ಐತಿಹಾಸಿಕ ಸಾಧನೆ: ಒಂದೇ ದಿನ ಕೋಟಿ ಕೋಟಿ ಬಾಚಿಕೊಂಡ ಶಾರುಖ್ ಖಾನ್‌ರ ಜವಾನ್!

ಬಾಲಿವುಡ್ ಬಾದ್‌ಷಾ ಎಂದು ನಟ ಶಾರುಖ್ ಖಾನ್ ಅವರನ್ನು ಸುಮ್ನನೆ ಕರೆಯುವುದಿಲ್ಲ ಬಿಡಿ. ಕಿಂಗ್ ಖಾನ್‌ನ 'ಜವಾನ್' ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಪಕ್ಕಾ ಮಾಸ್ ಆಕ್ಷನ್ ಸಿನಿಮಾವಾಗಿರುವ ಜವಾನ್ ಸೆಪ್ಟೆಂಬರ್ 7 ರಂದು ಬಿಡುಗಡೆಯಾಗಿದ್ದು, ಭಾನುವಾರ ಒಂದೇ ದಿನ ಐತಿಹಾಸಿಕ ದಾಖಲೆ ಸೃಷ್ಟಿಸಿದೆ.

ಬಿಡುಗಡೆಯಾದ ಮೊದಲ ದಿನವೇ 75 ಕೋಟಿ ರೂಪಾಯಿ ಬಾಚಿಕೊಂಡಿದ್ದ 'ಜವಾನ್', ಭಾನುವಾರ ಮತ್ತೊಂದು ದಾಖಲೆ ನಿರ್ಮಿಸಿದೆ. ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್‌ನಿಲ್ಕ್ ಅಂದಾಜಿನ ಪ್ರಕಾರ, ಭಾನುವಾರದಂದು 81 ಕೋಟಿ ರೂಪಾಯಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡು ಮೊದಲ ದಿನದ ದಾಖಲೆಯನ್ನು ತಾನೇ ಮುರಿದಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಜವಾನ್ ಪಾತ್ರವಾಗಿದೆ.

Jawan box office collection: Shah Rukh Khan’s Jawan records highest single day collection

ಒಂದೇ ದಿನ 70.50 ಕೋಟಿ ರೂಪಾಯಿ ಗಳಿಸಿದ್ದ ಪಠಾಣ್!

ಈ ವರ್ಷದ ಆರಂಭದಲ್ಲಿ ಭರ್ಜರಿ ಹಿಟ್ ನೀಡಿದ್ದ ಕಿಂಗ್ ಖಾನ್ ಶಾರುಖ್ ನಟನೆಯ ಪಠಾಣ್ ಕೂಡ ಬಿಡುಗಡೆಯ ಎರಡನೇ ದಿನದಂದು ಒಂದೇ ದಿನ 70.50 ಕೋಟಿ ರೂಪಾಯಿಗಳನ್ನು ಗಳಿಸಿ ದಾಖಲೆ ಮಾಡಿತ್ತು. ಸಿನಿಮಾ ಬಿಡುಗಡೆಯಾಗಿ ಒಂದು ದಿನಕ್ಕೆ ಜನವರಿ 26 ರಂದು ಗಣರಾಜ್ಯೋತ್ಸವ ಅಂಗವಾಗಿ ರಜಾದಿನವಾದ ಕಾರಣ ದೇಶದಾದ್ಯಂತ 70.50 ಕೋಟಿ ರೂಪಾಯಿಗಳನ್ನು ಗಳಿಸಿದೆ. ಹಿಂದಿ ಭಾಷೆಯಲ್ಲಿ 68 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಜವಾನ್ ಬಿಡುಗಡೆಯಾಗಿ ನಾಲ್ಕನೇ ದಿನವಾದ ಭಾನುವಾರ ಪಠಾಣ್ ಅಂಕಿಅಂಶವನ್ನು ಮೀರಿಸುವಲ್ಲಿ ಯಶಸ್ವಿಯಾಗಿದೆ.

ಪಠಾಣ್‌ನ ಐತಿಹಾಸಿಕ ಯಶಸ್ಸಿನ ನಂತರ ಈ ವರ್ಷ ಶಾರುಖ್ ಖಾನ್ ಅವರ ಎರಡನೇ ಚಲನಚಿತ್ರ ಜವಾನ್ ತನ್ನ ಸಕ್ಸಸ್‌ನ ನಾಗಾಲೋಟ ಮುಂದುವರೆಸುತ್ತಿದೆ. ನಾಲ್ಕು ವರ್ಷಗಳ ನಂತರ ಶಾರುಖ್ ಖಾನ್ ಪಠಾಣ್ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಎಲ್ಲಾ ಆವೃತ್ತಿಗಳನ್ನು ಒಳಗೊಂಡಂತೆ 543 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಹಿಂದಿಯಲ್ಲಿ 524 ಕೋಟಿ ರೂ. ಗಳಿಸಿ ದಾಖಲೆ ಮಾಡಿತ್ತು.

Jawan box office collection: Shah Rukh Khan’s Jawan records highest single day collection

ಪಠಾಣ್ ದಾಖಲೆ ಮುರಿಯುತ್ತಿರುವ ಜವಾನ್!!

ಜವಾನ್ ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್‌ನ ಎಲ್ಲಾ ದಾಖಲೆಯನ್ನು ಸುಲಭವಾಗಿ ಮುರಿಯುವ ಸಾಧ್ಯತೆಯಿದೆ. 57 ಕೋಟಿ ಗಳಿಸಿದ ಪಠಾಣ್ ಹಿಂದಿಕ್ಕಿ ಜವಾನ್ 75 ಕೋಟಿ ರೂಪಾಯಿ ಗಳಿಸಿ ವರ್ಷದ ಟಾಪ್ ಬಾಲಿವುಡ್ ಓಪನರ್ ಆಗಿ ಹೊರಹೊಮ್ಮಿದೆ. ಕೇವಲ ಮೂರೇ ದಿನಗಳಲ್ಲಿ 200 ಕೋಟಿ ಗಳಿಸಿದ ದಾಖಲೆ ಕೂಡ ಜವಾನ್ ಹೆಸರಿನಲ್ಲಿದೆ. ಪಠಾಣ್ 4 ದಿನಗಳಲ್ಲಿ 200 ಕೋಟಿ ಕ್ಲಬ್ ಮತ್ತು ಗದರ್ 2 ಬರೋಬ್ಬರಿ 5 ದಿನಗಳಲ್ಲಿ ಈ ದಾಖಲೆ ಮಾಡಿತ್ತು.

ಜವಾನ್ ಮೊದಲ ದಿನ 75 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಹಿಂದಿಯಲ್ಲಿ 65 ಕೋಟಿ ರೂಪಾಯಿ, ತಮಿಳು, ತೆಲುಗಿನಲ್ಲಿ 10 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಸೆಪ್ಟೆಂಬರ್ 8 ರ ಶುಕ್ರವಾರ 53.23 ಕೋಟಿ ರೂಪಾಯಿ ಹಾಗೂ ಶನಿವಾರ 77.83 ಕೋಟಿ ರೂಪಾಯಿ ಗಳಿಕೆ ಮಾಡಿದ್ದ ಸಿನಿಮಾ ಭಾನುವಾರ ಎಲ್ಲಾ ದಾಖಲೆಗಳನ್ನು ಸರಿಗಟ್ಟಿದೆ.

ತಮಿಳು ನಿರ್ದೇಶಕ ಅಟದಲಿ ನಿರ್ದೇಶನದ ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಸುನಿಲ್ ಗ್ರೋವರ್ ಇತರರು ನಟಿಸಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ, ಸಂಜಯ್ ದತ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Shah Rukh Khan’s Jawan records highest single day collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X