ಈ ವಿಚಾರದಲ್ಲಿ ಮಗಳ ಮೇಲೆ ಶ್ರೀದೇವಿಗೆ ನಂಬಿಕೆನೇ ಇರಲಿಲ್ವಂತೆ
Recommended Video
ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಬಾಲಿವುಡ್ ನಲ್ಲಿ ಮಾಡಿರುವುದು ಒಂದೇ ಚಿತ್ರ. ಆ ಸಿನಿಮಾನೂ ಅಷ್ಟಾಗಿ ಮೋಡಿ ಮಾಡಿಲ್ಲ. ಹಾಗಿದ್ದರೂ ಶ್ರೀದೇವಿ ಪುತ್ರಿ ಬಿಟೌನ್ ಇಂಡಸ್ಟ್ರಿಯ ಸೆನ್ಸೇಷನಲ್ ನಟಿ. ತಮ್ಮ ಫೋಟೋಗಳ ಮೂಲಕವೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಅಭಿಮಾನಿಗಳನ್ನ ಸಂಪಾದಿಸಿರುವ ತಾರೆ.
ಜಾಹ್ನವಿ ಕಪೂರ್ ಅವರ ಚಿತ್ರಗಳಿಗಿಂತ ಆಕೆಯ ವೈಯಕ್ತಿಕ ವಿಚಾರದ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಅಭಿಮಾನಿಗಳದ್ದು. ಜಾಹ್ನವಿ ಯಾರನ್ನಾದರೂ ಲವ್ ಮಾಡ್ತಿದ್ದಾರಾ? ಡೇಟಿಂಗ್ ಮಾಡುತ್ತಿರಬಹುದಾ? ಮದುವೆ ಯಾವಾಗ ಎಂದೆಲ್ಲ ಚರ್ಚೆ ಮಾಡ್ತಿರುತ್ತಾರೆ.
ಇದೀಗ, ಸ್ವತಃ ಜಾಹ್ನವಿ ಕಪೂರ್ ಅವರೇ ತಮ್ಮ ಪರ್ಸನಲ್ ವಿಚಾರದ ಬಗ್ಗೆ ಬಹಿರಂಗಪಡಿಸಿದ್ದಾರೆ. ಮಗಳ ಮದುವೆ ಬಗ್ಗೆ ಆಗಾಗಲೇ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರಂತೆ. ಆದರೂ ಒಂದೂ ವಿಚಾರದಲ್ಲಿ ಶ್ರೀದೇವಿಗೆ ಮಗಳ ಮೇಲೆ ನಂಬಿಕೆಯೇ ಇರಲಿಲ್ಲವಂತೆ. ಹಾಗಿದ್ರೆ, ಆ ವಿಷಯ ಯಾವುದು? ಮಗಳ ಮದುವೆ ಬಗ್ಗೆ ಶ್ರೀದೇವಿ ಪ್ಲಾನ್ ಏನಿತ್ತು? ಮುಂದೆ ಓದಿ....

ನನ್ನನ್ನು ನಂಬುತ್ತಿರಲಿಲ್ಲ
''ಹುಡುಗರ ವಿಚಾರದಲ್ಲಿ ಮತ್ತು ಮದುವೆ ವಿಚಾರದಲ್ಲಿ ನನ್ನ ತಾಯಿ ನನ್ನನ್ನು ನಂಬುತ್ತಿರಲಿಲ್ಲ. ನಾನು ಯಾರನ್ನಾದರೂ ಪ್ರೀತಿಸಿಬಿಡುತ್ತೇನೆ, ಆ ಹುಡುಗನ ಬಗ್ಗೆ ನಾನು ಸರಿಯಾಗಿ ತಿಳಿದುಕೊಂಡಿರಲ್ಲ ಎಂಬ ವಿಚಾರಕ್ಕೆ ಅವರಿಗೆ ಆತಂಕವಿತ್ತು'' ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.

ಮದುವೆ ಆಗುವ ಹುಡುಗ ಹೀಗಿರಬೇಕಿತ್ತು
ಮಗಳನ್ನ ಕೈಹಿಡಿಯುವ ಹುಡುಗ ಹೀಗೆ ಇರಬೇಕು ಎಂಬ ಕಲ್ಪನೆ ಶ್ರೀದೇವಿ ಅವರಿಗೆ ಇತ್ತಂತೆ. ಈ ಬಗ್ಗೆ ವಿವರಿಸಿದ ಜಾಹ್ನವಿ ''ನನ್ನ ತಾಯಿಗೆ ನಾನು ಮದುವೆ ಆಗುವ ಹುಡುಗ ಪ್ರತಿಭಾನ್ವಿತ ಆಗಿರಬೇಕಿತ್ತು. ಆತ ಮಾಡುವ ವೃತ್ತಿ ಬಗ್ಗೆ ವೃತ್ತಿಪರತೆ ಹೊಂದಿರಬೇಕಿತ್ತು. ಆತನಿಂದ ನಾನು ಕಲಿತುಕೊಳ್ಳಬೇಕಿತ್ತು. ನನ್ನ ಬಗ್ಗೆ ಯೋಚಿಸುವ ನನ್ನ ವೃತ್ತಿಯನ್ನ ಗೌರವಿಸುವ ವ್ಯಕ್ತಿಯಾಗಿರಬೇಕಿತ್ತು'' ಎಂದು ತಾಯಿ ಹೇಳಿದ್ದರು ಎಂದಿದ್ದಾರೆ.

ಮದುವೆ ಇಲ್ಲೇ ಆಗಬೇಕಿತ್ತು
ಮದುವೆ ಬಗ್ಗೆ ಕೂಡ ಶ್ರೀದೇವಿ ಮಾತನಾಡಿದ್ದರಂತೆ. ''ಬಹಳ ಸಂಪ್ರದಾಯವಾಗಿ ಮದುವೆ ಮಾಡಲು ತೀರ್ಮಾನಿಸಿದ್ದರು. ತಿರುಪತಿಯಲ್ಲೇ ಮದುವೆ ಮಾಡಲು ಚಿಂತಿಸಿದ್ದರು. ಕಾಂಚೀವರಂ ಸೀರೆ ತೊಡಬೇಕಿತ್ತು. ದಕ್ಷಿಣ ಭಾರತದ ಸಂಪ್ರದಾಯ ಮತ್ತು ತಿಂಡಿ, ತಿನಿಸುಗಳನ್ನ ಮಾಡಿಸಬೇಕು'' ಎಂದು ಬಯಕೆ ಹೊಂದಿದ್ದರಂತೆ.

ಜಾಹ್ನವಿ ನಟಿಸುವುದು ಇಷ್ಟವಿರಲಿಲ್ಲ
ಹಾಗ್ನೋಡಿದ್ರೆ, ಜಾಹ್ನವಿ ಕಪೂರ್ ಸಿನಿಮಾ ಇಂಡಸ್ಟ್ರಿಗೆ ಬರುವುದು ಶ್ರೀದೇವಿ ಅವರಿಗೆ ಇಷ್ಟರವಿರಲಿಲ್ಲ. ಮಗಳಿಗೆ ಮದುವೆ ಮಾಡಿಸಿ, ಸಂತೋಷದ ಜೀವನ ನೋಡುವ ಬಯಕೆ ಇತ್ತು. ಆದರೆ ಮಗಳ ಆಸೆ ಮತ್ತು ಇಂಡಸ್ಟ್ರಿಯ ಬೇಡಿಕೆಯಿಂದ ಚಿತ್ರರಂಗಕ್ಕೆ ಬರಬೇಕಾಯಿತು. ದುರಾದೃಷ್ಟವಶಾತ್ ಮಗಳ ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಶ್ರೀದೇವಿ ಅನುಮಾನದ ರೀತಿಯಲ್ಲಿ ಸಾವನ್ನಪಿದರು.


Click it and Unblock the Notifications











