ತಾಯಿ ಶ್ರೀದೇವಿ ನೆನಪಲ್ಲಿ ಹೊಸ ಮರ್ಸಿಡೀಸ್ ಖರೀದಿಸಿದ ಜಾಹ್ನವಿ ಕಪೂರ್
ಬಾಲಿವುಡ್ ನ ಎವರ್ ಗ್ರೀನ್ ಬ್ಯೂಟಿ ಶ್ರೀದೇವಿ ಇಹಲೋಕ ತ್ಯಜಿಸಿ ಹತ್ತತ್ರ ಒಂದುವರೆ ವರ್ಷ ಕಳೆದಿದೆ. ಪುತ್ರಿ ಜಾಹ್ನವಿ ಕಪೂರ್ ಬಾಲಿವುಡ್ ಬೆಳ್ಳಿಪರದೆ ಮೇಲೆ ಮಿನುಗುವುದನ್ನು ನೋಡುವ ಅದೃಷ್ಟ ಶ್ರೀದೇವಿಗೆ ಇರಲಿಲ್ಲ. ಪುತ್ರಿ ಜಾಹ್ನವಿ ಕಪೂರ್ ಅಭಿನಯದ ಚೊಚ್ಚಲ ಚಿತ್ರ 'ಧಡಕ್' ಬಿಡುಗಡೆಗೂ ಮುನ್ನವೇ ಶ್ರೀದೇವಿ ಕೊನೆಯುಸಿರೆಳೆದಿದ್ದರು. 'ಧಡಕ್' ಬಳಿಕ ಬಾಲಿವುಡ್ ನಲ್ಲಿ ಬಿಜಿಯಾಗಿರುವ ಜಾಹ್ನವಿ ಕಪೂರ್ ಕೈಯಲ್ಲಿ ಸದ್ಯ ನಾಲ್ಕು ಚಿತ್ರಗಳಿವೆ.
Recommended Video
ಹೀಗಿರುವಾಗಲೇ, ಹೊಸ ಕಾರೊಂದನ್ನು ಜಾಹ್ನವಿ ಕಪೂರ್ ಖರೀದಿಸಿದ್ದಾರೆ. ಐಷಾರಾಮಿ ಮರ್ಸಿಡೀಸ್ ಬೆಂಜ್ ಗೆ ಜಾಹ್ನವಿ ಕಪೂರ್ ಒಡತಿ ಆಗಿದ್ದಾರೆ. ಇದರಲ್ಲಿ ಒಂದು ವಿಶೇಷತೆ ಇದೆ. ಅದೇನಪ್ಪಾ ಅಂದ್ರೆ, ಜಾಹ್ನವಿ ಕಪೂರ್ ಕೊಂಡುಕೊಂಡಿರುವ ಮರ್ಸಿಡೀಸ್ ಬೆಂಜ್ ರಿಜಿಸ್ಟ್ರೇಷನ್ ನಂಬರ್ MH 02 FG 7666.

ಹಾಗ್ನೋಡಿದ್ರೆ, ಜಾಹ್ನವಿ ಕಪೂರ್ ತಾಯಿ ಶ್ರೀದೇವಿ ಬಳಸುತ್ತಿದ್ದ ಬಿಳಿ ಬಣ್ಣದ ಮರ್ಸಿಡೀಸ್ ರಿಜಿಸ್ಟ್ರೇಷನ್ ನಂಬರ್ ಕೂಡ MH 02 DZ 7666. ಅಮ್ಮ ಶ್ರೀದೇವಿ ನೆನಪಲ್ಲಿ ಅದೇ ರಿಜಿಸ್ಟ್ರೇಷನ್ ನಂಬರ್ ಗಾಗಿ ಕಾದು ಜಾಹ್ನವಿ ನೋಂದಣಿ ಮಾಡಿಸಿದ್ದಾರಂತೆ.
ಬಾಲಿವುಡ್ ಲೋಕದಲ್ಲಿ ಪುತ್ರಿ ಜಾಹ್ನವಿ ಕಪೂರ್ ಮಿಂಚಬೇಕು ಎಂಬುದು ಶ್ರೀದೇವಿ ಕನಸಾಗಿತ್ತು. ಅದರಂತೆ ಜಾಹ್ನವಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಸದ್ಯಕ್ಕೆ 'ರೂಹಿ ಅಫ್ಜಾ', 'ದೋಸ್ತಾನಾ-2' ಮತ್ತು 'ತಖ್ತ್' ಚಿತ್ರಗಳಿಗೆ ಜಾಹ್ನವಿ ಕಪೂರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


Click it and Unblock the Notifications











