ಬೂಮ್ರಾಗೆ ಬೋಲ್ಡ್ ಆದ 'ಧೋನಿ' ನಾಯಕಿ ದಿಶಾ
ಭಾರತ ಕ್ರಿಕೆಟ್ ತಂಡದ ವೇಗಿ ಬೂಮ್ರಾ ಬೌಲಿಂಗ್ ಗೆ ನಟಿ ದಿಶಾ ಪಟಾನಿ ಬೋಲ್ಡ್ ಆಗಿದ್ದಾರೆ. ಪಂದ್ಯಗಳಲ್ಲಿ ಬೂಮ್ರಾ ಮಾಡುವ ಬೌಲಿಂಗ್ ನೋಡಿ ದಿಶಾ ಅವರನ್ನು ಬಹಳ ಮೆಚ್ಚಿಕೊಂಡಿದ್ದಾರೆ.
'ಮಲಾಂಗ್' ಸಿನಿಮಾದ ಪ್ರಚಾರ ಕಾರ್ಯಕ್ರಮದ ವೇಳೆ ದಿಶಾ ಪಟಾನಿ ತಮ್ಮ ಮೆಚ್ಚಿನ ಕ್ರಿಕೆಟ್ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ಬೂಮ್ರಾ ಒಂದು ಪಂದ್ಯವನ್ನ ಬದಲು ಮಾಡುವ ಶಕ್ತಿ ಹೊಂದಿರುವ ಆಟಗಾರ. ಅವರ ಬೌಲಿಂಗ್ ಅನ್ನು ನಾನು ತುಂಬ ಎಂಜಾಯ್ ಮಾಡುತ್ತೇನೆ ಎಂದಿದ್ದಾರೆ.
ದಿಶಾ ಪಟಾನಿ ಈ ಹಿಂದೆ ಧೋನಿ ಬಯೋಪಿಕ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಎಮ್ ಎಸ್ ಧೋನಿ ಸಿನಿಮಾ ನಾಯಕಿಯರ ಪೈಕಿ ಒಬ್ಬರಾಗಿದ್ದರು.

ಭಾರತ ತಂಡ ನ್ಯೂಜಿಲ್ಯಾಂಡ್ ಜೊತೆಗಿನ ಟಿ20 ಪಂದ್ಯವನ್ನು ಗೆದಿದ್ದು 'ಮಲಾಂಗ್' ಚಿತ್ರತಂಡಕ್ಕೆ ಬಹಳ ಖುಷಿ ನೀಡಿದೆ. ಈ ವಿಜಯವನ್ನು ಸಂಭ್ರಮಪಟ್ಟ ಚಿತ್ರತಂಡ ತಮ್ಮ ಮೆಚ್ಚಿನ ಆಟಗಾರ ಬಗ್ಗೆ ಮಾತನಾಡಿದ್ದಾರೆ.
ಅನಿಲ್ ಕಪೂರ್ ನಾಯಕ ವಿರಾಟ್ ಕೊಹ್ಲಿ ತಮ್ಮ ಫೇವರೇಟ್ ಪ್ಲೇಯರ್, ವಿರಾಟ್ ಕೊಹ್ಲಿ ಎಲ್ಲರಿಗೂ ಬಾಸ್ ಎಂದಿದ್ದಾರೆ. ಕುನಾಲ್ ಹಿಟ್ ಮ್ಯಾನ್ ರೋಹಿತ್ ಶರ್ಮಾ ರನ್ನು ಮೆಚ್ಚಿಕೊಂಡಿದ್ದಾರೆ.
ನಟ ಆದಿತ್ಯ ರಾಯ್ ಕಪೂರ್ ಕನ್ನಡಿಗ ಕೆ ಎಲ್ ರಾಹುಲ್ ರನ್ನು ಮೆಚ್ಚಿಕೊಂಡಿದ್ದಾರೆ. ರಾಹುಲ್ ಆಲ್ ರೌಂಡರ್ ಆಟ ಅವರಿಗೆ ಇಷ್ಟವಂತೆ.


Click it and Unblock the Notifications











