"ಹುಡುಗರು ನನ್ನ ದೇಹದಲ್ಲಿ ಮೊದಲು ಏನು ನೋಡ್ತಾರೆ ಅಂದ್ರೆ": ಜಾನ್ವಿ ಕಪೂರ್ ಖುಲ್ಲಂ ಖುಲ್ಲಾ

ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಬಾಲಿವುಡ್‌ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಆದರೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ ಆರಕ್ಕೇರದೇ ಮೂರಕ್ಕಿಳಿಯದೇ ಉಳಿದುಬಿಟ್ಟಿದ್ದಾರೆ. ಇದೀಗ ದಕ್ಷಿಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತೆಲುಗಿನಲ್ಲಿ ಜ್ಯೂ. ಎನ್‌ಟಿಆರ್ ಜೊತೆ 'ದೇವರ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ಜಾನ್ವಿ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿ ಆಗಿದ್ದರು. ಸಹೋದರಿ ಖುಷಿ ಕಪೂರ್ ಕೂಡ ಸಾಥ್ ಕೊಟ್ಟಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳಿಗೆ ಶ್ರೀದೇವಿ ಪುತ್ರಿ ಉತ್ತರ ಕೊಟ್ಟಿದ್ದಾರೆ. ಯಾಮಾರಿ ತಮ್ಮ ಬಾಯ್‌ಫ್ರೆಂಡ್ ಹೆಸರನ್ನು ಹೇಳಿಬಿಟ್ಟಿದ್ದರು. ಇನ್ನು ಜಾನ್ವಿ ಸೀಕ್ರೆಟ್ಸ್ ಖುಷಿ, ಅದೇ ರೀತಿ ಖುಷಿ ಸೀಕ್ರೆಟ್ಸ್ ಜಾನ್ವಿ ಹೇಳಿದ್ದರು ಭಾರೀ ವೈರಲ್ ಆಗಿತ್ತು. ಜೊತೆಗೆ ಡೀಪ್‌ಫೇಕ್ ವಿಡಿಯೋ ವಿವಾದದ ಬಗ್ಗೆಯೂ ಬಾಲಿವುಡ್ ಬೆಡಗಿ ಮಾತನಾಡಿದ್ದಾರೆ.

Janhvi Kapoor says what boys notice about her first

ಮಾದಕ ಮೈಮಾಟದಿಂದ ಜಾನ್ವಿ ಕಪೂರ್ ಸದಾ ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ಹಾಟ್‌ ಹಾಟ್‌ ಫೋಟೊಶೂಟ್‌ಗಳನ್ನು ಮಾಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು 2 ಕೋಟಿಗೂ ಅಧಿಕ ಮಂದಿ ಆಕೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ಇದರಿಂದ ಒಳ್ಳೆ ಆದಾಯ ಕೂಡ ಬರುತ್ತದೆ ಎಂದು ಈ ಹಿಂದೆ ಜಾನ್ವಿ ಕಪೂರ್ ಹೇಳಿಕೊಂಡಿದ್ದರು.

ಸದ್ಯ ಕಾಫಿ ವತ್ ಕರಣ್ ಶೋನಲ್ಲಿ ಬೋಲ್ಡ್ ಪ್ರಶ್ನೆಗಳಿಗೂ ಜಾನ್ವಿ ಉತ್ತರ ಕೊಟ್ಟಿದ್ದಾರೆ. ರ್ಯಾಪಿಡ್ ಫೈಯರ್ ರೌಂಡ್‌ನಲ್ಲಿ ಬೋಲ್ಡ್ ಆಗಿಯೇ ಮಾತನಾಡಿದ್ದಾರೆ. "ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು"? ಎಂದು ಕರಣ್ ಕೇಳಿದ್ದಾರೆ. ಕೂಡಲೇ ಉತ್ತರಿಸಿರುವ ಆಕೆ "ನನ್ನ ಕಣ್ಣುಗಳನ್ನು ನೋಡುವುದಾಗಿ ಎಲ್ಲರೂ ಹೇಳುತ್ತಾರೆ. ಆದ್ರೆ, ಅವರ ಕಣ್ಣು ಬೇರೆ ಕಡೆ ಇರುತ್ತದೆ" ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

Janhvi Kapoor says what boys notice about her first

ನಿಮ್ಮ ಸ್ಪೀಡ್ ಡಯಲ್‌ನಲ್ಲಿ ಇರುವ ಮೂವರ ಹೆಸರು ಹೇಳಿ ಎಂದು ಕರಣ್ ಜೋಹರ್ ಕೇಳಿದ್ದಾರೆ. ಕೂಡಲೇ ಉತ್ತರಿಸಿದ ಜಾನ್ವಿ, ಮೊದಲು ನನ್ನ ತಂದೆ ಬೋನಿ ಕಪೂರ್, ತಂಗಿ ಖುಷಿ ಎಂದ ಬಳಿಕ ಬಾಯ್ತಪ್ಪಿ "ಶಿಖು" (ಶಿಖರ್ ಪಹಾರಿಯಾ) ಎಂದು ಹೇಳಲು ಹೋಗಿ ನುಂಗಿಕೊಂಡಿದ್ದಾರೆ. ಬಳಿಕ ಅಯ್ಯಯ್ಯೋ ಬಾಯ್ತಪ್ಪಿ ಹೇಳಿಬಿಟ್ನಾ? ಎಂದು ಶಾಕ್ ಆಗಿದ್ದಾರೆ. ಕರಣ್‌ ಜೋಹರ್ ಇದನ್ನು ಕೇಳಿ ಫುಲ್ ಎಕ್ಸೈಟ್ ಆಗಿದ್ದಾರೆ.

ಶಿಖರ್ ಪಹಾರಿಯಾ ಹಾಗೂ ಜಾನ್ವಿ ಕಪೂರ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಬಾಲಿವುಡ್ ಗಲ್ಲಿಗಳಲ್ಲಿ ಕೇಳಿಬರ್ತಿದೆ. ಇದೀಗ ಜಾನ್ವಿ ಕಪೂರ್ ಪರೋಕ್ಷವಾಗಿ ಇದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಚರ್ಚೆ ಬಿಟೌನ್‌ನಲ್ಲಿ ಶುರುವಾಗಿದೆ.

ಇನ್ನು ಡೀಪ್‌ಫೇಕ್ ವಿಡಿಯೋ ಬಗ್ಗೆ ರಶ್ಮಿಕಾ ಮಂದಣ್ಣ ಬಹಿರಂಗವನ್ನು ಮಾತನಾಡಿದ್ದನ್ನು ಜಾನ್ವಿ ಕಪೂರ್ ಪ್ರಶಂಸಿಸಿದ್ದಾರೆ. "ನಾನು ಈ ರೀತಿ ಹೇಳುವುದು ವಿಚಿತ್ರ ಎನಿಸಬಹುದು. ಯಾಕಂದರೆ ನಾನು ಏನೇ ಹೇಳಿದರು ನನ್ನ ಮೂಲದ ಬಗ್ಗೆಯೇ ಮಾತನಾಡುತ್ತಾರೆ. ಅದಕ್ಕೆ ನಾನು ಸಮ್ಮುನಿರುತ್ತಿದೆ. ನನಗೆ ಏನು ಬೇಕು, ಬೇಡ ಎನ್ನುವುದನ್ನು ಬಹಿರಂಗವಾಗಿ ಹೇಳುತ್ತೇನೆ. ಡೀಫ್‌ ಫೇಕರ್ಸ್, ಫೋಟೊ ಮಾರ್ಫಿಂಗ್ ಮಾಡುವವರು ಬಗ್ಗೆಯೂ ಮಾತನಾಡುವ ಹಕ್ಕು ನನಗಿಲ್ಲ. ಇದರಲ್ಲಿ ನಾನೇನು ಹೇಳಲಾರೆ. ಆದರೆ ಇಂತಹದ್ದರ ವಿರುದ್ಧ ನಿಂತ ರಶ್ಮಿಕಾ ಬಗ್ಗೆ ಹೆಮ್ಮೆ ಇದೆ. ಬಹಳ ಹಿಂದೆಯೇ ನನ್ನ ಮಾರ್ಪಿಂಗ್ ಫೋಟೊ, ವಿಡಿಯೋ ನೋಡಿದ್ದೆ. ಇದನ್ನು ಹೊರಗೆ ಹೇಳಬಾರದೇನೋ ಎಂದುಕೊಂಡೆ. ಯಾಕಂದ್ರೆ ಎಲ್ಲರ ಗಮನ ಸೆಳೆಯಲು ನಾನು ಹೀಗೆ ಹೇಳುತ್ತಿದ್ದೇನೆ ಎಂದು ಅಂದುಕೊಳ್ಳುತ್ತಾರೇನೋ ಎಂದುಕೊಂಡೆ" ಅಂತ ಜಾನ್ವಿ ವಿವರಿಸಿದ್ದಾರೆ.

ನಿಮಗೆ ಬಂದಿರುವ ಫ್ಲರ್ಟ್ ಮೆಸೇಜ್‌ಗಳ ಬಗ್ಗೆ ಹೇಳಿ ಎಂದು ಕರಣ್ ಕೇಳಿದ್ದಾರೆ. ನಟನೊಬ್ಬ "ನಿಮ್ಮ ಎಲ್ಲಾ ಬ್ಯೂಟಿ ಸ್ಪಾಟ್‌ಗಳನ್ನು ನೋಡಬಹುದೇ" ಎಂದು ಮೆಸೇಜ್ ಮಾಡಿದ್ದಾಗಿ ಜಾನ್ವಿ ಕಪೂರ್ ತಿಳಿಸಿದ್ದಾರೆ. ಇದನ್ನು ಕೇಳಿ ಕರಣ್ ಹೌಹಾರಿದ್ದು ನಿಮಗೆ ಎಷ್ಟು ಬ್ಯೂಟಿ ಸ್ಪಾಟ್‌ಗಳಿಗೆ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ 'ಹಲವು' ಎಂದು ಶ್ರೀದೇವಿ ಪುತ್ರಿ ಉತ್ತರಿಸಿದ್ದಾರೆ. ಆದರೆ ಆ ರೀತಿ ಮೆಸೇಜ್ ಮಾಡಿದ ನಟನ ಹೆಸರು ಮಾತ್ರ ಹೇಳಿಲ್ಲ.

More from Filmibeat

English summary
Janhvi Kapoor's interesting answers to Karan Johar's rapid fire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X