'ನಿಮ್ಮ ಬ್ಯೂಟಿ ಸ್ಪಾಟ್‌ಗಳನ್ನು ನೋಡಬಹುದೇ..?': ಜಾನ್ವಿ ಕಪೂರ್‌ಗೆ ಬಾಲಿವುಡ್‌ ನಟನ ಮೆಸೇಜ್!

ಬಾಲಿವುಡ್‌ನಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಅಗಾಗ್ಗೆ ಸದ್ದು ಕೇಳಿಬರುತ್ತೆ. ಅದರಲ್ಲೂ ಯಾವುದೇ ಹಿನ್ನೆಲೆ ಇಲ್ಲದೆ ಕಾಲಿಡುವವರಿಗೆ ನಟರು, ತಂತ್ರಜ್ಞರು ಸೇರಿದಂತೆ ಹಲವೆಡೆಯಿಂದ ಕೆಲವು ಕಿರಿಕ್ ಇರುತ್ತದೆ. ಆದರೆ, ದೊಡ್ಡ ನಿರ್ಮಾಪಕ ಮತ್ತು ಖ್ಯಾತ ನಟಿ ಶ್ರೀದೇವಿ ಅವರ ಮಗಳಿಗೂ ಇಂತಹ ಅನುಭವ ಆಗಿದೆ ಅಂದ್ರೆ ನಂಬಲು ಸಾಧ್ಯವೇ?. ನಂಬಲು ಕಷ್ಟವಾದರೂ ಇದು ಸತ್ಯ.

ಹೌದು ...ನಟಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಸದ್ಯ ಬಾಲಿವುಡ್‌ನಲ್ಲಿ ಭರವಸೆಯ ನಟಿಯಾಗಿದ್ದಾರೆ. ಅವರಿಗೂ ಕೂಡ ಬಾಲಿವುಡ್ ನಟರೊಬ್ಬರು ಫ್ಲರ್ಟ್ ಮಾಡಿ ಮೆಸೇಜ್ ಮಾಡಿದ್ದರಂತೆ. ಇತ್ತೀಚೆಗೆ ಸಹೋದರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರು ಕಾಫಿ ವಿತ್ ಕರಣ್‌ ಶೋನಲ್ಲಿ ಭಾಗಿಯಾಗಿದ್ದರು. ಈ ವೇಳೆ ಹಲವು ವಿಷಯಗಳನ್ನು ಹೊರಹಾಕಿದ್ದಾರೆ.

 Janhvi Kapoor recalls that A Bollywood actor wanted to see all her beauty spots

'ನಿಮ್ಮ ಬ್ಯೂಟಿ ಸ್ಪಾಟ್‌ಗಳನ್ನು ನೋಡಬಹುದೇ..?'

ಕಾಫಿ ವಿತ್ ಕರಣ್ ಇತ್ತೀಚಿನ ಸಂಚಿಕೆಯಲ್ಲಿ ಸಹೋದರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಭಾಗಿಯಾಗಿದ್ದರು. ಶೋನ ಸಕತ್ ಫೇಮಸ್ ರೌಂಟ್ ಆಗಿರುವ ರ್ಯಾಪಿಡ್ ಫೈರ್ ರೌಂಡ್‌ನಲ್ಲಿ, ಜಾನ್ವಿ ಕಪೂರ್ ನಿಜವನ್ನೇ ಹೇಳುವುದಾಗಿ ತಿಳಿಸಿದ್ದರು. ಮೊದಲ ಬಾರಿಗೆ ತಂಗಿಯ ಜೊತೆಗೆ ಕಾಣಿಸಿಕೊಂಡಿದ್ದ ಅವರು, ಸಕತ್ ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ.

ಪ್ರಶ್ನೆಗಳ ನಡುವೆ, ಕರಣ್ ಜೋಹಾರ್, ಜಾನ್ವಿ ಕಪೂರ್‌ಗೆ ಬಂದಿರುವ ಫ್ಲರ್ಟ್ ಮೆಸೇಜ್ ಬಗ್ಗೆ ಕೇಳಿದ್ದಾರೆ. ಇದಕ್ಕೆ ನಗುತ್ತಲೇ ಉತ್ತರಿಸಿರುವ ಅವರು, ನನ್ನ ಉತ್ತರ ನಿಮ್ಮನ್ನು ಶಾಕ್ ಮಾಡಬಹುದು. ನನ್ನ ಮಾತು ಕೇಳಿ ನೀವು ನನ್ನ ಮೇಲೆ ಕೂಗಾಡಬಹುದು ಎಂದು ಎಚ್ಚರಿಕೆ ನೀಡುತ್ತಲೇ ಒಂದು ಘಟನೆಯನ್ನು ವಿವರಿಸಿದ್ದಾರೆ.

ತನಗೆ ಬಂದ ಒಂದು ಮೆಸೇಜ್ ಬಗ್ಗೆ ತಿಳಿಸಿರುವ ಅವರು, "ಬಾಲಿವುಡ್ ನಟರೊಬ್ಬರು, ನಿಮ್ಮ ಎಲ್ಲಾ ಬ್ಯೂಟಿ ಸ್ಪಾಟ್‌ಗಳನ್ನು ನಾನು ನೋಡಬಹುದೇ?" ಎಂದು ಮೆಸೇಜ್ ಮಾಡಿದ್ದರು" ಎಂದು ಹೆಳಿದ್ದಾರೆ. ಇದಕ್ಕೆ ಜೋರಾಗಿ ನಕ್ಕಿರುವ ಕರಣದ ಜೋಹಾರ್, ಹಾಗಾದ್ರೆ ನಿಮಗೆ ಎಷ್ಟು ಬ್ಯೂಟಿ ಸ್ಪಾಟ್‌ಗಳಿವೆ ಎಂದು ಕೇಳಿದ್ದಾರೆ. ಅದಕ್ಕೆ ಜಾನ್ವಿ "ಹಲವು" ಎಂದು ಧೈರ್ಯದಿಂದ ಪ್ರತಿಕ್ರಿಯೆ ನೀಡಿದ್ದಾರೆ.

 Janhvi Kapoor recalls that A Bollywood actor wanted to see all her beauty spots

ಇನ್ನು, "ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು"? ಎಂದು ಕರಣ್ ಜೋಹಾರ್ ಕೇಳಿದ್ದಾರೆ. ಕೂಡಲೇ ಉತ್ತರಿಸಿರುವ ಜಾನ್ವಿ ಕಪೂರ್ "ನನ್ನ ಕಣ್ಣುಗಳನ್ನು ನೋಡುವುದಾಗಿ ಎಲ್ಲರೂ ಹೇಳುತ್ತಾರೆ. ಆದರೆ, ಅವರ ಕಣ್ಣು ಬೇರೆ ಕಡೆ ಇರುತ್ತದೆ" ಎಂದಿದ್ದಾರೆ.

ಬಾಲಿವುಡ್ ನಟರ ಬಗ್ಗೆ ಜಾನ್ವಿ ಹೇಳಿದ್ದೇನು?

ಇದೆ ರ್ಯಾಪಿಡ್ ಫೈರ್ ರೌಂಡ್‌ನಲ್ಲಿ, ಕರಣ್ ಜೋಹಾರ್ ಜಾನ್ವಿ ಕಪೂರ್‌ಗೆ ಕೆಲವು ಬಾಲಿವುಡ್ ನಟರೊಂದಿಗೆ ಕೆಲಸ ಮಾಡುವ ಬಗ್ಗೆ ಖುಷಿ ಕಪೂರ್‌ಗೆ ಸಲಹೆ ನೀಡಿ ಎಂದು ಹೇಳಿದ್ದಾರೆ. ಆಗ ವರುಣ್ ಧವನ್ ಬಗ್ಗೆ ಕೇಳಿದಾಗ, ಜಾನ್ವಿ "ಬೇಬಿ ಸಿಟ್ ಮಾಡಲು ಸಿದ್ಧರಾಗಿ" ಎಂದು ಹೇಳಿದ್ದಾರೆ. 2023 ರಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾದ ನಿತೇಶ್ ತಿವಾರಿ ಅವರ ಬವಾಲ್ ಚಿತ್ರದಲ್ಲಿ ಜಾನ್ವಿ ಮತ್ತು ವರುಣ್ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಜಾನ್ವಿ ಕಪೂರ್

ಸದ್ಯ ಜಾನ್ವಿ ಕಪೂರ್, ತೆಲುಗು ಸಿನಿಮಾರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೂನಿಯರ್ ಎನ್‌ಟಿಆರ್ ಅವರ 'ದೇವರ' ಸಿನಿಮಾ ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೇ ಸಿನಿಮಾ ಮೂಲಕ ಸೈಫ್ ಅಲಿ ಖಾನ್ ಕೂಡ ತೆಲುಗು ಸಿನಿಮಾಕ್ಕೆ ಬರಲಿದ್ದಾರೆ.

More from Filmibeat

English summary
A Bollywood actor wanted to see all her beauty spots of Janhvi Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X