ಬಾಲಿವುಡ್‌ನಲ್ಲಿ ಒಬ್ಬೊಬ್ಬರಿಗೆ ಒಂದೊಂದು ರೇಟ್ ಇದೆ -ಜಾಹ್ನವಿ ಕಪೂರ್ ...!

ಕಲೆ-ಕಾಸು ಬೆರೆತ ಉದ್ಯಮ ಸಿನಿಮಾ. ಕಾಸಿದ್ದರೆ ಇಲ್ಲಿ ಕೈಲಾಸವನ್ನೇ ಸೃಷ್ಟಿಸಬಹುದು. ಸದಾ ಕಾಲ ಸುದ್ದಿಯಲ್ಲಿಯೂ ಇರಬಹುದು. ಲೈಮ್ ಲೈಟಿನಲ್ಲಿ ಕೂಡ ಮಿಂಚಬಹುದು. ಈ ವಿಚಾರನ್ನ ಬೇರೆ ಯಾರು ಅಲ್ಲ ಬದಲಿಗೆ ಜಾಹ್ನವಿ ಕಪೂರ್ ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ನಲ್ಲಿರುವ ಶೋಕಿಯ ಕಥೆಯನ್ನೂ ಹೇಳಿದ್ದಾರೆ

ಹೌದು, ನೀವು ಗಮನಿಸಿರಬಹುದು. ಮನೆಯ ಬೆಡ್ ರೂಮ್ ವೊಂದನ್ನ ಹೊರತು ಪಡಿಸಿದರೆ, ಹಿಂದಿ ಉದ್ಯಮದವರ ದಿನ ನಿತ್ಯದ ಚಲನ-ವಲನ, ಹಾವ-ಭಾವ ಎಲ್ಲವೂ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಾವೆ. ಅವರು ಕುಂತರೂ ಸುದ್ದಿ. ನಿಂತರೂ ಸುದ್ದಿ. ಕಸರತ್ತು ಮಾಡಲು ಜಿಮ್ ಗೆ ತೆರಳಿದರೂ ಕೂಡ ಅಲ್ಲಿ ಇವರಿಗೆ ಎದುರಾಗುವುದು ಕ್ಯಾಮರಾಗಳೇ. ಇನ್ನೂ ರೆಸ್ಟೋರೆಂಟ್ ಗೆ ಹೋದರು ಕೂಡ ಕ್ಯಾಮರಾ ಇವರನ್ನೇ ಹಿಂಬಾಲಿಸುತ್ತೆ. ಪಾಪ ಅವರು ತುತ್ತು ಇನ್ನೂ ತಿಂದೇ ಇರಲ್ಲ, ಆಗಲೇ ಆ ವಿಡಿಯೋ ಯುಟ್ಯೂಬ್ ನಲ್ಲಿ ಅಪ್ ಲೋಡ್ ಆಗಿರುತ್ತೆ.

janhvi-kapoor-talks-paparazzi-exposes-celebrity-ration-card-urges-caution-on-gym-outfits

ಈ ಕಾರಣಕ್ಕೆ ಇದೆಲ್ಲ ಹೇಗೆ ಸಾಧ್ಯ ಎಂಬ ಜಿಜ್ಞಾಸೆ ಬಹುತೇಕರಲ್ಲಿದೆ. ಬಾಲಿವುಡ್ ಸೆಲೆಬ್ರಿಟಿಗಳು ಓಡಾಡುವ ಜಾಗದಿಂದ ಹಿಡಿದು, ಓಲಾಡುವ ಜಾಗದವರೆಗಿನ ಮಾಹಿತಿ ಕ್ಯಾಮರಾಗೆ ರವಾನೆ ಆಗುವುದು ಹೇಗೆ ಎಂಬ ಪ್ರಶ್ನೆಯೂ ಅನೇಕರಲ್ಲಿದೆ. ಇನ್ನೂ..ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ಖಾಸಗಿ ಬದುಕೇ ಇಲ್ಲದಂತಾಗಿದೆಯಲ್ಲ ಎಂಬ ಭಾವನೆ ಬಹುತೇಕರಲ್ಲಿ ಮೂಡಿದ್ದು ಇದೆ. ಆದರೆ.. ಇದೆಲ್ಲವೂ ಪ್ರೀ ಪ್ಲಾನ್ಡ್ ಎಂಬ ವಿಚಾರವನ್ನ ಜಾಹ್ನವಿ ಕಪೂರ್ ಜಗಜ್ಜಾಹೀರು ಮಾಡಿದ್ದಾರೆ.

ಹೌದು, ಅಸಲಿಗೆ ಜಾಹ್ನವಿ ಕಪೂರ್ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ಮಾಹಿ ಮುಂದಿನ ವಾರ ಬಿಡುಗಡೆಯಾಗಲಿದೆ. ಖುದ್ದು.. ಜಾಹ್ನವಿ ಕಪೂರ್‌ಗೆ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಹಗಲಿರುಳು ಅನ್ನದೇ ಈ ಚಿತ್ರಕ್ಕೆ ಬೆವರನ್ನೂ ಸುರಿಸಿದ್ದಾರೆ ಜಾಹ್ನವಿ ಕಪೂರ್. ಹೀಗಾಗಿಯೇ ಸಿಕ್ಕಾಪಟ್ಟೆ ಉತ್ಸಾಹದಲ್ಲಿ ಚಿತ್ರದ ಪ್ರಚಾರವನ್ನ ಮಾಡುತ್ತಿರುವ ಜಾಹ್ನವಿ ಕಪೂರ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಬಾಲಿವುಡ್‌ನಲ್ಲಿರುವ ಪಾಪರಾಜಿ ಸಂಸ್ಕ್ರತಿಯ ಬಗ್ಗೆ ಮಾತುಗಳನ್ನಾಡಿದ್ದಾರೆ.

janhvi-kapoor-talks-paparazzi-exposes-celebrity-ration-card-urges-caution-on-gym-outfits

ಸಿನಿಮಾದ ಪ್ರಚಾರಕ್ಕೆ ಪಾಪರಾಜಿಗಳಿಗೆ ಹಣ ನೀಡಿ ಕರೆಯಲಾಗುತ್ತೆ ಎಂದಿರುವ ಜಾಹ್ನವಿ ಕಪೂರ್, ಈಗ, 'ಮಿಸ್ಟರ್ ಆಂಡ್ ಮಿಸಸ್ ಮಹಿ' ಸಿನಿಮಾದ ಪ್ರಚಾರ ನಡೆಯುತ್ತಿದೆ. ಹಾಗಾಗಿ ನನ್ನ ಚಿತ್ರವನ್ನು ಕ್ಲಿಕ್ ಮಾಡಲು ಅವರನ್ನು ವಿಮಾನ ನಿಲ್ದಾಣಕ್ಕೆ ಬರುವಂತೆ ಮೊದಲೇ ಹೇಳಿರಲಾಗುತ್ತೆ ಎಂದಿದ್ದಾರೆ.

ಇನ್ನೂ ಚಿತ್ರದ ಪ್ರಚಾರ ಇಲ್ಲದಿದ್ದಾಗ. ನಾನು ಚಿತ್ರೀಕರಣಕ್ಕೆ ಹೋಗದಿದ್ದಾಗ, ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿರುವಾಗ ನಾನು ಇವರೆಲ್ಲರ ಕಣ್ಣಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತೇನೆ ಎಂದಿರುವ ಜಾಹ್ನವಿ ಕಪೂರ್ ಅವರಿಗೆ ನನ್ನ ಚಿತ್ರ ಬೇಕೆನಿಸದರೆ ಅಥವಾ ಯಾರಾದರೂ ನನ್ನ ಚಿತ್ರ ತೆಗೆದುಕೊಡುವಂತೆ ಕೇಳಿದಾಗ ಅವರು ನನ್ನ ಕಾರು ಹಿಂಬಾಲಿಸಿಕೊಂಡು ಬರುತ್ತಾರೆ. ಕಷ್ಟಪಟ್ಟು ನನ್ನ ಚಿತ್ರಗಳನ್ನು ತೆಗೆಯುತ್ತಾರೆ. ಏಕೆಂದರೆ ಪ್ರತಿ ಚಿತ್ರಕ್ಕೆ ಇಷ್ಟೆಂದು ಅವರು ಹಣ ಪಡೆಯುತ್ತಾರೆ ಎಂದಿದ್ದಾರೆ.

janhvi-kapoor-talks-paparazzi-exposes-celebrity-ration-card-urges-caution-on-gym-outfits

ಬಾಲಿವುಡ್​ನ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ನಟ-ನಟಿ ಆಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ನಿಮ್ಮ ಬೆಲೆ ಹೆಚ್ಚಿದ್ದರೆ, ಅವರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ, ನಿಮ್ಮ ಕಾರನ್ನು ಹಿಂಬಾಲಿಸುತ್ತಾರೆ. ದೊಡ್ಡ ಸ್ಟಾರ್ ಅಲ್ಲದಿದ್ದರೆ ನೀವೇ ಕರೆ ಮಾಡಿ ಅವರನ್ನು ಕರೆಸಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವವರ ಸಂಖ್ಯೆಯೂ ಬಾಲಿವುಡ್​ನಲ್ಲಿ ಹೆಚ್ಚೇ ಇದೆ' ಎಂದಿದ್ದಾರೆ ಜಾಹ್ನವಿ ಕಪೂರ್

ಇನ್ನೂ ತಾರೆಯರು ಕುಂತಲ್ಲಿ .. ನಿಂತಲ್ಲಿ .. ಕ್ಯಾಮರಾ ಸಮೇತ ಹಿಂಬಾಲಿಸುವ ವ್ಯಕ್ತಿಗಳು ಸೆಲೆಬ್ರಿಟಿಗಳು ಜಿಮ್‌ಗೆ ಹೋದರು ಕೂಡ ಬಿಡುವುದಿಲ್ಲ. ಹೊರಗಡೆ ನಿಂತು ಅವರು ಬರುವುದನ್ನೇ ಕಾಯುತ್ತಿರುತ್ತಾರೆ. ಬರ್ತಿದ್ದ ಹಾಗೇ ತಾರೆಯರು ಹಾಕಿರುವ ಬಟ್ಟೆ ಹೇಗಾದರೂ ಇರಲಿ ಫೋಟೋಗಳ ಮೇಲೆ ಫೋಟೋ ಕ್ಲಿಕಿಸುತ್ತಾರೆ. ಇದರಿಂದ ಅನೇಕ ಬಾರಿ ಅನೇಕ ನಾಯಕಿಯರಿಗೆ ಇರಿಸು ಮುರಿಸು ಉಂಟಾಗಿದ್ದು ಇದೆ. ಜಾಹ್ನವಿ ಕಪೂರ್ ಕೂಡ ಪಾಪರಾಜಿಗಳ ಈ ಕೆಲಸದಿಂದ ಮುಜುಗರಕ್ಕೊಳಗಾಗಿದ್ದಾರೆ.

janhvi-kapoor-talks-paparazzi-exposes-celebrity-ration-card-urges-caution-on-gym-outfits

ಈ ಕಾರಣಕ್ಕೆ ಜಿಮ್ ಆಚೆ ಬಂದು ಫೋಟೋಗಳನ್ನ ಕ್ಲಿಕಿಸಬೇಡಿ ಎಂದು ಮನವಿಯನ್ನ ಪಾಪರಾಜಿಗಳ ಬಳಿ ಮಾಡಿಕೊಂಡಿರುವ ಜಾಹ್ನವಿ ಕಪೂರ್, ಫೋಟೋ ಹೊಡೆಯುವ ಮುನ್ನ ದಯವಿಟ್ಟು ಸ್ಟಾರ್‌ಗಳು ಹಾಕಿಕೊಂಡಿರುವ ಬಟ್ಟೆಯನ್ನೊಮ್ಮೆ ನೋಡಿ ಆ ನಂತರ ಫೋಟೋ ತೆಗೆಯುವುದಾ..? ಬಿಡುವುದಾ..? ಎಂಬ ನಿರ್ಧಾರವನ್ನ ಮಾಡಿ ಎಂದಿದ್ದಾರೆ ಜಾಹ್ನವಿ ಕಪೂರ್

More from Filmibeat

English summary
Janhvi Kapoor Opens Up About Paparazzi Culture, Unveils Existence of "Celebrity Ration Card," Advocates Against Photographing in Gym Attire
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X