ಜಾಹ್ನವಿ ಕಪೂರ್ ತೊಟ್ಟಿದ್ದ ಸೀರೆ ಹಿಂದೆ 'ಅಮ್ಮ'ನ ಕಥೆಯಿದೆ

By Bharath Kumar

ಇತ್ತೀಚಿಗಷ್ಟೆ 65ನೇ ಸಾಲಿನ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ದೆಹಲಿಯಲ್ಲಿ ನೆರವೇರಿತ್ತು. ದಿವಂಗತ ನಟಿ ಶ್ರೀದೇವಿಗೆ 'ಮಾಮ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿತ್ತು. ಶ್ರೀದೇವಿ ಪರವಾಗಿ ಮಗಳು ಜಾಹ್ನವಿ ಕಪೂರ್, ಪತಿ ಬೋನಿ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.

ಈ ಸಮಾರಂಭದಲ್ಲಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಹಲವು ವಿಷ್ಯಗಳಿಗೆ ಗಮನ ಸೆಳೆದಿದ್ದಾರೆ. ಅದರಲ್ಲೂ ಜಾಹ್ನವಿ ಕಪೂರ್ ಅಮ್ಮನ ಸೀರೆಯುಟ್ಟು ಪ್ರಶಸ್ತಿ ಪಡೆದುಕೊಂಡಿದ್ದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.

Janhvi Kapoor wore the saree that Sridevis

ಹೌದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾಹ್ನವಿ ಕಪೂರ್ ತೊಟ್ಟಿದ್ದ ಸೀರೆ ಶ್ರೀದೇವಿ ಅವರದ್ದು. ಅಮ್ಮನಿಗೆ ಸಿಕ್ಕಿದ ಪ್ರಶಸ್ತಿಯನ್ನ, ಅಮ್ಮನ ಪರವಾಗಿ ಪಡೆದ ಮಗಳು ಅಮ್ಮನ ಸೀರೆಯನ್ನ ತೊಟ್ಟು ಪಡೆದುಕೊಂಡಿದ್ದು, ಇದು ಸ್ವತಃ ಶ್ರೀದೇವಿ ಅವರೇ ಪ್ರಶಸ್ತಿ ಪಡೆದುಕೊಂಡಂತೆ ಆಗಿದೆ ಎನ್ನುತ್ತಿದ್ದಾರೆ.

ಅಂದ್ಹಾಗೆ, 2012 ರಲ್ಲಿ ತೆಲುಗು ನಟ ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ ಅವರ ಮದುವೆ ಸಮಾರಂಭದಲ್ಲಿ ಶ್ರೀದೇವಿ ಈ ಸೀರೆಯಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 6 ವರ್ಷಗಳ ಬಳಿಕ ಈಗ ಅದೇ ಸೀರೆಯಲ್ಲಿ ಮಗಳು ಕಾಣಿಸಿಕೊಂಡು ಅಚ್ಚರಿ ನೀಡಿದ್ದಾರೆ.

Janhvi Kapoor wore the saree that Sridevis

ಇನ್ನು ಮತ್ತೊಂದೆಡೆ ಪತಿ ಬೋನಿ ಕಪೂರ್ ಅವರ ಬಗ್ಗೆ ಶ್ರೀದೇವಿ ಅತಿ ಹೆಚ್ಚು ಕಾಳಜಿ ತೋರುತಿದ್ದರು. ಈಗ ಪತ್ನಿಯನ್ನ ಕಳೆದುಕೊಂಡ ಬೋನಿ ಕಪೂರ್ ಗೆ ಜಾಹ್ನವಿ ಕಪೂರ್ ಹೆಚ್ಚ ಕಾಳಜಿ ವಹಿಸಿಕೊಂಡಿದ್ದಾರೆ. ಶ್ರೀದೇವಿಯಂತೆ ಮಗಳು ಕೂಡ ಅಪ್ಪನಿಗೆ ಪ್ರೀತಿ ತೋರುತ್ತಿದ್ದಾರೆ.

ಸಂಬಂಧಿಕರೊಬ್ಬರ ಮದುವೆಗೆ ಎಂದು ಹೋಗಿದ್ದ ನಟಿ ಶ್ರೀದೇವಿ ಫೆಬ್ರವರಿ 24 ರಂದು ದುಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಹೋಟೆಲ್ ರೂಂನಲ್ಲಿದ್ದ ಬಾತ್ ಟಾಬ್ ನಲ್ಲಿ ಮುಳಗಿ ಸಾವನ್ನಪ್ಪಿದ್ದರು.

More from Filmibeat

English summary
Sridevi's daughter Janhvi Kapoor wore a Manish Malhotra saree from her mother's personal collection to the 65th National Award ceremony, where she received her late mother's Best Actress award. Sridevi won Best Actress National Award posthumously for her role in MOM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X