ಬಾಯ್‌ಫ್ರೆಂಡ್ ಜೊತೆಗೆ ಉಜ್ಜಯಿನಿಯ ಮಹಾಕಾಳೇಶ್ವರನ ಆಶೀರ್ವಾದ ಪಡೆದ ನಟಿ ಜಾನ್ವಿ ಕಪೂರ್

ಸೋಮವಾರ (ಡಿಸೆಂಬರ್ 4 ರಂದು) ಬಾಲಿ೦ವುಡ್ ನಟಿ ಜಾನ್ವಿ ಕಪೂರ್ ತನ್ನ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಜೊತೆಗೆ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಖ್ಯಾತ ನಟಿ ಶ್ರೀದೇವಿ ಅವರ ಮಗಳಾಗಿರುವ ಜಾನ್ವಿ ಕಪೂರ್, ಶಿಖರ್ ಪಹಾರಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.

ಇಬ್ಬರು ಕೂಡ ಜವಾನ್ ನಂತರ ಸೂಪರ್ ಹಿಟ್ ಸಿನಿಮಾ ನೀಡಿರುವ ನಿರ್ದೇಶಕ ಅಟ್ಲಿ ಜೊತೆಯಲ್ಲಿ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಆಗಾಗ್ಗೆ ಜೊತೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಒಟ್ಟಿಗೆ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ.

Janhvi Kapoor visits Ujjains Mahakaleshwar temple with boyfriend Shikhar Pahariya with Atlee

ಮಹಾಕಾಳೇಶ್ವರನ ಸನ್ನಿಧಿಯಲ್ಲಿ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ

ನಿರ್ದೇಶಕ ಅಟ್ಲಿ, ಜಾನ್ವಿ ಕಪೂರ್ ಮತ್ತು ಆಕೆಯ ರೂಮರ್ ಬಾಯ್‌ಫ್ರೆಂಡ್ ಉದ್ಯಮಿ ಶಿಖರ್ ಪಹಾರಿಯಾ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಳಗ್ಗೆ 4 ಗಂಟೆಗೆ ಭಸ್ಮ ಆರತಿ ಮಾಡಿದ್ದಾರೆ. ಈ ವೇಳೆ ನಟಿ ಜಾನ್ವಿ ಕಪೂರ್ ಗುಲಾಬಿ ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಶಿಖರ್ ಪಹಾರಿಯಾ ಮತ್ತು ಅಟ್ಲಿ ಬಿಳಿ ಕುರ್ತಾ ಧರಿಸಿದ್ದರು.

ದೇವಾಲಯದಲ್ಲಿ ಮುಂಜಾನೆ ನಡೆಯುವ ವಿಶೇಷ ಪೂಜೆಯ ಆಚರಣೆಗಳಲ್ಲಿಯೂ ನಟಿ ಭಾಗವಹಿಸಿದ್ದರು. ಪೂಜೆಯ ವೇಳೆ ಶಿಖರ್ ಜೊತೆಗಿದ್ದರು. ದೇವಾಲಯದ ಅರ್ಚಕರು ಜಾನ್ವಿ ಕಪೂರ್‌ಗೆ ಆಶೀರ್ವಾದ ಮಾಡಿ ಬಾಬಾ ಮಹಾಕಾಲ್ ಅವರ ಫೋಟೋವನ್ನು ನೀಡಿದ್ದಾರೆ.

ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಸಂಬಂಧ

ಮಧ್ಯಪ್ರದೇಶದ ಉಜ್ಜಯಿನಿ ದೇವಾಲಯಕ್ಕೆ ಭೇಟಿ ನೀಡಿದ ಯಾವುದೇ ಫೋಟೋಗಳನ್ನು ಜಾನ್ವಿ ಕಪೂರ್ ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿಲ್ಲ. ದೇವರನ್ನು ಅತಿಯಾಗಿ ನಂಬುವ ಅವರು ಯಾವಾಗಲೂ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಇತ್ತೀಚೆಗೆ ಅವರ ಜೊತೆಗೆ ಶಿಖರ್ ಪಹಾರಿಯಾ ಕೂಡ ಹೋಗುತ್ತಿದ್ದಾರೆ. ಇಬ್ಬರು ಬಹಳ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ.

Janhvi Kapoor visits Ujjains Mahakaleshwar temple with boyfriend Shikhar Pahariya with Atlee

ನಟಿ ಶ್ರೀದೇವಿ ಅವರ ಹಿರಿಯ ಪುತ್ರಿ ಜಾನ್ವಿ ಕಪೂರ್, ತಾವು ಶಿಖರ್ ಪಹಾರಿಯಾ ಅವರನ್ನು ಡೇಟ್ ಮಾಡುತ್ತಿರುವ ಕುರಿತು ಎಲ್ಲಿಯೂ ಹೇಳಿಲ್ಲ. ಆದರೆ, ಯಾವುದೇ ವದಂತಿಯನ್ನು ನಿರಾಕರಿಸಿಲ್ಲ. ಇಬ್ಬರೂ ಸಾಮಾನ್ಯವಾಗಿ ಪಾಪರಾಜಿಗಳ ಫೋಟೋಗಳು ಮತ್ತು ವೀಡಿಯೊಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಶಿಖರ್ ಪಹಾರಿಯಾ ಮತ್ತು ಜಾನ್ವಿ ಸಂಬಂಧ ಹೊಸದಲ್ಲ!

ಶಿಖರ್ ಪಹಾರಿಯಾ ಜೊತೆಗಿನ ಜಾನ್ವಿ ಕಪೂರ್ ಸಂಬಂಧವು ಹೊಸದಲ್ಲ. ವರದಿಗಳ ಪ್ರಕಾರ, ಶಿಖರ್ ಹಲವಾರು ವರ್ಷಗಳ ಹಿಂದೆ ಜಾನ್ವಿ ಜೊತೆ ಸಂಬಂಧ ಹೊಂದಿದ್ದರು. ಆದರೆ, ಕೆಲವು ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದರು. ಕಳೆದ ವರ್ಷ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ ಜಾನ್ವಿ ಕಪೂರ್ ಮತ್ತು ಶಿಖರ್ ಪಹಾರಿಯಾ ಅವರ ಜೊತೆಗಿನ ಹಿಂದಿನ ಸಂಬಂಧವನ್ನು ಬಹುತೇಕ ದೃಢಪಡಿಸಿದವರು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್.

ಶಿಖರ್ ಪಹಾರಿಯಾ ಮತ್ತು ಜಾನ್ವಿ ಕಪೂರ್ ಮುರಿದು ಹೋಗಿದ್ದ ಸಂಬಂಧವನ್ನು ಮತ್ತೆ ಕಟ್ಟುತ್ತಿದ್ದಾರೆ ಎಂದು ವರದಿಯಾಗಿದೆ. ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ ಮತ್ತು ಉದ್ಯಮಿ. ಎಲ್ಲ ಕಡೆಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಬಾಲಿವುಡ್‌ನ ಯೂತ್ ಕಪಲ್‌ಗಳಲ್ಲಿ ಒಂದಾಗಿದೆ.

More from Filmibeat

English summary
Janhvi Kapoor, boyfriend Shikhar Pahariya visits Mahakaleshwar temple.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X