ಬಿಡುಗಡೆಗೂ ಮುನ್ನವೇ ವಿಶ್ವಾದ್ಯಂತ 50 ಕೋಟಿ ಕಲೆಕ್ಷನ್ ಮಾಡಿದ ಶಾರುಖ್ ಖಾನ್ ಅಭಿನಯದ ಜವಾನ್!
ಶಾರುಖ್ ಖಾನ್ ಅಭಿನಯದ ಜವಾನ್ ವಿಶ್ವದಾದ್ಯಂತ ಬಿಡುಗಡೆಯಾಗಲು ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಅಡ್ವಾನ್ಸ್ ಬುಕ್ಕಿಂಗ್ ಓಪನ್ ಮಾಡಿ ಆರು ದಿನಗಳಾಗಿವೆ. ಸಿನಿಮಾ ಟಿಕೆಟ್‌ಗಳು ಬಿಸಿ ಜಿಲೇಬಿಯಂತೆ ಮಾರಾಟವಾಗುತ್ತಿದ್ದು, ವಿಶ್ವದಾದ್ಯಂತ ಬಿಡುಗಡೆಗೂ ಮುನ್ನವೆ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್, ಜವಾನ್ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಅಪ್‌ಡೇಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಈಗಾಗಲೇ ವಿಶ್ವಾದ್ಯಂತ 51.17 ಕೋಟಿ ರೂಪಾಯಿ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಜವಾನ್ ಅಡ್ವಾನ್ಸ್ ಬುಕ್ಕಿಂಗ್
ಮನೋಬಾಲಾ ವಿಜಯಬಾಲನ್ ಟ್ವೀಟ್, " ಜವಾನ್ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಗೆ ಮುಂಚೆಯೇ ಅರ್ಧಶತಕ ಬಾರಿಸಿದೆ. ಅಡ್ವಾನ್ಸ್ ಟಿಕೆಟ್ ಮಾರಾಟ ಭಾರತದಲ್ಲಿ 32.47 ಕೋಟಿ ಮತ್ತು ವಿದೇಶದಲ್ಲಿ 18.70 ಕೋಟಿ ರೂಪಾಯಿ. ಒಟ್ಟು ವಿಶ್ವದಾದ್ಯಂತ 51.17 ಕೋಟಿ. ಅಲ್ಲದೆ, ಶಾರುಖ್ ಖಾನ್ ಭಾರತದಲ್ಲಿ 32 ಕೋಟಿ ಅಡ್ವಾನ್ಸ್ ಬುಕ್ಕಿಂಗ್ ದಾಖಲಿಸಿ, ತಮ್ಮದೆ ಪಠಾಣ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಜವಾನ್ ಇದುವರೆಗೆ 3,91,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಮನೋಬಾಲಾ ವಿಜಯಬಾಲನ್ ಹಂಚಿಕೊಂಡಿದ್ದಾರೆ. ಭಾರತದಲ್ಲಿ 7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಮಂಗಳವಾರ ವರದಿಯಾಗಿದೆ.

ಮನೋಬಾಲಾ ವಿಜಯಬಾಲನ್ ಅವರ ಮತ್ತೊಂದು ಟ್ವೀಟ್‌ನಲ್ಲಿ, "ಶಾರುಖ್ ಖಾನ್ ಅವರ ಜವಾನ್ 3,91,000 ಟಿಕೆಟ್‌ಗಳೊಂದಿಗೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಾರ್ವಕಾಲಿಕ ಟಾಪ್ 5 ಅಡ್ವಾನ್ಸ್ ಬುಕ್ಕಿಂಗ್ ಕಲೆಕ್ಷನ್‌ಗೆ ಸೇರಿಕೊಂಡಿದೆ" ಎಂದಿದ್ದಾರೆ.
ಮಲ್ಟಿಪ್ಲೆಕ್ಸ್‌ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಅಗ್ರಸ್ಥಾನಗದಲ್ಲಿರುವ ಸಿನಿಮಾಗಳು
1. ಬಾಹುಬಲಿ 2 - 6,50,000 ಟಿಕೆಟ್
2. ಪಠಾಣ್ - 5,56,000 ಟಿಕೆಟ್
3. ಕೆಜಿಎಫ್ ಅಧ್ಯಾಯ 2 - 5,15,000 ಟಿಕೆಟ್
4. ವಾರ್ - 4,10,000 ಟಿಕೆಟ್
5. ಜವಾನ್ - 3,91,000 ಟಿಕೆಟ್
6. ಥಗ್ಸ್ ಆಫ್ ಹಿಂದೂಸ್ತಾನ್ - 3,46,000 ಟಿಕೆಟ್
7. ಪ್ರೇಮ್ ರತನ್ ಧನ್ ಪಾಯೋ - 3,40,000 ಟಿಕೆಟ್
8. ಭಾರತ್ - 3,16,000 ಟಿಕೆಟ್
9. ಸುಲ್ತಾನ್ - 3,10,000 ಟಿಕೆಟ್
10. ದಂಗಲ್ - 3,05,000 ಟಿಕೆಟ್
ಜವಾನ್ ಬಾಕ್ಸ್ ಆಫೀಸ್ ಭವಿಷ್ಯ!
ಜವಾನ್ ಮೊದಲ ದಿನವೇ ಜಾಗತಿಕವಾಗಿ 100 ಕೋಟಿ ಭವಿಷ್ಯ ನುಡಿದಿದ್ದಾರೆ. ಭಾರತದ ಒಟ್ಟು (ಎಲ್ಲಾ ಭಾಷೆಗಳು) 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎಂದು ವರದಿಯಾಗಿದೆ. ಭಾರತದಲ್ಲಿ ಪಠಾಣ್ ಮೊದಲ ದಿನದ ಅಂಕಿಅಂಶಗಳನ್ನು ಸುಲಭವಾಗಿ ಮೀರಿಸಲಿದೆ. ವಾರಾಂತ್ಯದ ವೇಳೆಗೆ ಚಿತ್ರವು ಜಾಗತಿಕವಾಗಿ 300 ಕೋಟಿ ಗಳಿಸಬಹುದು ಎಂದು ಹೇಳಲಾಗುತ್ತಿದೆ.
ಬಹುನಿರೀಕ್ಷಿತ ಜವಾನ್
ಅಟ್ಲಿ ನಿರ್ದೇಶನದ ಜವಾನ್ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ನಯನತಾರಾ, ವಿಜಯ್ ಸೇತುಪತಿ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್, ಯೋಗಿ ಬಾಬು, ಮತ್ತು ರಿಧಿ ಡೋಗ್ರಾ ಮುಂತಾದವರು ನಟಿಸಿದ್ದಾರೆ. ಅರವಿಂದ್ ರವಿಚಂದರ್ ಸಂಗೀತ ನೀಡಿದ್ದಾರೆ.


Click it and Unblock the Notifications











