ಜನ್ನತ್ ಟು ಮನ್ನತ್: ಬಾಲಿವುಡ್ ಬಾದ್ ಶಾ ಶಾರುಖ್ ಬಳಿಯಿರುವ 6 ಐಷಾರಾಮಿ ಮನೆಗಳಿವು!

ವಿಶ್ವದ ಯಶಸ್ವಿ ನಟರಲ್ಲಿ ಶಾರುಖ್ ಖಾನ್ ಕೂಡ ಒಬ್ಬರು. ಬಾಲಿವುಡ್ ಬಾದ್ ಶಾ, ಕಿಂಗ್ ಖಾನ್ ಎಂದೇ ಹೆಸರು ಪಡೆದಿರುವ ಶಾರುಖ್​​ ಭಾರತ ಮಾತ್ರವಲ್ಲದೇ, ವಿಶ್ವದ ಮೂಲೆ-ಮೂಲೆಯಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಾಲಿವುಡ್ ನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದ ಶಾರುಖ್, ವಿಶ್ವದ 4ನೇ ಶ್ರೀಮಂತ ನಟರಾಗಿ ಹೊರಹೊಮ್ಮಿದ್ದಾರೆ.

ಇಂದು ಬಾರಿ ಆಸ್ತಿಗಳನ್ನು ಹೊಂದಿರುವ ಶಾರುಖ್ ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಬದಲಿಗೆ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಈವರೆಗೆ ೮೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶಾರುಖ್ ಅವರ ಒಟ್ಟಾರೆ ಆಸ್ತಿ 770 ಮಿಲಿಯನ್ ಡಾಲರ್. ಶಾರುಖ್ ಖಾನ್ ಮತ್ತು ಅವರ ಕುಟುಂಬ ಐಷಾರಾಮಿ ಜೀವನವನ್ನು ಇಷ್ಟಪಡುತ್ತಾರೆ. ಕಿಂಗ್ ಖಾನ್ ಒಡೆತನದ 'ಮನ್ನತ್' ಮನೆ ತುಂಬಾ ಜನಪ್ರಿಯವಾಗಿದೆ. ಮುಂಬೈಗೆ ಬಂದವರು ಒಮ್ಮೆಯಾದರೂ ಮನ್ನತ್ ನೋಡಬೇಕು ಎಂದುಕೊಳ್ಳುತ್ತಾರೆ. ಇದನ್ನು ಹೊರತುಪಡಿಸಿ ಜಗತ್ತಿನಾದ್ಯಂತ ಶಾರುಖ್ ಹಲವಾರು ಮನೆಗಳನ್ನು ಹೊಂದಿದ್ದಾರೆ. ದುಬೈನಿಂದ ಹಿಡಿದು ಲಾಸ್ ಏಂಜಲೀಸ್ ವರೆಗೆ ದುಬಾರಿ ಮನೆಗಳನ್ನು ಹೊಂದಿದ್ದಾರೆ. ಶಾರುಖ್ ಅವರ ಆರು ದುಬಾರಿ ಆಸ್ತಿಗಳ ಮಾಹಿತಿ ಇಲ್ಲಿದೆ.

6 Luxurious homes of bollywood actor sha rukh khan Category: Bollywood

ಮನ್ನತ್

ಮನ್ನತ್

ಶಾರುಖ್ ಖಾನ್ ಅವರ 'ಮನ್ನತ್' ಮನೆ ಜನಪ್ರಿಯವಾಗಿದೆ. ಮುಂಬೈನ ಬಾಂದ್ರಾದ ಅತಿ ದುಬಾರಿ ಪ್ರದೇಶದಲ್ಲಿರುವ ಮನ್ನತ್ ಇದೆ. ಅಂದಾಜು 200 ಕೋಟಿ ರೂ. ಬೆಲೆಬಾಳುವ ಈ ಮನೆಯಿಂದ ಸಮುದ್ರ ಕಾಣುತ್ತದೆ. 'ಮನ್ನತ್' ಮನೆಯಲ್ಲಿ ಶಾರುಖ್ ಪತ್ನಿ ಗೌರಿ ಖಾನ್, ಮಕ್ಕಳಾದ ಸುಹಾನಾ ಖಾನ್, ಅಬ್ರಹಾಂ ಜೊತೆ ಶಾರುಖ್ ವಾಸಿಸುತ್ತಾರೆ. ಈ ಮನೆಯಲ್ಲಿ ಜಿಮ್, ಈಜುಕೊಳ, ಥಿಯೇಟರ್, ಬೃಹತ್ ಕೊಠಡಿಗಳಿವೆ.

ಜನ್ನತ್

ಜನ್ನತ್

ಶಾರುಖ್ ಖಾನ್ ಅವರಿಗೆ ದುಬೈನ ಗೋಲ್ಡನ್ ವೀಸಾ ಇದೆ. ದುಬೈ ಟೂರಿಸಂ ರಾಯಾವಭಾರಿಯಾಗಿರುವ ಕಿಂಗ್ ಖಾನ್, ಪಾಮ್ ಜುಮೆರೈನಲ್ಲಿ ಖಾಸಗಿ ದ್ವೀಪ ಹೊಂದಿದ್ದಾರೆ. ಈ ಐಷಾರಾಮಿ ಮನೆಗೆ ಜನ್ನತ್ ಎಂದು ಹೆಸರಿಡಲಾಗಿದೆ. ಸುಮಾರು 18 ಕೋಟಿ ರೂ. ಬೆಲೆಬಾಳುವ ಈ ಮನೆಯಲ್ಲಿ 6 ಕೊಠಡಿಗಳಿವೆ. ಜೊತೆಗೆ ಎರಡು ರಿಮೋಟ್ ಕಂಟ್ರೋಲ್ ಗ್ಯಾರೇಜ್, ಈಜುಕೊಳವಿದೆ.

 ಲಾಸ್ ಏಂಜಲೀಸ್ ವಿಲ್ಲಾ

ಲಾಸ್ ಏಂಜಲೀಸ್ ವಿಲ್ಲಾ

ಶಾರುಖ್ ಖಾನ್ ಲಾಸ್ ಏಂಜಲೀಸ್ ನಲ್ಲಿ ಒಂದು ವಿಸ್ತಾರವಾದ ಪ್ಯಾಲೇಟಿಯಲ್ 'ವಿಲ್ಲಾ'ವನ್ನು ಹೊಂದಿದ್ದಾರೆ. ಇದರಲ್ಲಿ ಆರು ವಿಶಾಲವಾದ ಕೋಣೆಗಳು, ಜಕುಜೀಗಳು, ದೊಡ್ಡದಾದ ಸ್ವಿಮಿಂಗ್ ಪೂಲ್, ಖಾಸಗಿ ಟೆನಿಸ್ ಕೋರ್ಟ್ ಹೊಂದಿದೆ.

ಅಲಿಬಾಗ್ ಹಾಲಿಡೇ ಹೋಮ್

ಅಲಿಬಾಗ್ ಹಾಲಿಡೇ ಹೋಮ್

ಶಾರುಖ್ ಖಾನ್ ಅಲಿಬಾಗ್ ನಲ್ಲಿ ಒಂದು ಹಾಲಿಡೇ ಮನೆಯನ್ನು ಹೊಂದಿದ್ದಾರೆ. 20,000 ಚದರ ಮೀಟರ್ ಹೊಂದಿರುವ ಈ ಮನೆಯನ್ನು ಪಾರ್ಟಿ, ವಿಶ್ರಾಂತಿಗಾಗಿ ಮಾಡಲಾಗಿದೆ. ಪ್ರಕೃತಿ ನಡುವಿರುವ ಈ ಬಂಗಲೆ 15 ಕೋಟಿ ಮೌಲ್ಯದ್ದಾಗಿದೆ. ಇದರಲ್ಲಿ ಸ್ವಿಮ್ಮಿಂಗ್ ಪೂಲ್, ಹೊರಾಂಗಣ ಸ್ಥಳಗಳು, ಹಾಗೂ ಖಾಸಗಿ ಹೆಲಿಪ್ಯಾಡ್ ಹೊಂದಿದೆ.

ದೆಹಲಿಯಲ್ಲಿ ಕನಸಿನ ಮನೆ

ದೆಹಲಿಯಲ್ಲಿ ಕನಸಿನ ಮನೆ

ಶಾರುಖ್ ಖಾನ್ ಹಾಗೂ ಗೌರಿ ಖಾನ್ ದೆಹಲಿಗೆ ತಮ್ಮ ಮನಸ್ಸಿನಲ್ಲಿ ವಿಶೇಷ ಸ್ಥಾನ ನೀಡಿದ್ದಾರೆ. ಇದು ಕಿಂಗ್ ಖಾನ್ ಜನ್ಮಸ್ಥಳ. ಶಾರುಖ್ ಹಾಗೂ ಗೌರಿ ಹದಿಹರೆಯದವರಾಗಿದ್ದಾಗ ತಾವು ಭೇಟಿಯಾಗುತ್ತಿದ್ದ ಜಾಗದಲ್ಲಿ ಕನಸಿನ ಮನೆಯನ್ನು ಹೊಂದಿದ್ದಾರೆ. ಈ ಮನೆಯಲ್ಲಿ ಸುಂದರವಾದ ಕಲಾಕೃತಿಗಳು, ಛಾಯಾಚಿತ್ರಗಳು, ವಿಂಟೇಜ್ ಗೋಡೆಗಳು, ಬೃಹತ್ ಕನ್ನಡಿಗಳು ಸೇರಿದಂತೆ ಎಲ್ಲವನ್ನು ಹೊಂದಿದೆ. ಈ ಮನೆಯ ಇಂಟೀರಿಯರ್ ಡಿಸೈನರ್ ಶಾರುಖ್ ಪತ್ನಿ ಗೌರಿ ಖಾನ್.

ಲಂಡನ್ ಐಷಾರಾಮಿ ಅಪಾರ್ಟ್ಮೆಂಟ್

ಲಂಡನ್ ಐಷಾರಾಮಿ ಅಪಾರ್ಟ್ಮೆಂಟ್

ವರದಿಗಳ ಪ್ರಕಾರ ಶಾರುಖ್ ಖಾನ್ ಸೆಂಟ್ರಲ್ ಲಂಡನ್ ನ ಪಾರ್ಕ್ ಲೇನ್ ನಲ್ಲಿ 183 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್ಮೆಂಟ್ ಹೊಂದಿದ್ದಾರೆ. ಈ ಅಪಾರ್ಟ್ಮೆಂಟ್ ಆಗಾಗ ಕುಟುಂಬದೊಂದಿಗೆ ಭೇಟಿ ನೀಡುತ್ತಿರುತ್ತಾರೆ.

More from Filmibeat

English summary
Jannat to Mannat:6 Luxurious homes of bollywood actor sha rukh khan, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X