Priyamani: "ನನ್ನ ಆಂಟಿ ಅಂತೀರಾ.. ನಂಗೀಗ 39 ವರ್ಷ ವಯಸ್ಸು.. ಆದ್ರು ನಾನು ಸಿಕ್ಕಾಪಟ್ಟೆ ಹಾಟ್ ಆಗಿದ್ದೀನಿ": ಪ್ರಿಯಾಮಣಿ

ಬಹುಭಾಷಾ ನಟಿ ಪ್ರಿಯಾಮಣಿ 'ಜವಾನ್' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಅಟ್ಲಿ ನಿರ್ದೇಶನದ ಚಿತ್ರದಲ್ಲಿ ಲಕ್ಷ್ಮಿ ಎನ್ನುವ ಪಾತ್ರದಲ್ಲಿ ನಟಿಸಿ ಮೋಡಿ ಮಾಡುತ್ತಿದ್ದಾರೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರತಂಡ ಸಕ್ಸಸ್ ಸಂಭ್ರಮದಲ್ಲಿದೆ.

ಒಂದ್ಕಾಲದಲ್ಲಿ ನಾಯಕಿಯಾಗಿ ಗಮನ ಸೆಳೆದ ಪ್ರಿಯಾಮಣಿ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪ್ರಿಯಾಮಣಿ ಬಾಡಿ ಶೇಮಿಂಗ್ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೊ ಹಾಕಿದರೂ ಅದಕ್ಕೆ ಬರುವ ಕಾಮೆಂಟ್‌ಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದಾರೆ. ಇದೀಗ ಮತ್ತೊಮ್ಮೆ ಇದೇ ಟಾಪಿಕ್ ಬಗ್ಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಮಾತನಾಡಿದ್ದಾರೆ.

Jawan Actress Priyamani hits out at troll who called her auntie/aunty

ಇಂಡಿಯಾಗ್ಲಿಟ್ಸ್ ತಮಿಳು ಯೂಟ್ಯೂಬ್‌ ಚಾನಲ್ ಸಂದರ್ಶನದಲ್ಲಿ ಪ್ರಿಯಾಮಣಿ 'ಜವಾನ್' ಸಿನಿಮಾ ಸಕ್ಸಸ್ ಖುಷಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಶನದಲ್ಲಿ ಮೈಬಣ್ಣ, ತೂಕ ಹೆಚ್ಚಿಕೊಳ್ಳುವುದು, ಕಮ್ಮಿ ಆಗುವ ಸಂದರ್ಭಗಳಲ್ಲಿ ಟೀಕೆ, ಟಿಪ್ಪಣಿ ವ್ಯಕ್ತವಾಗುತ್ತದೆ. ಈ ಬಗ್ಗೆ ಏನಂತೀರಾ ಎನ್ನುವ ಪ್ರಶ್ನೆಗೆ "ಅಂತ ವಿಚಾರಗಳ ಬಗ್ಗೆ ಜಾಸ್ತಿ ರಿಯಾಕ್ಟ್ ಮಾಡಬಾರದು. ಸುಖಾಸುಮ್ಮನೆ ಅಂತಹವರಿಗೆ ನಾವು ಪ್ರಾಮುಖ್ಯತೆ ಕೊಡಬಾರದು. ನಾವು ಹೆಂಗೆ ಇದ್ದರೂ ಏನೇ ಮಾಡಿದರೂ ಮಾತನಾಡುತ್ತಾರೆ. ಅವರಿ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು" ಎಂದಿದ್ದಾರೆ.

"ಸಿನಿಮಾಗಾಗಿ ತೂಕ ಇಳಿಸಿದರೆ ತುಂಬಾ ಸಣ್ಣ ಆಗಬಿಟ್ರಿ ಅಂತಾರೆ. ತೂಕ ಹೆಚ್ಚಿಸಿಕೊಂಡರೆ ತುಂಬಾ ದಪ್ಪಾ ಆಗ್ಬಿಟ್ರಿ ಅಂತಾರೆ. ಫ್ಯಾಮಿಲಿಮ್ಯಾನ್‌ ಭಾಗ-1 ಹಾಗೂ 2ರಲ್ಲಿ ನಾನು ಕೊಂಚ ದಪ್ಪ ಇದ್ದೆ. ಆ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದೆ. ಆದರೆ ಈಗ ತೂಕ ಇಳಿಸಿಕೊಂಡು ಬದಲಾಗಿದ್ದೀನಿ. ಭಾಗ-3 ಮಾಡಿದರೆ ನಾನು ಹೀಗೆ ಕಾಣಿಸಿಕೊಳ್ಳಬಹುರು ಗೊತ್ತಿಲ್ಲ. ಆದರೆ ಎಲ್ಲರೂ ಈಗ ನೀವು ಫ್ಯಾಮಿಲಿಮ್ಯಾನ್ ವೆಬ್‌ ಸೀರಿಸ್‌ನಲ್ಲೇ ಚೆನ್ನಾಗಿದ್ರಿ ಅಂತಾರೆ. ದಪ್ಪ ಇದ್ದಿದ್ರೆ, ಅಯ್ಯೋ ದಪ್ಪ ಯಾಕೆ ಎನ್ನುತ್ತಿದ್ದರು. ಜನ ಹೇಳ್ತಾನೇ ಇರ್ತಾರೆ ಏನು ಮಾಡೋಕ್ಕಾಗಲ್ಲ"

"ಹಾಗಂತ ನಾನು ಕಾಮೆಂಟ್ ಓದಲ್ಲ ಅಂತಲ್ಲ. ಆದರೆ ಅದರ ಬಗ್ಗೆ ಪ್ರಾಮುಖ್ಯತೆ ಕೊಟ್ಟರೆ ಏನು ಪ್ರಯೋಜನ ಇಲ್ಲ. ನಾನು 2 ನಿಮಿಷದಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ನನಗೆ ಏನು ಬೇಕೊ ಅದು ಪೋಸ್ಟ್ ಮಾಡಬಹುದು. ಆದರೆ ಅದು ನನಗೆ ಬೇಕಿಲ್ಲ. ಮಾತನಾಡುತ್ತೀರಾ ಮಾತನಾಡಿ. ಆಂಟಿ ಎಂದು ಕರೆಯುತ್ತೀರಾ? ಕರೀರಿ. ನನಗೇನು ಬೇಸರ ಇಲ್ಲ. ನಾಳೆ ನಿಮಗೂ ಇದೇ ಸಂದರ್ಭ ಎದುರಾಗುತ್ತದೆ. ನಾನು ಹೆಮ್ಮೆ ಹೇಳ್ತೀನಿ. ನನಗೀಗ 39 ವರ್ಷ ವಯಸ್ಸು. ಮುಂದೆ 40 ಆಗುತ್ತೆ. ಆದರೆ ನಾನು ಹಾಟ್. ನಾನು ತುಂಬಾ ಚೆನ್ನಾಗಿ ಕಾಣಿಸುವ 39 ವರ್ಷ ವಯಸ್ಸಿನ ಮಹಿಳೆ. ಆ ವಿಚಾರದಲ್ಲಿ ನನಗೆ ಖುಷಿಯಿದೆ. ಬಾಡಿ ಶೇಮಿಂಗ್ ಮಾಡ್ತೀರಾ ಮಾಡಿ. ಎಲ್ಲರೂ ಹಿಂಗಿ ಇರಲ್ಲ. ಯಾವಾಗ ಏನು ಬೇಕಾದರೂ ಆಗಬಹುದು" ಎಂದಿದ್ದಾರೆ.

Jawan Actress Priyamani hits out at troll who called her auntie/aunty

2017ರಲ್ಲಿ ಉದ್ಯಮಿ ಮುಸ್ತಾಫಾ ರಾಜಾ ಜೊತೆ ಪ್ರಿಯಾಮಣಿ ಮದುವೆ ಆಗಿದ್ದರು. ಮದುವೆಯಾದ ಮೂರೇ ದಿನಕ್ಕೆ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಹೊರಟು ನಿಂತಿದ್ದರಂತೆ. ಆದ ಸಮಯದಲ್ಲಿ ಪತಿ ಹಾಗೂ ಕುಟುಂಬಸ್ಥರ ಪ್ರತಿಕ್ರಿಯೆ ಏನಿತ್ತು ಎನ್ನುವುದನ್ನು ಆಕೆ ನೆನಪಿಸಿಕೊಂಡಿದ್ದಾರೆ. "ಆ ಸಮಯಲ್ಲಿ ನಮ್ಮ ಪತಿ ಶೂಟಿಂಗ್ ಹೋಗು, ಪರವಾಗಿಲ್ಲ. ಮನೆಯಿಂದ ಹೊರಗಡೆ ಹೋಗು. ಕೆಲಸ ಮಾಡು ಎಂದರು"

"ಫ್ಯಾಮಿಲಿ ಬೆಂಬಲ ಇದ್ದರೆ ನಿಮ್ಮ ಅಪ್ಪ ಅಮ್ಮ ಮಾತ್ರವಲ್ಲ, ನೀವು ಮದುವೆಯಾಗಿ ಹೋದ ಮನೆಯಲ್ಲೂ ಅದೇ ರೀತಿಯ ಬೆಂಬಲ ಇದ್ದರೆ ಅದೇ ಪ್ಲಸ್ ಪಾಯಿಂಟ್. ಕೆಲವರು ಇಲ್ಲ ಬೇಡ, ಬ್ರೇಕ್ ತಗೋ, ಮದುವೆ ನಂತರ ಸಿನಿಮಾಗಳಲ್ಲಿ ನಟಿಸಬೇಡ, ಎಂದು ಹೇಳುವ ಸಾಧ್ಯತೆ ಇರುತ್ತದೆ. ನಾನು ಮದುವೆಗೂ ಮೊದಲೇ ಹೇಳಿದ್ದೆ. ಅವಕಾಶಗಳು ಸಿಗುತ್ತೋ ಇಲ್ವೋ ಗೊತ್ತಿಲ್ಲ. ಬಂದರೆ ನಟಿಸ್ತೇನೆ ಎಂದಿದ್ದೆ. ಅವರು ಒಪ್ಪಿಕೊಂಡರು. ಅವರ ಕುಟುಂಬಸ್ಥರು ಒಪ್ಪಿಕೊಂಡರು. ಇವತ್ತೂ ನಮ್ಮ ಅತ್ತೆ ಶಾರುಖ್ ಖಾನ್ ಸಿನಿಮಾ ಅಂದ್ರೆ, ಬರ್ತೀನಿ ಶೂಟಿಂಗ್ ನೋಡ್ತೀನಿ ಅಂತಾರೆ. ಹಾಗಾಗಿ ನಾನು ಇಲ್ಲಿ ಇದ್ದೀನಿ."

"ಮದುವೆಗೆ 2 ದಿನ ಮುಂಚೆ ಕೂಡ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಿರೂಪಣೆ ಮಾಡಿದೆ. ಮೆಹಂದಿ ಹಾಕಿಕೊಳ್ಳಲು ಸಮಯ ಇರಲಿಲ್ಲ. ನಮ್ಮ ಅತ್ತಿಗೆ ಬಂದು ಏನಮ್ಮ ನೀನು ಮದುವೆ ಇಟ್ಟುಕೊಂಡು ನೀನು, ನಿನ್ನ ಮದುವೆ ಇದು ಗೊತ್ತುತಾನೇ. ಇದು ಶೂಟಿಂಗ್ ಅಲ್ಲ, ನಿಜ ಜೀವನ ಎಂದರು. ಆದರೆ ಅದು ಕಮೀಟ್‌ಮೆಂಟ್ ಮಾಡಲೇಬೇಕಿತ್ತು" ಎಂದು ಪ್ರಿಯಾಮಣಿ ವಿವರಿಸಿದ್ದಾರೆ.

More from Filmibeat

English summary
Jawan Actress Priyamani takes a dig at body shaming, who call her aunty
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X