Jawan: ಶಾರುಖ್ ಖಾನ್, ಅಟ್ಲಿ ಜೋಡಿಯ ಜವಾನ್ ನೋಡಿ ಬೆಂಗಳೂರಿನ ಮಂದಿ ಹೇಳಿದ್ದೇನು?

ನಟ ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾ ಸೆಪ್ಟಂಬರ್ 7 ರಂದು ಬಿಡುಗಡೆಯಾಗಿದೆ. ಈ ವರ್ಷದ ಬಿಗ್ ಹಿಟ್ ಪಠಾಣ್ ನಂತರ ಎರಡನೇ ದೊಡ್ಡ ಹಿಟ್ ನೀಡಲು ಶಾರುಖ್ ಖಾನ್ ಅಟ್ಲಿ ಜೊತೆಗೆ ಕೈ ಜೋಡಿಸಿದ್ದಾರೆ. ಸಿನಿಮಾಗೆ ಉತ್ತಮ ಓಪನಿಂಗ್ ಸಿಕ್ಕಿದ್ದು, ಹೌಸ್‌ಫುಲ್ ಶೋಗಳು ನಡೆಯುತ್ತಿದೆ.

ನಟ ಶಾರುಖ್ ಖಾನ್ ಅವರ ದ್ವಿಪಾತ್ರ, ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲೋತ್ರಾ ಸೇರಿದಂತೆ ಹಲವರ ನಟನೆಗೆ ಪ್ರೇಕ್ಷಕರು ಬಹುಪರಾಕ್ ಎಂದಿದ್ದಾರೆ. ಮೊದಲ ದಿನದ ಮೊದಲ ಶೋ ನೋಡಿದ ಬೆಂಗಳೂರಿನ ಹಲವರ ಪ್ರತಿಕ್ರಿಯೆಗಳು ಹೀಗಿವೆ.

Jawan: Bangaloreans Reaction after watching shah rukh khans in jawan

ಬೆಂಗಳೂರಿನ ಜಿಟಿ ಮಾಲ್‌ನಲ್ಲಿ ಮೊದಲ ದಿನದ ಮೊದಲ ಶೋ ಹೌಸ್‌ಫುಲ್ ಆಗಿತ್ತು. ಎಲ್ಲಾ ವಯೋಮಾನದವರು ಸಿನಿಮಾ ನೊಡಲು ಬಂದಿದ್ದರು. ಶೋ ನೋಡಿದ ಬಹುತೇಕ ಅಭಿಮಾನಿಗಳು ಸಿನಿಮಾವನ್ನು ಹೊಗಳಿದ್ದಾರೆ. ಶಾರುಖ್ ಖಾನ್ ಅಭಿನಯ, ಆಕ್ಷನ್ ಸೀನ್‌ಗಳಿಗೆ ಮನಸೋತಿರುವ ಅವರು ಸೂಪರ್ ಫಿಲಂ ಎಂದಿದ್ದಾರೆ. ಮತ್ತೆ ಕೆಲವರು ಅಷ್ಟೇನು ಇಷ್ಟವಾಗಲಿಲ್ಲ. ಎಲ್ಲಾ ಹಳೆಯ ಕಥೆ ಎಂದಿದ್ದಾರೆ.

ಶಾರುಖ್ ಖಾನ್ ಕೊಟ್ಟ ಮೆಸೇಜ್ ಇಷ್ಟವಾಯಿತು!

ಸಿನಿಮಾ ನೋಡಿ ಮಾತನಾಡಿದ ಸಿನಿಪ್ರೇಮಿಯೊಬ್ಬರು, ಸಿನಿಮಾ ಉತ್ತಮವಾಗಿದೆ ಎಂದಿದ್ದಾರೆ. "ಸಿನಿಮಾ ಚೆನ್ನಾಗಿದೆ. ಅದರಲ್ಲೂ ಕೊನೆಯಲ್ಲಿ ಶಾರುಖ್ ಖಾನ್ ಕೊಟ್ಟಿರುವ ಮೆಸೇಜ್ ಇಷ್ಟವಾಯಿತು. ವೋಟ್ ಹಾಕುವುದು ಮುಖ್ಯವಲ್ಲ, ವೋಟ್ ಯಾರಿಗೆ ಹಾಕುತ್ತಿವಿ ಎನ್ನುವುದು ಮುಖ್ಯ ಎಂದು. ಯಾರು ನಮ್ಮ ಸಹಾಯಕ್ಕೆ ಬರುತ್ತಾರೊ ಅವರಿಗೆ ವೋಟ್ ಹಾಕಬೇಕು ಅನ್ನೋದು ಸಕತ್ ಇಷ್ಟ ಆಯಿತು. ಅಟ್ಲಿ ನಿರ್ದೇಶನ ಇಷ್ಟವಾಯಿತು. ಬಿಜಿಎಂ ಸೂಪರ್ ಆಗಿದೆ. ಫ್ಯಾಮಿಲಿ ಆರಾಮಾಗಿ ಕುಳಿತು ನೋಡಬಹುದು. ಶಾರುಖ್ ಖಾನ್ ಆಕ್ಟಿಂಗ್ ಚೆನ್ನಾಗಿದೆ" ಎಂದು ಹೇಳಿದ್ದಾರೆ.

ಮತ್ತೊಬ್ಬ ಅಭಿಮಾನಿ ಮಾತನಾಡಿ, "ಸಿನಿಮಾ ಸಕತ್ ಆಗಿದೆ. ಶಾರುಖ್ ಖಾನ್ ಅವರ ಆಕ್ಟಿಂಗ್ ಚೆನ್ನಾಗಿದೆ. ಜನರು ಖಂಡಿತವಾಗಿ ಇಂತಹ ಸಿನಿಮಾಗಳನ್ನು ನೋಡಬೇಕು" ಎಂದು ಒತ್ತಾಯಿಸಿದ್ದಾರೆ. ಮಹಿಳಾ ಪ್ರೇಕ್ಷಕರೊಬ್ಬರು, ಇದು ಫೈವ್ ಸ್ಟಾರ್ ರೇಟಿಂಗ್ ಸಿನಿಮಾ. ಎಲ್ಲರೂ ನೋಡಲೇಬೇಕಾದ ಫಿಲಂ ಎಂದಿದ್ದಾರೆ.

Jawan: Bangaloreans Reaction after watching shah rukh khans in jawan

ತಳಪತಿ ವಿಜಯ್ ಅಭಿಮಾನಿಯೊಬ್ಬರು, ಸಿನಿಮಾ ಜಬರ್‌ದಸ್ತ್ ಆಗಿದೆ. ಲಿಯೋಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಇದರ ನಡುವೆ ಹಲವರು ಸಿನಿಮಾ ಒಕೆ ಒಕೆ, ಡಬ್ಬಾ ತರ ಇದೆ. . ಸಿನಿಮಾದಲ್ಲಿ ಲಾಜಿಕ್ ಇಲ್ಲ ಎಂಬಂತಹ ರಿಯಾಕ್ಷನ್ ಕೂಡ ನೀಡಿದ್ದಾರೆ.

ಜವಾನ್

ತಮಿಳು ಸಿನಿಮಾ ನಿರ್ದೇಶಕ ಅಟ್ಲಿ ಅವರ ಮೊದಲ ಬಾಲಿವುಡ್ ಸಿನಿಮಾ 'ಜವಾನ್' . ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಯೋಧ ಮತ್ತು ಜೈಲರ್ ಆಗಿ ತೆರೆಯ ಮೇಲೆ ಮಿಂಚಿದ್ದಾರೆ. ದೇಶ ಕಾಯುವ ಯೋಧ ಮತ್ತು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ಪಾತ್ರಗಳಲ್ಲಿ ಜೀವಿಸಿದ್ದಾರೆ. ನಟಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ ಅವರನ್ನು ಒಳಗೊಂಡಂತೆ ಹೆಚ್ಚು ದಕ್ಷಿಣ ಭಾರತದ ಕಲಾವಿದರು, ಸಿಬ್ಬಂದಿ ವರ್ಗ ಸಿನಿಮಾದಲ್ಲಿದೆ. ಜವಾನ್‌ಗೆ ಅನಿರುದ್ಧ್ ರವಿಚಂದರ್ ಸಂಗೀತವಿದೆ.

More from Filmibeat

English summary
Jawan: Bangaloreans Reaction after watching shah rukh khan's in jawan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X