For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸಿನಿಮಾ ಮಾಡುತ್ತಾರಂತೆ ಜಾಹ್ನವಿ ಕಪೂರ್!

  |

  ಸ್ಟಾರ್ ನಟಿ ದಿ.ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಬಗ್ಗೆ ಇದ್ದ ಒಂದು ಕುತೂಹಲಕ್ಕೆ ತೆರೆ ಬಿದ್ದಿದೆ. ಜಾಹ್ನವಿ ಕಪೂರ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಇದದ್ದ ಕುತೂಹಲ ಅಂದರೆ ಜಾಹ್ನವಿ ಯಾವಾಗ ಸೌತ್‌ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನುವುದು. ಜಾಹ್ನವಿ ತಮ್ಮ ಸಿನಿ ಜರ್ನಿಯನ್ನು ಶುರು ಮಾಡಿ ವರ್ಷಗಳೇ ಕಳೆದರೂ ಜಾಹ್ನವಿ ಸೌತ್‌ಗೆ ಬರೋ ಬಗ್ಗೆ ಮಾತನಾಡಿರಲಿಲ್ಲ. ಈಗ ಸಂದರ್ಶನ ಒಂದರಲ್ಲಿ ಜಾಹ್ನವಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸೌತ್‌ ಸಿನಿಮಾಗಳಲ್ಲಿ ಅಭಿನಯಿಸಲು ಕಾಯುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  ದಕ್ಷಿಣ ಭಾರತದಿಂದಲೇ ಸೂಪರ್ ಸ್ಟಾರ್ ಪಟ್ಟ ಹೊತ್ತ ನಟಿ ಶ್ರೀದೇವಿ!

  ಸೌತ್ ಚಿತ್ರರಂಗದಲ್ಲಿಯೇ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟಿ ಶ್ರೀದೇವಿಗೆ ಬಾಲಿವುಡ್‌ನಲ್ಲೂ ದೊಡ್ಡ ಹೆಸರಿದೆ. ಅಮ್ಮನಂತೆಯೇ ಸಿನಿಮಾ ಮಾಡಿ ಹೆಸರು ಮಾಡೋ ಇಂಗಿತವನ್ನ ಜಾಹ್ನವಿ ಕಪೂರ್ ವ್ಯಕ್ತ ಪಡಿಸಿದ್ದಾರೆ. ಇಷ್ಟು ದಿನ ಸೌತ್ ಅಭಿಮಾನಿಗಳಿಗೆ ಇದ್ದ ಕುತೂಹಲವು ಅದೇ. ಇದಕ್ಕೀಗ ಸ್ವತಃ ಜಾಹ್ನವಿ ಕಪೂರ್ ಉತ್ತರಿಸಿದ್ದಾರೆ. ಸದ್ಯದಲ್ಲಿಯೇ ಜಾಹ್ನವಿ ಸೌತ್ ಸಿನಿಮಾವೊಂದನ್ನು ಅನೌನ್ಸ್ ಮಾಡಲಿದ್ದಾರಂತೆ. ಜಾಹ್ನವಿ ಗೆ ಹೆಚ್ಚಾಗಿ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಲು ತುಂಬಾ ಆಸೆ ಇದೆಯಂತೆ. ಈ ವಿಚಾರವನ್ನ ಸಂದರ್ಶನದಲ್ಲಿ ಜಾಹ್ನವಿ ಹಂಚಿಕೊಂಡಿದ್ದಾರೆ.

  ಇನ್ನೂ ಓಟಿಟಿಯಲ್ಲಿ ರಿಲೀಸ್ ಆಗಿರುವ ಜಾಹ್ನವಿ ಕಪೂರ್ ಅಭಿನಯಿಸಿರುವ ಸಿನಿಮಾಗಳಿಗೆ ಹೆಚ್ಚಿನದಾಗಿ ಸೌತ್ ಅಭಿಮಾನಿಗಳಿದ್ದಾರೆ. ಈ ವಿಚಾರ ತಿಳಿದ ಬಳಿಕವಂತೂ ಜಾಹ್ನವಿ ತುಂಬಾನೇ ಖುಷಿಯಾಗಿದ್ದಾರಂತೆ. ಹಾಗಾಗಿ ಜಾಹ್ನವಿ ಸೌತ್‌ನಲ್ಲಿ ಒಂದು ಒಳ್ಳೆಯ ಸಿನಿಮಾ ಮಾಡಲು ತೆರೆ ಮರೆಯಲ್ಲೇ ತಯಾರಿ ನಡೆಸಿ ಕೊಳ್ಳುತ್ತಿದ್ದಾರೆ. ಈಗಾಗಲೇ ಜಾಹ್ನವಿಗೆ ಸೌತ್‌ನಿಂದ ಸಾಲು-ಸಾಲು ಆಫರ್ಸ್‌ಗಳು ಬರುತ್ತಿವೆಯಂತೆ. ಜಾಹ್ನವಿ ಕೂಡ ಕಥೆಗಳನ್ನ ಕೇಳುತ್ತಿದ್ದಾರೆ.

  ಜಾಹ್ನವಿಗೆ ಒಂದಕ್ಕಿಂತ ಒಂದು ಸಿನಿಮಾ ಕಥೆಗಳು ತುಂಬಾನೆ ಇಷ್ಟ ಆಗಿವೆ ಅಂತೆ. ಸಿನಿಮಾ ಕಥೆಗಳು ಅದ್ಭುತ ಎನಿಸುವ ಕಾರಣದಿಂದಾಗಿ ಜಾಹ್ನವಿ ಆಯ್ಕೆಯಲ್ಲಿ ತುಂಬ ಮುತುವರ್ಜಿ ವಹಿಸಿದ್ದಾರಂತೆ. ತನಗೆ ಇಷ್ಟವಾಗುವ ಕಥೆಯೊಂದಿಗೆ ಸದ್ಯದಲ್ಲಿಯೇ ಸಿನಿಮಾವನ್ನು ಜಾಹ್ನವಿ ಪ್ರಕಟ ಮಾಡಲಿದ್ದಾರೆ. ಆದ್ರೆ ಜಾಹ್ನವಿ ಆಸೆಯಂತೆ ಮೊದಲು ಮಲಯಾಳಂನಲ್ಲಿ ಸಿನಿಮಾ ಮಾಡೋ ಸಾಧ್ಯತೆಯೂ ಹೆಚ್ಚಾಗಿದೆ.

  ಬಾಲಿವುಡ್ ಧಡಕ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಜಾಹ್ನವಿ ಎಂಟ್ರಿ ಕೊಟ್ಟಿದ್ದಾರೆ. ಆದರೂ ಜಾಹ್ನವಿಗೆ ಅದೃಷ್ಟದ ಬಾಗಿಲು ತೆರೆದಿಲ್ಲ ಅಂತಲೇ ಹೇಳ ಬಹುದು. ಯಾಕಂದ್ರೆ ಜಾಹ್ನವಿ ಇಲ್ಲಿ ತನಕ ಅಭಿನಯಿಸಿರುವ ಸಿನಿಮಾಗಳು ಅಂದುಕೊಂಡ ಮಟ್ಟಿಗೆ ಯಶಸ್ಸು ಕಂಡಿಲ್ಲ. ಸದ್ಯ ಜಾಹ್ನವಿ ಕಪೂರ್ ಸೌತ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ.

  ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗಕದ ಸಿದ್ದ ಸೂತ್ರ ಬದಲಾಗಿದೆ. ಬಾಲಿವುಡ್ ಮತ್ತು ಸೌತ್ ಚಿತ್ರರಂಗದ ನಡುವಿನ ಅಂತರ ಮಾಯಾವಾಗಿದೆ. ಇಲ್ಲಿನವರು ಅಲ್ಲಿಗೆ ಹೋಗುವುದು, ಅಲ್ಲಿನವರು ಇಲ್ಲಿ ಬಂದು ಸಿನಿಮಾ ಮಾಡುವುದು ಸಾಮಾನ್ಯ ಎನ್ನುಂತಾಗಿದೆ. ನಟ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ, ನಯನ್‌ತಾರಾ ಬಾಲಿವುಡ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತ ಬಾಲಿವುಡ್ ನಿಂದ ಅನನ್ಯಾ ಪಾಂಡೆ, ಆಲಿಯಾ ಭಟ್ ಅಜಯ್ ದೇವ್‌ಗನ್‌, ಸೈಫ್ ಅಲಿ ಖಾನ್ ಸೇರಿದಂತೆ ಸಾಕಷ್ಟು ತಾರೆಯರು ಸೌತ್ ಸಿನಿಮಾರಂಗದಲ್ಲಿ ತಮ್ಮ ಸಿನಿ ಜರ್ನಿಯನ್ನು ಸೌತ್‌ನಲ್ಲಿ ಶುರು ಮಾಡಿದ್ದಾರೆ. ಈಗ ಇದೇ ಸಾಲಿಗೆ ಜಾಹ್ನವಿ ಕೂಡ ಸೇರಿಕೊಳ್ಳುತ್ತಿದ್ದಾರೆ.

  English summary
  Janhvi Kapoor Wants To Act In Malayalam Movies, Will Soon Enter To South Indian Film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X