊಟ್ಟು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶೇಷ ಅಂದ್ರೆ, ತಿರುಪತಿ ಬೆಟ್ಟವನ್ನ ಬರಿಗಾಲಿನಲ್ಲಿ ಹತ್ತಿ, ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದಾರೆ ನಟಿ ಜಾಹ್ನವಿ ಕಪೂರ್.
ಹೌದು, ಬಿಳಿ ಬಣ್ಣದ ಸಲ್ವಾರ್ ಮತ್ತು ಹಳದಿ ಬಣ್ಣದ ದುಪ್ಪಟ್ಟಾ ತೊಟ್ಟು ಅಲಿಪಿರಿಯಿಂದ 3500 ಮೆಟ್ಟಿಲುಗಳನ್ನು ಜಾಹ್ನವಿ ಕಪೂರ್ ಬರಿಗಾಲಿನಲ್ಲಿ ಹತ್ತಿ, ವೆಂಕಟೇಶ್ವರನ ಕೃಪೆಗೆ ಪಾತ್ರರಾಗಿದ್ದಾರೆ.

ಅಸಲಿಗೆ, ಜಾಹ್ನವಿ ಕಪೂರ್ ತಾಯಿ ದಿವಂಗತ ನಟಿ ಶ್ರೀದೇವಿ ಕೂಡ ತಿಮ್ಮಪ್ಪನ ಭಕ್ತೆ. ಅಮ್ಮನಂತೆ ಮಗಳೂ ಕೂಡ ತಿರುಪತಿಗೆ ಭೇಟಿ ಕೊಟ್ಟಿರುವುದಕ್ಕೆ ಅಭಿಮಾನಿಗಳು ಮತ್ತು ನೆಟ್ಟಿಗರು ಫುಲ್ ಖುಷಿಯಾಗಿದ್ದಾರೆ.
ಅಂದ್ಹಾಗೆ, ನಟಿ ಜಾಹ್ನವಿ ಕಪೂರ್ ಅಭಿನಯದ 'ಗುಂಜನ್ ಸಕ್ಸೇನಾ' ಮತ್ತು 'ರೂಹಿ ಅಫ್ಝಾನಾ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 'ದೋಸ್ತಾನಾ-2' ಚಿತ್ರದ ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











