For Quick Alerts
  ALLOW NOTIFICATIONS  
  For Daily Alerts

  'ಪ್ರೇಮಿಗಳ ದಿನಕ್ಕೆ ನಿಮ್ಮ ಪ್ಲಾನ್ ಏನು' ಎಂದಿದ್ದಕ್ಕೆ ಜಾಹ್ನವಿ ಹೇಳಿದ್ದೇನು?

  |

  ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಿಸಲಾಗುತ್ತೆ. ಸಿನಿಮಾ ಇಂಡಸ್ಟ್ರಿಗೂ ಈ ದಿನ ಬಹಳ ವಿಶೇಷ. ಚಿತ್ರರಂಗದಲ್ಲಿ ಲವ್ ಮಾಡಿ ಮದುವೆ ಆಗಿರುವವರಿದ್ದಾರೆ, ಲವ್ ಮಾಡುತ್ತಿರುವವರು ಇದ್ದಾರೆ. ಅಂತವರಿಗೆ ಈ ದಿನ ಸ್ಪೆಷಲ್.

  ಪ್ರೇಮಿಗಳ ದಿನದಂದು ಸೆಲೆಬ್ರಿಟಿಗಳು ವಿಶೇಷವಾದ ಪ್ಲಾನ್ ಮಾಡುವುದು ಸಹಜ. ಹಾಗಾಗಿಯೇ ಜಾಹ್ನವಿ ಕಪೂರ್ ಗೆ ಈ ಪ್ರಶ್ನೆ ಕೇಳಲಾಯಿತು. ಇತ್ತೀಚಿಗಷ್ಟೆ ಫ್ಯಾಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಾಹ್ನವಿ ಕಪೂರ್ ಗೆ 'ಪ್ರೇಮಿಗಳ ದಿನಕ್ಕೆ ನಿಮ್ಮ ಪ್ಲಾನ್ ಏನು' ಎಂದರು.

  ಹೊಸ ವರ್ಷದ ಪ್ರಯುಕ್ತ ಹೊಸ ಐಷಾರಾಮಿ ಕಾರು ಖರೀದಿಸಿದ ಜಾಹ್ನವಿ ಕಪೂರ್ಹೊಸ ವರ್ಷದ ಪ್ರಯುಕ್ತ ಹೊಸ ಐಷಾರಾಮಿ ಕಾರು ಖರೀದಿಸಿದ ಜಾಹ್ನವಿ ಕಪೂರ್

  ಇದಕ್ಕೆ ಪ್ರತಿಕ್ರಿಯೆ ನೀಡಿದ ಜಾಹ್ನವಿ ''ಪ್ರೇಮಿಗಳ ದಿನಕ್ಕೆ ನನಗೆ ಯಾವುದೇ ಪ್ಲಾನ್ ಇಲ್ಲ'' ಎಂದು ನಕ್ಕರು. ''ನನಗೆ ಗೊತ್ತು, ಇದು ತುಂಬಾ ಕೇಳುವುದಕ್ಕೆ ಚೆನ್ನಾಗಿಲ್ಲ ಆದರೂ ಇದು ನಿಜ'' ಎಂದು ಹೇಳಿದರು.

  'ಧಡಕ್' ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ನಟಿ ಜಾಹ್ನವಿ ಕಪೂರ್ ಚಿತ್ರದ ಸಹನಟ ಇಶಾನ್ ಕತ್ತಾರ್ ಜೊತೆ ಲವ್ವಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಸಿನಿಮಾದಿಂದ ಆಚೆಯೂ ಇವರಿಬ್ಬರ ನಡುವೆ ಆತ್ಮೀಯ ಬಾಂಧವ್ಯ ಇದ್ದು, ಪಾರ್ಟಿ, ಡಿನ್ನರ್ ಎಂದು ಸುತ್ತಾಡುತ್ತಿದ್ದರು ಎಂದು ಬಾಲಿವುಡ್ ಮಾಧ್ಯಮಗಳು ಹೆಚ್ಚು ಫೋಕಸ್ ಮಾಡಿತ್ತು.

  ಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿಶ್ರೀದೇವಿ ಪುತ್ರಿಯ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  ಜಾಹ್ನವಿ ಅವರ ತಂದೆ ಬೋನಿ ಕಪೂರ್ ಕೂಡ ಈ ಬಗ್ಗೆ ಮಾತನಾಡಿ ''ಅವರಿಬ್ಬರು ಫ್ರೆಂಡ್ಸ್ ಅಷ್ಟೆ, ಅವರ ಮಧ್ಯೆ ಏನು ಇಲ್ಲ'' ಎಂದಿದ್ದರು. ಧಡಕ್ ಸಿನಿಮಾ ಆದ್ಮೇಲೆ ಗೋಸ್ಟ್ ಸ್ಟೋರೀಸ್ ವೆಬ್ ಸೀರೀಸ್ ನಲ್ಲಿ ಜಾಹ್ನವಿ ನಟಿಸಿದ್ದರು. ಕರಣ್ ಜೋಹರ್ ನಿರ್ಮಾಣದ ತಖ್ತ್ ಚಿತ್ರದಲ್ಲಿ ಜಾಹ್ನವಿ ಅಭಿನಯಿಸುತ್ತಿದ್ದಾರೆ. ಗುಂಜಾನ್ ಸಕ್ಸೇನಾ ಹಾಗೂ ದೋಸ್ತಾನ 2 ಚಿತ್ರಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Sridevi Daughter Janhvi Kapoor has react about Valentine Day plans. 'i dont have any plans' she said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X