''ನಿನ್ನ ಹೆಂಡತಿ ಮೇಲೆ ನನಗೆ ಲವ್‌ ಆಗಿದೆʼ' ಎಂದಿದ್ದ ಉಷಾ ಉತ್ತುಪ್ ಎರಡನೇ ಪತಿ...!

ತಮ್ಮ ಚಿನ್ನದ ಕಂಠದಿಂದನೇ ಮೋಡಿ ಮಾಡಿದವರು ಉಷಾ ಉತ್ತುಪ್. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ ಭಾಷೆಯಲ್ಲಿ ಹಾಡುಗಳನ್ನು ಹಾಡಿರುವ ಉಷಾ ಉತ್ತುಪ್ ಕ್ವೀನ್ ಆಫ್ ಇಂಡಿಯನ್ ಪಾಪ್ ಕೂಡ ಹೌದು.

ಸಂಗೀತ ಉದ್ಯಮ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿರುವ ಉಷಾ ಉತ್ತುಪ್ ಅವರ ಎರಡನೇ ಪತಿ ಜಾನಿ ಚಾಕೋ ಉತ್ತುಪ್ ಸೋಮವಾರ ಹೃದಯಾಘಾತದಿಂದ ಕೋಲ್ಕತ್ತಾದಲ್ಲಿ ಕೊನೆಯುಸಿರೆಳೆದಿದ್ದಾರೆ.ಇಂದು ]ಜು.9]ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ

Jani Chacko Uthup husband of singer Usha Uthup passes away due to a heart attack

78 ವರ್ಷದ ಜಾನಿ ಚಾಕೋ ಕೋಲ್ಕತಾದ ತಮ್ಮ ಮನೆಯಲ್ಲಿ ಟಿವಿ ನೋಡುವಾಗ ಸ್ಥಳದಲ್ಲಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲ ತಿಳಿಸಿದೆ.

ಜಾನಿ ಜಾಕೋ ಮತ್ತು ಉಷಾ ಉತ್ತುಪ್ ಅವರ ಪ್ರೀತಿಯ ಸಂಕೇತವಾಗಿ ಈ ಜೋಡಿಗೆ ಸನ್ನಿ ಮತ್ತು ಅಂಜಲಿ ಎಂಬ ಮಗ-ಮಗಳು ಇದ್ದಾರೆ. ಅಂದ್ಹಾಗೇ ಟೀ ಪ್ಲಾಂಟೇಷನ್ ಬ್ಯುಸಿನೆಸ್ ನಡೆಸುತ್ತಿದ್ದ ಜಾನಿ ಜಾಕೋ 1970ರಲ್ಲಿ ಉಷಾ ಉತ್ತುಪ್ ಅವರನ್ನು ಕೋಲ್ಕತ್ತಾ ನೈಟ್‌ಕ್ಲಬ್ ಆದ ಟ್ರಿಂಕಾಸ್‌ ನಲ್ಲಿ ಭೇಟಿಯಾಗಿದ್ದರು. ಜಾನಿ ಜಾಕೋ ಅವರಿಗೆ ಮೊದಲ ನೋಟದಲ್ಲಿಯೇ ಪ್ರೇಮಾಂಕುರವೂ ಆಗಿತ್ತು.

Jani Chacko Uthup husband of singer Usha Uthup passes away due to a heart attack

ಆದರೆ, ಉಷಾ ಉತ್ತುಪ್ ಅವರಿಗೆ ಅದಾಗ್ಲೇ ರಾಮು ಅವರ ಜೊತೆ ಮದುವೆ ಆಗಿತ್ತು. ಹೀಗಾಗಿ ತಮ್ಮ ಮನದ ಭಾವನೆಯನ್ನು ಮನದಲ್ಲಿಯೇ ಭಾವನೆ ಬಚ್ಚಿಟ್ಟುಕೊಂಡ ಜಾನಿ ಜಾಕೋ ಅದೊಂದು ದಿನ ಉಷಾ ಉತ್ತುಪ್ ಅವರ ಗಂಡ ರಾಮು ಅವರಿಗೆ ಚೈನೀಸ್ ರೆಸ್ಟೋರೆಂಟ್‌ನಲ್ಲಿ ಮಾತೊಂದನ್ನು ಹೇಳಿದ್ದರು. ಉಷಾ ಮತ್ತು ಆಕೆಯ ಭಾವನೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನು ನಿನ್ನ ಹೆಂಡತಿಯನ್ನು ಮನಸಾರೆ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದರು. ಜಾನಿ ಜಾಕೋ ಅವರ ಈ ಮಾತು ಕೇಳಿ ದಿಗ್ಭ್ರಾಂತಗೊಂಡ ರಾಮು, ಆ ನಂತರ ಸೀದಾ ಉಷಾ ಉತ್ತುಪ್ ಅವರಲ್ಲಿಯೇ ಜಾನಿ ಜಾಕೋ ಮೇಲೆ ನಿನಗೂ ಅದೇ ಭಾವನೆ ಇದೆಯಾ ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಪತಿಯ ಈ ಪ್ರಶ್ನೆಗೆ ಅಂದು ಯಾವುದೇ ಅಳುಕಿಲ್ಲದೇ ಉತ್ತರಿಸಿದ್ದ ಉಷಾ ಉತ್ತುಪ್ 'ಹೌದುʼ ಎಂದು ಉತ್ತರಿಸಿದ್ದರು.

ಇಲ್ಲಿಂದ ರಾಮು ಮತ್ತು ಉಷಾ ಅವರ ಸಂಸಾರದಲ್ಲಿ ಬಿರುಕು ಮೂಡಿತು.ಹೆಚ್ಚು ಕಡಿಮೆ ಐದು ವರ್ಷಗಳ ದಾಂಪತ್ಯ ಜೀವನ ನಡೆಸಿದ ಇಬ್ಬರು ಆ ನಂತರ ದೂರವಾದರು. ರಾಮು ಅವರಿಂದ ದೂರವಾದ ನಂತರ ಉಷಾ ಅವರು ಜಾನಿ ಜಾಕೋ ಉತ್ತುಪ್ ಅವರನ್ನು ಮದುವೆಯಾದರು. ವಿಕಾಸ್ ಕುಮಾರ್ ಝಾ ಅವರ 2022 ರ ಪುಸ್ತಕ ʻದಿ ಕ್ವೀನ್ ಆಫ್ ಇಂಡಿಯನ್ ಪಾಪ್: ದಿ ಅಥರೈಸ್ಡ್ ಬಯೋಗ್ರಫಿ ಆಫ್ ಉಷಾ ಉತ್ತುಪ್‌ದಲ್ಲಿ ಜಾನಿ ಜಾಕೋ ಮತ್ತು ಉಷಾ ಉತ್ತುಪ್ ಅವರ ಈ ಪ್ರೇಮಾನುರಾಗದ ಮಾಹಿತಿಯನ್ನೂ ಉಲ್ಲೇಖಿಸಲಾಗಿದೆ.

More from Filmibeat

English summary
Singer Usha Uthup's husband, Jani Chacko Uthup, aged 78, passed away in Kolkata on Monday. He experienced a cardiac arrest at home during the night while watching TV, according to a PTI report. Despite being rushed to the hospital, he was declared deceased.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X