ಕೋಮಲ್ ಜೊತೆ ನಟಿಸಿದ ಈ ನಟಿಗೆ ಬಟ್ಟೆ ಕಳಚು ಎಂದಿದ್ದ ಕಾಸ್ಟಿಂಗ್ ಡೈರೆಕ್ಟರ್; ಯಾರೀ ನಟಿ?
ಮೀಟೂ ಅಭಿಯಾನದ ಬಳಿಕ ಭಾರತದ ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಅಸ್ಥಿತ್ವದಲ್ಲಿ ಇರುವುದು ಕನ್ಫರ್ಮ್ ಆಗಿತ್ತು. ನಟಿಯರು ಕಾಸ್ಟಿಂಗ್ ಕೌಚ್ ಬಗ್ಗೆ ಓಪನ್ ಆಗಿ ಮಾತಾಡಲು ಮುಂದೆ ಬಂದಿದ್ದರು. ಇಂದಿಗೂ ನಟಿಯರು ಬೇರೆ ಬೇರೆ ಸಂದರ್ಭದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡುತ್ತಲೇ ಇದ್ದಾರೆ.
2014ರಲ್ಲಿ ಕಾಮಿಡಿ ಕಿಂಗ್ ಕೋಮಲ್ ನಟಿಸಿದ್ದ 'ಕರೋಡ್ಪತಿ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ನಟಿಸಿದ್ದ ಜಾಸ್ಮಿನ್ ಭಾಸಿನ್ ತನಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಜಾಸ್ಮಿನ್ ಭಾಸಿನ್ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸದ್ಯ ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಹಿಂದಿ ಸೀರಿಯಲ್ ಜಗತ್ತಿನಲ್ಲಿ ಜಾಸ್ಮಿನ್ ಭಾಸಿನ್ ಸಿಕ್ಕಾಪಟ್ಟೆ ಫೇಮಸ್. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಜಾಸ್ಮಿನ್ ಭಾಸಿನ್ ತನಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್ ತನ್ನ ಬಟ್ಟೆಗಳನ್ನು ತೆಗೆಯುವಂತೆ ಹೇಳಿದ್ದ ಎಂದು ಹೇಳಿಕೊಂಡಿದ್ದಾರೆ.
ಜಾಸ್ಮಿನ್ ಭಾಸಿನ್ ಮೂಲತ: ರಾಜಸ್ಥಾನದ ಕೋಟಾದವರು. ಜೈಪುರದಲ್ಲಿ ಶಿಕ್ಷಣ ಮುಗಿಸುತ್ತಿದ್ದಂತೆ ಮಾಡಲಿಂಗ್ ಕಡೆಗೆ ಮುಖ ಮಾಡಿದ್ದರು. ಒಂದಿಷ್ಟು ದಿನ ಮಾಡಲಿಂಗ್ ಮಾಡಿದ ಬಳಿಕ ಸಿನಿಮಾಗಳಲ್ಲಿ ನಟಿಸಬೇಕು ಅಂತ ಬಯಸಿದ್ದರು. ಆ ವೇಳೆ ನಟಿ ಆಡಿಷನ್ ಕೊಡುವುದಕ್ಕೆ ಕಾಸ್ಟಿಂಗ್ ಡೈರೆಕ್ಟರ್ ಅನ್ನು ಅಪ್ರೋಚ್ ಮಾಡಿದ್ದರು. ಆ ವೇಳೆ ತಮಗಾದ ಕಹಿ ಅನುಭವವನ್ನು ಶೇರ್ ಮಾಡಿಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಜೂಮ್‌ಗೆ ನೀಡಿದ ಸಂದರ್ಶನದಲ್ಲಿ ಜಾಸ್ಮಿನ್ ಭಾಸಿನ್ ಕಾಸ್ಟಿಂಗ್ ಡೈರೆಕ್ಟರ್ ವರ್ತನೆ ಬಗ್ಗೆ ರಿವೀಲ್ ಮಾಡಿದ್ದರು. ಸಿನಿಮಾರಂಗಕ್ಕೆ ನಾನು ತೀರಾ ಹೊಸಬಳು. ಆ ಸಂದರ್ಭದಲ್ಲಿ ಕಾಸ್ಟಿಂಗ್ ಡೈರೆಕ್ಟರ್ ಜೊತೆ ನನಗೆ ಮೀಟಿಂಗ್ ಅನ್ನು ಅರೇಂಜ್ ಮಾಡಲಾಗಿತ್ತು. ಆ ವೇಳೆ ಕಾಸ್ಟಿಂಗ್ ಡೈರೆಕ್ಟರ್ ನೇರವಾಗಿ ತನ್ನ ಬಟ್ಟೆಯನ್ನು ಕಳಚುವಂತೆ ಹೇಳಿದ್ದ." ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

" ಆ ಕಾಸ್ಟಿಂಗ್ ಡೈರೆಕ್ಟರ್ ತನ್ನನ್ನು ಬಿಕಿನಿಯಲ್ಲಿ ನೋಡುವುದಕ್ಕೆ ಬಯಸಿದ್ದರು. ಅಲ್ಲದೆ ನಟಿಯಾಗಲು ನೀನು ಎಷ್ಟು ದೂರದ ವರೆಗೆ ಹೋಗಬಹುದು ಎಂದು ಪ್ರಶ್ನೆ ಮಾಡಿದ್ದರು. ಅವರು ಏನು ಹೇಳಲು ಪ್ರಯತ್ನಿಸುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ. ಬಟ್ಟೆ ಬಿಚ್ಚಲು ಹೇಳಿದಾಗ, ಅಲ್ಲಿಂದ ಓಡಿ ಹೋಗುವುದು ಉತ್ತಮವೆಂದು ಹೊರಟು ಬಂದೆ" ಎಂದು ನಟಿ ಜಾಸ್ಮಿನ್ ಭಾಸಿನ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇನ್ನು ಜಾಸ್ಮಿನ್ ವೃತ್ತಿ ಜೀವನದ ಕಡೆಗೆ ಬರೋದಾರೆ, 2011ರಲ್ಲಿ ತಮಿಳಿ 'ವಾನಂ' ಸಿನಿಮಾದಲ್ಲಿ ನಟಿಸಿದ್ದರು. ಸಿಂಬು, ಅನುಷ್ಕಾ ಶೆಟ್ಟಿ ನಟನೆಯ ಈ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಸಿನಿಮಾವೇ ಕೋಮಲ್ ನಟನೆಯ 'ಕರೋಡ್ಪತಿ'. ಈ ಸಿನಿಮಾದಲ್ಲಿ ಕೋಮಲ್‌ಗೆ ನಾಯಕಿಯಾಗಿ ನಟಿಸಿದ್ದರು.
ಹಾಗೇ, ಮಲಯಾಳಂ, ತೆಲುಗು, ತಮಿಳು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇವರಿಗೆ ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೆಚ್ಚು ಹೆಸರು ಬಂದಿದೆ. 'ತಶನ್-ಎ-ಇಷ್ಕ್', 'ದಿಲ್ ಸೆ ದಿಲ್ ತಕ್' ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಜಾಸ್ಮಿನ್ ಬಿಗ್ ಬಾಸ್ 12ನೇ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದರು. ಇವರ ಮೊದಲ ರಿಯಾಲಿಟಿ ಶೋ 'ಖತ್ರೋನ್ ಕೆ ಕಿಲಾಡಿ ಸೀಸನ್ 9' ಭಾಗವಹಿಸಿದ್ದರು.


Click it and Unblock the Notifications











