Jawan: ಕೇವಲ 7 ದಿನಕ್ಕೆ 650 ಕೋಟಿ ಬಾಚಿಕೊಂಡ ಶಾರುಖ್ ಖಾನ್‌ರ 'ಜವಾನ್'
ಬಾದ್‌ಷಾ ಶಾರುಖ್ ಖಾನ್ ಅಭಿನಯದ 'ಜವಾನ್' ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿಯೇ 'ಜವಾನ್' ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ 650 ಕೋಟಿ ಕಲೆಕ್ಷನ್ ಮಾಡಿದೆ.
ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಚಿತ್ರವು ಒಂದು ವಾರದಲ್ಲಿ (ಬುಧವಾರ) 9.7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ತಮಿಳು ಮಾಸ್ ನಿರ್ದೇಶಕ ಅಟ್ಲಿ ಚೊಚ್ಚಲ ಬಾಲಿವುಡ್ ಸಿನಿಮಾದಲ್ಲಿಯೇ ಭರ್ಜರಿ ಹಿಟ್ ನೀಡಿದ್ದಾರೆ.

ವಿಶ್ವಾದ್ಯಂತ 650 ಕೋಟಿಗೂ ಹೆಚ್ಚು ಗಳಿಸಿದ ಜವಾನ್
ಜವಾನ್ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 650 ಕೋಟಿ ಒಟ್ಟು ಮೊತ್ತವನ್ನು ದಾಟಿದೆ. 7 ನೇ ದಿನದಲ್ಲಿ ಭಾರತದಲ್ಲಿ 9,70,956 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಸಿನಿಮಾ ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಗುರುವಾರ - ಒಟ್ಟು 20.12 ಕೋಟಿ
ಹಿಂದಿ ಶೋಗಳು- 11,608
ಒಟ್ಟು - 17.62 ಕೋಟಿ
ತಮಿಳು ಶೋಗಳು - 1,052
ಒಟ್ಟು - 1.47 ಕೋಟಿ
ತೆಲುಗು ಶೋಗಳು - 852
ಒಟ್ಟು - 1.03 ಕೋಟಿ .
ಸ್ಕ್ಯಾಕ್ನಿಕ್ ವರದಿಯ ಪ್ರಕಾರ, ಜವಾನ್ ಭಾರತದಲ್ಲಿ ಬುಧವಾರ ಎಲ್ಲಾ ಭಾಷೆಗಳಲ್ಲಿ ಅಂದಾಜು 23.3 ಕೋಟಿ ಸಂಗ್ರಹಿಸಿದೆ. ಜವಾನ್‌ನ ಹಿಂದಿ ಆವೃತ್ತಿ 21.5 ಕೋಟಿ, ತಮಿಳು ಭಾಷೆಯಲ್ಲಿ 95 ಲಕ್ಷ ಮತ್ತು ತೆಲುಗು ಭಾಷೆಯಲ್ಲಿ 85 ಲಕ್ಷ ಗಳಿಸಿವೆ.

ಅತಿ ವೇಗವಾಗಿ 300 ಕೋಟಿ ದಾಟಿದ ಹಿಂದಿ ಚಿತ್ರ
ಅಟ್ಲಿ ನಿರ್ದೇಶನದ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಜವಾನ್ ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಒಂದೇ ದಿನ 75 ಕೋಟಿ ಗಳಿಸಿದ್ದ ಸಿನಿಮಾ ಜವಾನ್ ಅತೀವೇಗವಾಗಿ 300 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಹಿಂದಿ ಚಲನಚಿತ್ರವಾಗಿ ದಾಖಲೆ ಬರೆದಿದೆ.
ಭಾರತದಲ್ಲಿ 300 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಯಾವ ಯಾವ ಸಿನಿಮಾಗಳು ಎಷ್ಟು ದಿನ ತೆಗೆದುಕೊಂಡಿವೆ ಎಂಬುದನ್ನು ನೋಡುವುದಾದರೇ, ಶಾರುಖ್ ಅವರ ಪಠಾಣ್ (2023) ಏಳು ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿತ್ತು. ನಟ ಸನ್ನಿ ಡಿಯೋಲ್ ಅವರ ಇತ್ತೀಚೆಗೆ ಬಿಡುಗಡೆಯಾದ ಸೂಪರ್ ಹಿಟ್ ಚಿತ್ರ ಗದರ್ 2 ಎಂಟು ದಿನಗಳಲ್ಲಿ 300 ಕೋಟಿ ಕ್ಲಬ್ ಸೇರಿತ್ತು.
"ಜವಾನ 6 ದಿನಗಳಲ್ಲಿ, ಬಾಹುಬಲಿ 2 ರ ಹಿಂದಿ ಆವೃತ್ತಿ 10ನೇ ದಿನ, ಕೆಜಿಎಫ್ 2 ರ ಹಿಂದಿ ಆವೃತ್ತಿ 11 ದಿನಗಳಲ್ಲಿ, ದಂಗಲ್ 13 ದಿನಗಳಲ್ಲಿ, ಸಂಜು 16 ದಿನಗಳಲ್ಲಿ, ಟೈಗರ್ ಜಿಂದಾ ಹೈ 16 ನೇ ದಿನ, ಪಿಕೆ 17ನೇ ದಿನ, ವಾರ್ 19 ನೇ ದಿನ, ಬಜರಂಗಿ ಭಾಯಿಜಾನ್ 20ನೇ ದಿನ ಮತ್ತು ಸುಲ್ತಾನ್ 35 ದಿನಗಳಲ್ಲಿ 00 ಕೋಟಿ ಕ್ಲಬ್ ಪ್ರವೇಶಿಸಿದ್ದವು.


Click it and Unblock the Notifications











