ತೆಲುಗಿಗೆ ಬರ್ತಾಳಂತೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್!
ನಟಿ ಜಾಹ್ನವಿ ಕಪೂರ್ ಬಾಲಿವುಡ್‌ನಲ್ಲಿ ಹೀರೊಯಿನ್ ಆಗಿ ಅದೃಷ್ಟ ಪರೀಕ್ಷೆಗಿಳಿದು, ದೊಡ್ಡ ಸಕ್ಸಸ್‌ಗಾಗಿ ಕನಸು ಕಾಣುತ್ತಿದ್ದಾರೆ. ಜಾಹ್ನವಿ ಕಪೂರ್ ಮೊದಲಿನಿಂದಲೂ ಅಂದುಕೊಂಡ ಮಟ್ಟಿಗೆ ಅಷ್ಟೇನು ಸದ್ದು ಮಾಡಲಿಲ್ಲ. ಈಕೆ ಶ್ರೀದೇವಿ ಮತ್ತು ಬೋನಿ ಕಪೂರ್ ಮಗಳು ಎನ್ನುವ ಕಾರಣಕ್ಕೆ ಈಕೆಯ ಎಂಟ್ರಿ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. 2018ರಲ್ಲಿ ಈ ಚೆಲುವೆ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಳು.
ಮೊದಲ ಚಿತ್ರ 'ಧಡಕ್'ನಲ್ಲಿ ನಾಯಕಿ ಆಗಿ ಗಮನ ಸೆಳೆದರು. ಆದರೆ ತನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಫಲ ಆಗಲಿಲ್ಲ. ಆ ಬಳಿಕ ಜಾಹ್ನವಿ ಮಾಡಿದ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಅಂತನೂ ಅನಿಸಿಕೊಂಡಿಲ್ಲ. ಹಾಗಾಗಿ ಆಕೆಯ ಅಭಿಮಾನಿಗಳು ಜಾಹ್ನವಿಯನ್ನು ಸೂಪರ್ ಹಿಟ್ ಚಿತ್ರದಲ್ಲಿ ನೋಡಬೇಕು ಎಂದು ಕಾಯುತ್ತಿದ್ದಾರೆ.
ಈಗ ಜಾಹ್ನವಿ ಕಪೂರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಜಾಹ್ನವಿ ಕಪೂರ್ ಸದ್ಯ ಸೌತ್ ಸಿನಿಮಾ ರಂಗದ ಕಡೆಗೆ ಬರುವ ಮನಸ್ಸು ಮಾಡಿದ್ದಾರೆ. ತೆಲುಗಿಗೆ ಜಾಹ್ನವಿ ಎಂಟ್ರಿ ಆಗ್ತಿದ್ದಾರೆ.

ತೆಲುಗಿಗೆ ನಟಿ ಜಾಹ್ನವಿ ಕಪೂರ್!
ಜಾಹ್ನವಿ ಕಪೂರ್ ಮೊದಲ ಚಿತ್ರ 'ಧಡಕ್' ಬಳಿಕ ಸತತವಾಗಿ ಹಿಂದಿ ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈಗ ತೆಲುಗು ಸಿನಿಮಾರಂಗದಲ್ಲಿ ಸಿನಿಮಾ ಮಾಡುವ ಸೂಚನೆ ಸಿಕ್ಕಿದೆ. ಶೀಘ್ರದಲ್ಲೇ ಜಾಹ್ನವಿ ಕಪೂರ್ ತೆಲುಗಿಗೆ ಬರಲಿದ್ದಾರೆ. ಒಳ್ಳೆಯ ಕಥೆ ಸಿಕ್ಕರೆ ತೆಲುಗು ಸೇರಿದಂತೆ ದಕ್ಷಿಣ ಭಾರತದ ಭಾಷೆಗಳಲ್ಲಿ ಖಂಡಿತಾ ನಟಿಸುತ್ತಾಳೆ ಎಂದು ಅವರ ತಂದೆ ಬೋನಿ ಕಪೂರ್ ಕಾರ್ಯಕ್ರಮ ಒಂದರಲ್ಲಿ ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಜೊತೆ ಜಾಹ್ನವಿ ಸಿನಿಮಾ?
ಅಷ್ಟಕ್ಕೂ ಜಾಹ್ನವಿ ಕಪೂರ್ ಮುಂದಿನ ಚಿತ್ರದ ಬಗ್ಗೆ ಹೆಚ್ಚು ಕುತೂಹಲ ಇತ್ತು. ಇತ್ತೀಚೆಗೆ ಜಾಹ್ನವಿ ಸೌತ್ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಕೂಡ ಹಬ್ಬಿತು. ಜೂ.ಎನ್‌ಟಿಆರ್ ಮುಂದಿನ ಚಿತ್ರಕ್ಕೆ ಜಾಹ್ನವಿ ಕಪೂರ್ ನಾಯಕಿ ಎನ್ನುವ ಸುದ್ದಿ ಹರಿದಾಡಿತ್ತು. ಜೊತೆಗೆ ವಿಜಯ್ ದೇವರಕೊಂಡ ಅಭಿನಯದ ಚಿತ್ರಕ್ಕೂ ಜಾಹ್ನವಿ ಹೆಸರು ಕೇಳಿ ಬಂದಿತ್ತು.

RRR ಚಿತ್ರ ಕೈ ಬಿಟ್ಟ ಜಾಹ್ನವಿ!
ಜಾಹ್ನವಿ ಕಪೂರ್‌ಗೆ ರಾಜಮೌಳಿ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತ್ತು. 'RRR' ಚಿತ್ರದಲ್ಲಿ ಆಲಿಯಾ ಮಾಡಿದ್ದ ಪಾತ್ರಕ್ಕೆ ಮೊದಲು ಜಾಹ್ನವಿಗೆ ಆಫರ್ ಹೋಗಿತ್ತು. ಆದರೆ ಜಾಹ್ನವಿ ಕಪೂರ್ ಆ ಪಾತ್ರದಲ್ಲಿ ನಟಿಸಲು ತಿರಸ್ಕರಿಸಿದ್ದರು. ಈಗ ಮತ್ತೆ ತೆಲುಗಿಗೆ ಬರ್ತಾರೆ ಎನ್ನಲಾಗುತ್ತಿದೆ. ಆದರೆ ಯಾವ ಸಿನಿಮಾದಲ್ಲಿ, ಯಾವ ನಾಯಕನ ಜೊತೆಗೆ ಎಂಟ್ರಿ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

ಜಾಹ್ನವಿ ಮುಂದಿನ ಚಿತ್ರ 'ಬವಾಲ್'!
ನಟಿ ಜಾಹ್ನವಿ ಕಪೂರ್ ಮುಂದಿನ ಸಿನಿಮಾ 'ಬವಾಲ್' ಸದ್ಯ ಚಿತ್ರದ ಟೈಟಲ್ ಜೊತೆಗೆ ಪೋಸ್ಟರ್ ಕೂಡ ರಿಲೀಸ್ ಮಾಡಿದೆ ಚಿತ್ರತಂಡ. 'ಬವಾಲ್' ಎಂದರೆ 'ಗದ್ದಲ' ಎನ್ನುವ ಅರ್ಥ ಬರುತ್ತದೆ. ಈ ಚಿತ್ರ ಒಂದು ನಿರ್ಧಿಷ್ಟ ಹೋರಾಟ, ಘಟನೆಯನ್ನು ಆಧರಿಸಿದ್ದಾಗಿದೆ ಎನ್ನುವ ಸುಳಿವು ಕೊಟ್ಟಿದೆ ಈ ಟೈಟಲ್.


Click it and Unblock the Notifications











