ನಿನ್ನ ತಂದೆ ನಿನ್ನ ಅಜ್ಜ ಬ್ರಿಟಿಷರ ಬೂಟು ನೆಕ್ಕುತ್ತಿದ್ದಾಗ,ನನ್ನ ಪೂರ್ವಜರು ಜೈಲಿನಲ್ಲಿದ್ದರು-ಜಾವೇದ್ ಅಖ್ತರ್...!
ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ. ಇದಕ್ಕೆ ಇನ್ನೊಂದು ಭಾರತದ ಪ್ರಖ್ಯಾತ ಗೀತ ರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ ಅಖ್ತರ್‌ಗೆ ಬಂದ ಕಾಮೆಂಟ್ ಮತ್ತೊಂದು ಉದಾಹರಣೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆಯ ದಿವಸ ಚಾಂಪಿಯನ್ಸ್ ಟ್ರೋಫಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಸದೆಬಡಿಯಿತು. ಭಾರತದ ತಂಡದ ಈ ಅತ್ಯಮೋಘ ಗೆಲುವಿಗೆ ಭಾರತದ ಮೂಲೆ ಮೂಲೆಯಿಂದ ಶುಭಾಶಯಗಳ ಮಹಾಪೂರು ಹರಿದು ಬಂದಿತ್ತು. ಅನೇಕ ಚಿತ್ರತಾರೆಯರು, ಚಿತ್ರರಂಗದ ತಂತ್ರಜ್ಞರು ಕೂಡ ಭಾರತ ತಂಡವನ್ನು ಅಭಿನಂದಿಸಿದ್ದರು. ಆ ಪೈಕಿ ಜಾವೇದ್ ಅಖ್ತರ್ ಕೂಡ ಒಬ್ಬರಾಗಿದ್ದರು.

ತಮ್ಮ ಎಕ್ಸ್ { ಟ್ವಿಟರ್ } ಖಾತೆಯಲ್ಲಿ ಪಾಕ್ ವಿರುದ್ದ ಅದ್ಭುತ ಆಟವನ್ನು ಆಡಿ ಶತಕ ಬಾರಿಸಿದ್ದ ವಿರಾಟ್ ಕೊಹ್ಲಿಯನ್ನು ಅಭಿನಂದಿಸುತ್ತಾ ವಿರಾಟ್ ಕೊಹ್ಲಿ ಜಿಂದಾಬಾದ್ ನಿಮ್ಮ ಬಗ್ಗೆ ನಮ್ಮೆಲ್ಲರಿಗೆ ತುಂಬಾ ಹೆಮ್ಮೆ ಇದೆ ಎಂದು ಜಾವೇದ್ ಅಖ್ತರ್ ಬರೆದುಕೊಂಡಿದ್ದರು. ಇದಕ್ಕೆ ಕ್ಯಾತೆ ತೆಗೆದ ವ್ಯಕ್ತಿಯೊಬ್ಬರು
ಇವತ್ತು ಸೂರ್ಯ ಎಲ್ಲಿ ಹುಟ್ಟಿದ್ದಾನೆ, ಮನದೊಳಗೆ ನಿಮಗೆ ತುಂಬಾ ದುಃಖ ಆಗಿರಬೇಕು ಎಂದು ಬರೆದುಕೊಂಡಿದ್ದರು. ಇದಕ್ಕೆ ಖಂಡ ತುಂಡವಾದ ಉತ್ತರವನ್ನು ಜಾವೇದ್ ಅಖ್ತರ್ ಈಗ ನೀಡಿದ್ದಾರೆ. ಮಗನೇ ನಿನ್ನ ತಂದೆ ಮತ್ತು ನಿನ್ನ ಅಜ್ಜ ಬ್ರಿಟಿಷರ ಬೂಟುಗಳನ್ನು ನೆಕ್ಕುತ್ತಿದ್ದ ಸಮಯದಲ್ಲಿ ನನ್ನ ಪೂರ್ವಜರು ಈ ದೇಶದ ಸ್ವಾತಂತ್ರಕ್ಕೆ ಹೋರಾಡುತ್ತಾ ಜೈಲಿನಲ್ಲಿದ್ದರು. ಕಾಲಾಪಾನಿಯಲ್ಲಿದ್ದರು, ದೇಶಭಕ್ತಿ ನನ್ನ ಕಣ ಕಣದಲ್ಲಿದೆ. ಆದರೆ ನಿನ್ನಲ್ಲಿ ಬ್ರಿಟಿಷರ ಗುಲಾಮರಾಗಿ ಕೆಲಸ ಮಾಡಿದವರ ರಕ್ತ ಇದೆ. ಈ ವ್ಯತ್ಯಾಸವನ್ನು ನೀನು ಮರೆಯಬೇಡ ಎಂದು ಹೇಳಿದ್ದಾರೆ.
ಇನ್ನು, ಇದೇ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿ ಜಾವೇದ್, ಕೊಹ್ಲಿ ಬಾಬರ್‌ನ ತಂದೆ ಜೈ ಶ್ರೀರಾಮ್ ಎಂದು ಹೇಳು ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೂಡ ಉತ್ತರವನ್ನು ನೀಡಿರುವ ಜಾವೇದ್ ಅಖ್ತರ್ ನೀನೊಬ್ಬ ನೀಚ ಮನುಷ್ಯ ನೀಚನಾಗಿಯೇ ನೀನು ಸಾಯುತ್ತೀಯಾ, ದೇಶಭಕ್ತಿ ಏನು ಎನ್ನುವುದು ನಿನಗೇನು ಗೊತ್ತು ಎಂದು ಹೇಳಿದ್ದಾರೆ.
ಸದ್ಯ ಜಾವೇದ್ ಅಖ್ತರ್ ಅವರು ನೀಡಿರುವ ಈ ಎರಡು ಉತ್ತರಗಳು ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ. ಪರ-ವಿರೋಧ-ಧರ್ಮ-ದೇಶಭಕ್ತಿಯ ಕುರಿತು ಚರ್ಚೆಗೆ ಕೂಡ ಕಾರಣವಾಗಿವೆ. ಜಾವೇದ್ ಅಖ್ತರ್ ಅವರ ಟ್ವಿಟ್‌ಗಳು ವೈರಲ್ ಆಗಿವೆ.
ಅಂದ್ಹಾಗೇ ಕಳೆದ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ಬೌಲರ್‌ಗಳ ಬೆವರಿಳಿಸಿದ್ದರು. 111 ಎಸೆತಗಳಲ್ಲಿ 100 ರನ್ ಬಾರಿಸಿದ್ದರು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಪಾಕಿಸ್ತಾನ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. 49.4 ಓವರ್‌ಗಳಲ್ಲಿ 241ರನ್ ಗಳಿಸಿ ಪಾಕಿಸ್ತಾನ್ ಆಲೌಟ್ ಆಗಿತ್ತು. ಈ ಗುರಿಯನ್ನು ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಟೀಮ್ ಇಂಡಿಯಾ 42.3 ಓವರ್‌ಗಳಲ್ಲಿಯೇ ತಲುಪಿತ್ತು. 6 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಮಣಿಸಿತ್ತು. ಈ ಮೂಲಕ ಸೆಮಿಫೈನಲ್ ನಲ್ಲಿ ತನ್ನ ಸ್ಥಾನವನ್ನು ಕೂಡ ಭಾರತದ ತಂಡ ಭದ್ರ ಗೊಳಿಸಿಕೊಂಡಿತು.


Click it and Unblock the Notifications











