For Quick Alerts
  ALLOW NOTIFICATIONS  
  For Daily Alerts

  ಹೃದಯಸ್ಪರ್ಶಿ ನುಡಿಯೊಂದಿಗೆ ಅಮ್ಮನ ನೆನೆದ ಜಾಹ್ನವಿ ಕಪೂರ್

  |

  ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅವರನ್ನು ಕಳೆದುಕೊಂಡು ಮೂರು ವರ್ಷ ಆಗಿದೆ. ಫೆಬ್ರವರಿ 24 ಶ್ರೀದೇವಿಯ ಪುಣ್ಯ ಸ್ಮರಣೆ ದಿನ. ಈ ಸಂದರ್ಭದಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಅಮ್ಮನ ಕುರಿತು ಹೃದಯಸ್ಪರ್ಶಿ ಪೋಸ್ಟ್ ಹಾಕುವ ಮೂಲಕ ನೆನಪಿಸಿಕೊಂಡಿದ್ದಾರೆ.

  ''ಐ ಲವ್ ಯೂ ಮೈ ಲಬ್ಬು. ನೀನು ವಿಶ್ವದ ದಿ ಬೆಸ್ಟ್ ಮಗು'' ಎಂದು ಜಾಹ್ನವಿ ಕಪೂರ್ ಭಾವುಕ ನುಡಿಯನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಫೆಬ್ರವರಿ 24 ರಂದು ಒಬ್ಬರ ಹುಟ್ಟುಹಬ್ಬ, ಇನ್ನೊಬ್ಬರ ಪುಣ್ಯ ಸ್ಮರಣೆಫೆಬ್ರವರಿ 24 ರಂದು ಒಬ್ಬರ ಹುಟ್ಟುಹಬ್ಬ, ಇನ್ನೊಬ್ಬರ ಪುಣ್ಯ ಸ್ಮರಣೆ

  ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್ ಸಹ ಶ್ರೀದೇವಿ, ಬೋನಿ ಕಪೂರ್ ಅವರ ಹಳೆಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಯಾವುದೇ ಕ್ಯಾಪ್ಷನ್ ಹಾಕಿಲ್ಲ.

  ಶ್ರೀದೇವಿ ಕುಟುಂಬ ಮಾತ್ರವಲ್ಲ, ಬಾಲಿವುಡ್‌ನ ಅನೇಕರು ಎವರ್‌ಗ್ರೀನ್ ನಟಿಯನ್ನು ಸ್ಮರಿಸಿಕೊಳ್ಳುತ್ತಿದ್ದಾರೆ. ಜಾಹ್ನವಿ ಹಾಗೂ ಖುಷಿ ಕಪೂರ್‌ಗೆ ಪೋಸ್ಟ್‌ಗೆ ಹಾರ್ಟ್ ಎಮೋಜಿ ಹಾಕುವ ಮೂಲಕ ಅತಿಲೋಕ ಸುಂದರಿಯ ನೆನಪು ಮಾಡಿಕೊಳ್ಳುತ್ತಿದ್ದಾರೆ.

  ಅಂದ್ಹಾಗೆ, ನಟಿ ಶ್ರೀದೇವಿ 2018ರ ಫೆಬ್ರವರಿ 24 ರಂದು ದುಬೈನಲ್ಲಿ ನಿಧನರಾಗಿದ್ದರು. ಸಂಬಂಧಿಕರೊಬ್ಬರ ಮದುವೆ ಕಾರ್ಯಕ್ರಮಕ್ಕಾಗಿ ದುಬೈಗೆ ಹೋಗಿದ್ದ ಶ್ರೀದೇವಿ ಹೋಟೆಲ್‌ವೊಂದರ ಬಾತ್‌ಟಾಬ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

  ಜಾಹ್ನವಿ ಕಪೂರ್ ನಟಿಸಿದ್ದ 'ಧಡಕ್' ಸಿನಿಮಾ ಸಹ ಶ್ರೀದೇವಿ ಸಾವಿನ ಬಳಿಕವೇ ತೆರೆಕಂಡಿತ್ತು. ಶ್ರೀದೇವಿ ಸಮ್ಮುಖದಲ್ಲಿ ಜಾಹ್ನವಿ ಚೊಚ್ಚಲ ಚಿತ್ರ ಆರಂಭಿಸಿದ್ದರು. ದುರಾದೃಷ್ಟವಶಾತ್ ಜಾಹ್ನವಿ ಸಿನಿಮಾ ನೋಡಲು ಶ್ರೀದೇವಿಗೆ ಅದೃಷ್ಟ ಇರಲಿಲ್ಲ.

  2020ರಲ್ಲಿ ತೆರೆಕಂಡಿದ್ದ 'ಗುಂಜಾನ್ ಸಕ್ಸೇನಾ' ಸಿನಿಮಾದಲ್ಲಿ ಕೊನೆಯದಾಗಿ ಜಾಹ್ನವಿ ಕಾಣಿಸಿಕೊಂಡಿದ್ದರು. 'ರೋಹಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. 'ದೋಸ್ತಾನ 2' ಚಿತ್ರದಲ್ಲೂ ಜಾಹ್ನವಿ ನಟಿಸುತ್ತಿದ್ದಾರೆ. 'ಗುಡ್ ಲಕ್ ಜೆರ್ರಿ' ಚಿತ್ರದಲ್ಲೂ ಶ್ರೀದೇವಿ ಪುತ್ರಿ ಅಭಿನಯಿಸುತ್ತಿದ್ದಾರೆ.

  ದೇವರಾಣೆ ನಾನು ಇದನ್ನೆಲ್ಲ ಮಾಡಿಲ್ಲ ಎಂದ ವಿವಾದಿತ ನಿರ್ಮಾಪಕ | Filmibeat Kannada
  English summary
  Sridevi 3rd death anniversary: Actress Jhanvi Kapoor Shared a heartfelt posts for their beloved mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X