ಮುಂಬೈ ಏರ್‌ಪೋರ್ಟ್‌ನಲ್ಲಿ ಬಾಯ್‌ಫ್ರೆಂಡ್ ಜೊತೆ ಕಂಡ ಜಾನ್ವಿ ಕಪೂರ್; ವಿಡಿಯೋ ಫುಲ್ ವೈರಲ್
ಬಾಲಿವುಡ್‌ನಲ್ಲಿ ಪ್ರೀತಿ, ಮದುವೆ, ಡೇಟಿಂಗ್, ಚಾಟಿಂಗ್, ಲಿವಿಂಗ್ ರಿಲೇಷನ್‌ಶಿಪ್ ಎಲ್ಲಾ ಬಹಳ ಕಾಮನ್ ಅನ್ನುವಂತಾಗಿಬಿಟ್ಟಿದೆ. ಇಷ್ಟುದಿನ ಸೀಕ್ರೆಟ್ ಆಗಿ ಅಫೇರ್ ಇಟ್ಟುಕೊಳ್ಳುತ್ತಿದ್ದ ತಾರೆಯರು ಈಗ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ. ಕೆಲವೊಮ್ಮೆ ಇಬ್ಬರ ರಿಲೇಷನ್‌ಶಿಪ್ ಏನು ಅಂತ ಹೇಳದೇ ಕನ್‌ಫ್ಯೂಸ್ ಮಾಡುತ್ತಿರುತ್ತಾರೆ. ಇದೀಗ ಮತ್ತೆ ನಟಿ ಜಾನ್ವಿ ಕಪೂರ್ ರೂಮರ್ಡ್ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಆಗ್ತಿದೆ.
ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಇತ್ತೀಚೆಗೆ ಮುಂಬೈ ಏರ್‌ಪೋರ್ಟ್‌ನಲ್ಲಿ ತನ್ನ ಬಾಯ್‌ಫ್ರೆಂಡ್ ಜೊತೆಗೆ ದರ್ಶನ ಕೊಟ್ಟಿದ್ದಾರೆ. ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಅತಿಲೋಕ ಸುಂದರಿ ಪುತ್ರಿ ಏರ್‌ಪೋರ್ಟ್‌ನಿಂದ ಹೊರ ಬಂದಿದ್ದಾರೆ. ನೀತಾ ಅಂಬಾನಿ ಈವೆಂಟ್‌ಗೆ ಹಾಜರಾಗಿದ್ದ ಜಾನ್ವಿ ಕಪೂರ್ ಜೊತೆಗೆ ಶಿಖರ್ ಕೂಡ ಬಂದಿದ್ದಾನೆ. ಇಬ್ಬರು ವೈಟ್ ಡ್ರೆಸ್‌ನಲ್ಲಿ ಟ್ವಿನ್ನಿಂಗ್ ಔಟ್‌ಫಿಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಏರ್‌ಪೋರ್ಟ್‌ನಿಂದ ಹೊರ ಬರುತ್ತಿದ್ದಂತೆ ಇಬ್ಬರು ಬೇರೆ ಬೇರೆ ಕಾರುಗಳನ್ನು ಏರಿ ಹೊರಟುಬಿಟ್ಟಿದ್ದಾರೆ.

ಇತ್ತೀಚಿಗೆ ಜಾನ್ವಿ ಹಾಗೂ ಶಿಖರ್ ಸಾಕಷ್ಟು ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಪಬ್ಲಿಕ್ ಆಗಿಯೂ ಸುತ್ತಾಡಿದ್ದರು. ಆದರೆ ಸೋಶಿಯಲ್ ಮೀಡಿಯಾ ಗಾಸಿಪ್ ಬಗ್ಗೆ ಇಬ್ಬರು ಮಾತನಾಡುವ ಗೋಜಿಗೆ ಹೋಗಲಿಲ್ಲ. ಕ್ಲಾರಿಟಿ ಕೂಡ ಕೊಡಲಿಲ್ಲ. ಅಂದಹಾಗೆ ಶಿಖರ್ ಪೊಲಿಟಿಕಲ್ ಫ್ಯಾಮಿಲಿ ಹಿನ್ನಲೆಯಿದೆ. ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಮೊಮ್ಮಗ ಶಿಖರ್ ಪಹಾರಿಯಾ. ಜಾನ್ವಿ- ಶಿಖರ್ ನಡುವೆ ಆತ್ಮೀಯ ಒಡನಾಟ ಇದೆ. ಬಹಳ ದಿನಗಳಿಂದ ಇಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಜಾನ್ವಿ- ಶಿಖರ್ ನಡುವೆ ಬ್ರೇಕಪ್ ಆಗಿದೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಆದರೆ ಅದೆಲ್ಲಾ ಸುಳ್ಳು ಅನ್ನೋದು ಇತ್ತೀಚೆಗೆ ಇಬ್ಬರೂ ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದರಲ್ಲೇ ಗೊತ್ತಾಗುತ್ತಿದೆ. ಇನ್ನು ನೀತಾ ಅಂಬಾನಿ ಈವೆಂಟ್‌ಗೆ ಬೋನಿ ಕಪೂರ್ ಕೂಡ ಹೋಗಿದ್ದರು. ಶಿಖರ್- ಬೋನಿ ಕಪೂರ್ ಇಬ್ಬರು ಒಟ್ಟಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೊಗಳು ಕೂಡ ವೈರಲ್ ಆಗಿದೆ. ಕಾಪಿ ವಿತ್ ಕರಣ್ ಶೋನಲ್ಲೂ ಇಬ್ಬರಿಬ್ಬರ ಲವ್ವಿ ಡವ್ವಿ ಸುದ್ದಿ ಬಗ್ಗೆ ಚರ್ಚೆ ಆಗಿತ್ತು.

ಜಾನ್ವಿ ಕಪೂರ್ ಸಿನಿಮಾಗಳ ವಿಚಾರಕ್ಕೆ ಬಂದರೆ ಅಷ್ಟಾಗಿ ಸಕ್ಸಸ್ ಸಿಗುತ್ತಿಲ್ಲ. 'ಧಡಕ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆಗೆ ದೊಡ್ಡ ಬ್ರೇಕ್ ಸಿಗಲೇಯಿಲ್ಲ. ಇದೀಗ ದಕ್ಷಿಣ ಭಾರತದ ಚಿತ್ರರಂಗದತ್ತ ಬಿಂದಾಸ್ ಬೆಡಗಿ ಮುಖ ಮಾಡಿದ್ಧಾರೆ. ತೆಲುಗಿನ NTR30 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಜೋಡಿಯಾಗಿ ಮಿಂಚಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಬಹಳ ವರ್ಷಗಳಿಂದ ಜಾನ್ವಿ ಟಾಲಿವುಡ್ ಎಂಟ್ರಿ ಬಗ್ಗೆ ಚರ್ಚೆ ನಡೀತಿತ್ತು. ಅದು ಈಗ ಪಕ್ಕಾ ಆಗಿದೆ.
ಇನ್ನು ಸಿನಿಮಾಗಳಿಗಿಂತ ಜಾಸ್ತಿ ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುತ್ತಾರೆ. ಬೋಲ್ಡ್ ಫೋಟೊಶೂಟ್‌ಗಳಿಂದ ಅಭಿಮಾನಿಗಳ ಮನಗೆಲ್ಲುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಚೆಲುವೆಗೆ 21 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಇದ್ದಾರೆ. ಇತ್ತೀಚೆಗೆ ಚೆಲುವೆ ಹಂಚಿಕೊಂಡಿದ್ದ ಬಿಕಿನಿ ಫೋಟೊಗಳು ಸಖತ್ ವೈರಲ್ ಆಗಿತ್ತು. ಇನ್ನು ಬಾಲಿವುಡ್‌ನಲ್ಲಿ 'ಬಾವಲ್' ಹಾಗೂ 'ಮಿ. & ಮಿ. ಮಾಹಿ' ಸಿನಿಮಾಗಳಲ್ಲಿ ಜಾನ್ವಿ ನಟಿಸ್ತಿದ್ದಾರೆ. ಒಂದು ಸಿನಿಮಾ ಶೂಟಿಂಗ್ ಮುಗಿದಿದ್ದರೆ ಮತ್ತೊಂದರ ಚಿತ್ರೀಕರಣ ನಡೀತಿದೆ.
ಶಿಖರ್ ಪಹಾರಿಯಾಗೂ ಮುನ್ನ ಜಾನ್ವಿ ಕಪೂರ್ ಬಾಲ್ಯದ ಗೆಳೆಯ ಅಕ್ಷತ್ ರಾಜನ್ ಜೊತೆ ಡೇಟಿಂಗ್ ನಡೆಸ್ತಿದ್ದಾರೆ ಎನ್ನಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ಲವ್ ಬ್ರೇಕಪ್ ಆಗಿತ್ತು. ಆ ನಂತರ ಕೂಡ ಇಬ್ಬರು ಸ್ನೇಹಿತರಾಗಿ ಇದ್ದಾರೆ. ಇದೀಗ ಜಾನ್ವಿ ಹಾಗೂ ಶಿಖರ್ ಡೇಟಿಂಗ್ ಮದುವೆವರೆಗೂ ಹೋಗುತ್ತಾ? ಬೋನಿ ಕಪೂರ್ ಏನಂತಾರೆ? ಕಾದು ನೋಡಬೇಕು.


Click it and Unblock the Notifications











