ದೇವರಲ್ಲ ಅಭಿಮಾನಿಗಳು ; ಸೆಲ್ಫಿ ಕೇಳಿದ ಫ್ಯಾನ್, ಬಾಡಿಗಾರ್ಡ್‌ಗೆ ಜಾಹ್ನವಿ ಕಪೂರ್ ಕಣ್ಸನ್ನೆ - ಮುಂದಾಗಿದ್ದೇನು ?
ಅಭಿಮಾನಿಗಳ ಅಭಿಮಾನಕ್ಕೆ ಬೆಲೆ ಕಟ್ಟಲು ಸಾಧ್ಯ ಇಲ್ಲ. ಈ ಕಾರಣಕ್ಕಾಗಿಯೇ ಕನ್ನಡದ ವರನಟ ಡಾ.ರಾಜ್ ಕುಮಾರ್ ಅಭಿಮಾನಿಗಳಲ್ಲಿ ದೇವರನ್ನು ಕಂಡರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಸೆಲೆಬ್ರಿಟಿ ಪಟ್ಟವನ್ನ ಕಟ್ಟಿದರು. ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳನ್ನ ವಿಐಪಿ ಎಂದು ಕರೆದರು. ಕನ್ನಡದ ಹಲವು ತಾರೆಯರು ಅಭಿಮಾನಿಗಳ ಅಭಿಮಾನಕ್ಕೆ ಶರಣೆಂದರು.ಪ್ರೀತಿಯಿಂದ ತಲೆ ಬಾಗಿದರು.
ಹಾಗಂಥ ಇಲ್ಲಿ ಎಲ್ಲರೂ ಅಭಿಮಾನಿಗಳ ಅಭಿಮಾನಿಗಳಲ್ಲ. ಅಭಿಮಾನಿಗಳ ಅಭಿಮಾನದ ಮೇಲೆ ಇವರಿಗೆ ಕಿಂಚಿತ್ತೂ ಪ್ರೀತಿಯೂ ಇರುವುದಿಲ್ಲ. ಬದಲಿಗೆ ಹಲವು ಬಾರಿ ಕೇವಲ ತೋರ್ಪಡಿಕೆಯ ಪ್ರೀತಿಯಾಗಿರುತ್ತದೆಯಷ್ಟೇ. ಅದರಲ್ಲಿಯೂ ಬಾಲಿವುಡ್‌ನಲ್ಲಿ ಬಹುತೇಕರಲ್ಲಿ ಅಭಿಮಾನಿಗಳನ್ನು ಗೌರವಿಸುವ ಸಂಸ್ಕಾರ ಇಲ್ಲ. ಬದಲಿಗೆ ಅಲ್ಲಿರುವುದು ಸ್ಟಾರ್ ಗಿರಿಯ ಅಹಂಕಾರ ಮಾತ್ರ. ಉದಾಹರಣೆಗೆ ಜಾಹ್ನವಿ ಕಪೂರ್ ಅವರನ್ನೇ ತೆಗೆದುಕೊಳ್ಳಿ.

ಹೌದು, ಜಾಹ್ನವಿ ಕಪೂರ್.. ಅತಿಲೋಕ ಸುಂದರಿ ಶ್ರೀದೇವಿ ಅವರ ಮುದ್ದಿನ ಮಗಳು. ತಮ್ಮ ತಂದೆ ತಾಯಿಯ ನೆರಳಿನಾಚೆ ತಮ್ಮದೇ ಅಸ್ತಿತ್ವದ ಹುಡುಕಾಟದಲ್ಲಿರುವ ಜಾಹ್ನವಿ ಚಿತ್ರರಂಗಕ್ಕೆ ಬಂದು 8 ವರ್ಷಗಳಾಗಿವೆ.
ಆದರೆ ಈ 8 ವರ್ಷದಲ್ಲಿ ಇವರ ಯಾವ ಚಿತ್ರ ಕೂಡ ಹೇಳಿಕೊಳ್ಳುವ ಗೆಲ್ಲುವನ್ನು ಕಂಡಿಲ್ಲ. ಹಾಗಂಥ ಅವಕಾಶಗಳು ಕಡಿಮೆಯಾಗಿವೆ ಅಂತೇನು ಇಲ್ಲ. ಕರಣ್ ಜೋಹರ್ ಕೃಪೆಯಿಂದ ಇವರಿಗೆ ಈ ಹಿಂದೆ ಹಲವು ಚಿತ್ರಗಳು ಸಿಕ್ಕಿವೆ.
ಆದರೆ ಈಗ ಕರಣ್ ಜೋಹರ್ ಕೈ ಕೂಡ ಇವರ ತಲೆ ಮೇಲಿಲ್ಲ. ನಿರಂತರವಾಗಿ ಅವಕಾಶ ನೀಡಿದ ಕರಣ್ ಜೋಹರ್ ಅವರ ಏಜೆನ್ಸಿಯಿಂದ ಜಾಹ್ನವಿ ಹೊರಬಂದಿದ್ದಾರೆ ಎನ್ನಲಾಗಿದೆ.
ಇಂಥಾ ಜಾಹ್ನವಿ ಕಪೂರ್ ಸದ್ಯ ರಾಮ್ ಚರಣ್ ಅಭಿನಯದ ''ಪೆದ್ದಿ'' ಚಿತ್ರದಲ್ಲಿ ಅಭಿನಯಿಸಿದ್ದಾರೆ. ತೀರಾ ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದೆ. ಇನ್ನೂ ಆಗಲೇ ಹೇಳಿದಂತೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಾರೆಯರು ತಮ್ಮನ್ನು ಬೆಳೆಸಿದ ಜನರನ್ನು ಕಣ್ಣಿಗೆ ಒತ್ತಿ ಪೂಜಿಸುತ್ತಾರೆ. ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ತಾರೆಯರನ್ನು ದೇವರಂತೆ ಪೂಜಿಸುತ್ತಾರೆ.

ಈ ಹಿನ್ನೆಲೆ ಟ್ರೇಲರ್ ಲಾಂಚ್ ನೆಪದಲ್ಲಿ ರಾಮ್ ಚರಣ್ ಮತ್ತು ಜಾಹ್ನವಿ ಕಪೂರ್ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಹಲವರು ಬಂದಿದ್ದರು. ಆ ಪೈಕಿ ಒಬ್ಬ ಅಭಿಮಾನಿ ಭದ್ರತಾ ಕೋಟೆಯನ್ನೆಲ್ಲಾ ದಾಟಿಕೊಂಡು ಜಾಹ್ನವಿ ಕಪೂರ್ ಬಳಿ ತೆರಳಿದ್ದಾರೆ. ಸೆಲ್ಫಿ ಕೇಳಿದ್ದಾರೆ.
ಆದರೆ,ಆಗಲೇ ಹೇಳಿದಂತೆ ಅಭಿಮಾನಿಗಳ ಬೆಲೆ ಇವರಿಗೆ ಗೊತ್ತಿಲ್ಲ. ಅಭಿಮಾನಿ ತನ್ನ ಹತ್ತಿರ ಬರುವುದು ಜಾಹ್ನವಿ ಕಪೂರ್‌ಗೆ ಕಿಂಚಿತ್ತೂ ಇಷ್ಟ ಇರಲಿಲ್ಲ. ತಕ್ಷಣವೇ ಅಭಿಮಾನಿ ಎದುರು ಮುಗುಳು ನಕ್ಕಂತೆ ಮಾಡುವ ಜಾಹ್ನವಿ ಕಪೂರ್, ಪಕ್ಕದಲ್ಲೇ ಇದ್ದ ತನ್ನ ಬಾಡಿಗಾರ್ಡ್‌ಗೆ ಕಣ್ಸನ್ನೆ ಮೂಲಕ ಸಿಗ್ನಲ್ ನೀಡಿದ್ದಾರೆ.
ಪಾಪ, ಆ ಅಭಿಮಾನಿ ಇನ್ನೂ ಫೋಟೊ ಕೂಡ ಕ್ಲಿಕ್ ಮಾಡಿಕೊಂಡಿರಲಿಲ್ಲ. ಅಷ್ಟರಲ್ಲಿ ಜಾಹ್ನವಿಯ ಕೋಡ್ ವರ್ಡ್ ಅರಿತ ಬಾಡಿಗಾರ್ಡ್ ಕೂಡಲೇ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಖುಷಿಯಿಂದ ಹಿರಿ ಹಿರಿ ಹಿಗ್ಗುತ್ತಿದ್ದ ಅಭಿಮಾನಿಯನ್ನು ಧರಧರನೇ ಎಳೆದೊಯ್ದಿದ್ದಾರೆ.
ನಿಜ. ಸೆಲೆಬ್ರಿಟಿಗಳು ಈಗೀಗ ಸೆಲ್ಫಿ ಸಮಸ್ಯೆಯಿಂದ ನರಳುವಂತಾಗಿದೆ. ಆದರೆ.. ಕೊನೆ ಪಕ್ಷ ಸೌಜನ್ಯವಾದರೂ ಬೇಡವೇ..? ಇಷ್ಟ ಇಲ್ಲದಿದ್ದರೆ ಜಾಹ್ನವಿ ಅಲ್ಲಿಯೇ ನಿರಾಕರಿಸಿಬಹುದಿತ್ತು. ಆದರೆ ಹತ್ತಿರ ಕರೆದು ಈ ರೀತಿ ಅಭಿಮಾನಿಯನ್ನು ನಡೆಸಿಕೊಳ್ಳುವುದು ಎಷ್ಟು ಸರಿ..?
ಹೀಗಾಗಿಯೇ ಹಲವರು ಸದ್ಯ ಜಾಹ್ನವಿ ವಿರುದ್ದ ಕೆರಳಿ ಕೆಂಡವಾಗಿದ್ಧಾರೆ. ಇಂತಹ ಜನರಿಗೆ ನಾವು ಯಾಕೆ ಇಷ್ಟೊಂದು ಪ್ರಾಮುಖ್ಯತೆ ಕೊಡುತ್ತೇವೋ ನನಗಂತೂ ಅರ್ಥವಾಗುತ್ತಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ತಾವು ಇವತ್ತು ಈ ಸ್ಥಾನದಲ್ಲಿ ಇರಲು ಸಾರ್ವಜನಿಕರೇ ಕಾರಣ ಮತ್ತು ಜನರಿಲ್ಲದಿದ್ದರೆ ತಾವು ಶೂನ್ಯ ಎಂಬುದನ್ನು ಈ ಸೆಲೆಬ್ರಿಟಿಗಳು ಸಂಪೂರ್ಣವಾಗಿ ಮರೆತುಬಿಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಯಾವುದೇ ಕಷ್ಟವಿಲ್ಲದೆ, ತಂದೆ ತಾಯಿಯ ಹೆಸರು ಹೇಳಿಕೊಂಡು ಸುಲಭವಾಗಿ ಅವಕಾಶ ಪಡೆಯುವ ಈ ಸ್ಟಾರ್ ಕಿಡ್ಸ್‌ಗಳಿಗೆ ತಳಮಟ್ಟದ ಅಭಿಮಾನಿಗಳ ಬೆಲೆ ತಿಳಿಯುವುದಿಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications