Jawan Boxoffice: ಹಳೇ ಬಾಕ್ಸಾಫೀಸ್‌ ದಾಖಲೆಗಳು ಧೂಳಿಪಟ: 3 ದಿನಕ್ಕೆ 'ಜವಾನ್' ಗಳಿಸಿದ್ದೆಷ್ಟು?

ಶಾರುಖ್ ಖಾನ್ ನಟನೆಯ 'ಜವಾನ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಆರ್ಭಟ ಮುಂದುವರೆಸಿದೆ. ಅಟ್ಲಿ ಟೇಕಿಂಗ್, ಕಿಂಗ್ ಖಾನ್ ಪರ್ಫಾರ್ಮನ್ಸ್‌ಗೆ ಸಿನಿರಸಿಕರು ಫಿದಾ ಆಗಿದ್ದಾರೆ. ರೊಟೀನ್ ಆಕ್ಷನ್ ಡ್ರಾಮಾ ಆಗಿದ್ದರೂ ಟ್ರೀಟ್‌ಮೆಂಟ್ ಮಜವಾಗಿದ್ದು ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಿಂದೆ ಹಳೇ ಬಾಕ್ಸಾಫೀಸ್‌ ದಾಖಲೆಗಳನ್ನು ಅಳಿಸಿ 'ಜವಾನ್' ಆರ್ಭಟ ಮುಂದುವರೆದಿದೆ.

ಗುರುವಾರವೇ ತೆರೆಗಪ್ಪಳಿಸಿದ ಸಿನಿಮಾ ಭಾನುವಾರಕ್ಕೂ ಮುನ್ನವೇ 300 ಕೋಟಿ ರೂ. ಕ್ಲಬ್ ಸೇರಿಕೊಂಡಿದೆ. ಚಿತ್ರದಲ್ಲಿ ಡಬಲ್ ರೋಲ್‌ನಲ್ಲಿ ಬಾಲಿವುಡ್ ಬಾದ್‌ಶಾ ಡಬಲ್ ಕಿಕ್ ಕೊಡುತ್ತಿದ್ದಾರೆ. ಇಂಟೆಲಿಜೆನ್ಸ್ ಆಫಿಸರ್ ಹಾಗೂ ಕಳ್ಳನಾಗಿ ಕಿಂಗ್‌ಖಾನ್ ದರ್ಬಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಗುರುವಾರ ಭಾರತದಲ್ಲೇ ಸಿನಿಮಾ 74 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ವಿಶ್ವದಾದ್ಯಂತ 129 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ShahRukh-Khan-jawan-enters-300-cr-club

ಗುರುವಾರ, ಶುಕ್ರವಾರ, ಶನಿವಾರ ಸೇರಿ 'ಜವಾನ್' ಸಿನಿಮಾ ಈಗಾಗಲೇ 300 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ ಎಂದು ಬಾಕ್ಸಾಫೀಸ್ ಪಂಡಿತರರು ಹೇಳುತ್ತಿದ್ದಾರೆ. 2 ದಿನಕ್ಕೆ ಸಿನಿಮಾ 240.75 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು. 3ನೇ ದಿನ ಕಲೆಕ್ಷನ್ 70 ಕೋಟಿ ರೂ. ದಾಟಿದ್ದು ಸಿನಿಮಾ 300 ಕೋಟಿ ರೂ. ಕ್ಲಬ್ ಸೇರಿದೆ ಎನ್ನುವ ಅಂದಾಜಿದೆ.

ಹಳೇ ತಮಿಳು, ತೆಲುಗು ಸಿನಿಮಾಗಳನ್ನು ನೆನಪಿಸುವಂತಹ ಕತೆ 'ಜವಾನ್' ಚಿತ್ರದಲ್ಲಿದೆ. ರಾಬಿನ್ ಹುಡ್ ಶೈಲಿಯ ಹೀರೊ ಆಗಿ ಕಿಂಗ್ ಖಾನ್ ಅಬ್ಬರಿಸಿದ್ದಾರೆ. ನಯನತಾರ ನಾಯಕಿಯಾಗಿ ಮಿಂಚಿದ್ದು ವಿಜಯ್ ಸೇತುಪತಿ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಪ್ರಿಯಾಮಣಿ, ಯೋಗಿ ಬಾಬು, ಸಾನ್ಯಾ ಮಲ್ಹೋತ್ರಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ದಳಪತಿ ವಿಜಯ್ 'ಜವಾನ್' ಚಿತ್ರದಲ್ಲಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಅಂತೂ ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ ಎನ್ನುವಂತಿದೆ. 'ಜೈಲರ್' ಚಿತ್ರದ ತಮ್ಮ ಮ್ಯೂಸಿಕ್‌ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದ ಅನಿರುದ್ದ್ 'ಜವಾನ್' ಸಿನಿಮಾ ಬಿಜಿಎಂನಿಂದ ಮತ್ತೆ ಸುದ್ದಿಯಲ್ಲಿದ್ದಾರೆ. ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ರಿಲೀಸ್ ಆಗಿದೆ.

ಜೂನ್ 2ಕ್ಕೆ 'ಜವಾನ್' ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ತಡವಾದ ಕಾರಣ ರಿಲೀಸ್ ಮುಂದೂಡುವಂತಾಯಿತು. ಯಾವುದೇ ವಿಚಾರದಲ್ಲೂ ರಾಜಿಯಾಗದೇ ಬಹಳ ಅದ್ಧೂರಿಯಾಗಿ 'ಜವಾನ್' ಚಿತ್ರವನ್ನು ಕಟ್ಟಿಕೊಡಲಾಗಿದೆ. ಜಿ. ಕೆ ವಿಷ್ಣು ಸಿನಿಮಾಟೋಗ್ರಫಿ ಚಿತ್ರದ ಮತ್ತೊಂದು ಹೈಲೆಟ್. ಮುಂಬೈ, ಚೆನ್ನೈ, ಪುಣೆ, ಹೈದರಾಬಾದ್, ರಾಜಸ್ಥಾನ್, ಔರಂಗಾಬಾದ್‌ನಲ್ಲಿ ಬಹಳ ರೋಚಕವಾಗಿ ಚಿತ್ರವನ್ನು ಸೆರೆಹಿಡಿಯಲಾಗಿದೆ.

ಈ ವರ್ಷ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಮೊದಲ ವಾರವೇ 'ಜವಾನ್' 500 ಕೋಟಿ ರೂ. ಗಳಿಸುವ ಸುಳಿವು ಸಿಕ್ಕಿದೆ. ಹಾಗಾಗಿ ಈ ಸಿನಿಮಾ ಕೂಡ 1000 ಕೋಟಿ ದೋಚುವ ಅಂದಾಜಿದೆ. ಅದೇ ನಿಜವಾದರೇ ಒಂದೇ ವರ್ಷದಲ್ಲಿ ಸಾವಿರ ಕೋಟಿಯ 2 ಸಿನಿಮಾಗಳನ್ನು ಕಿಂಗ್‌ಖಾನ್ ಕೊಟ್ಟಂತಾಗುತ್ತದೆ. ಬಾಲಿವುಡ್ ಜೊತೆಗೆ ದಕ್ಷಿಣದ ಕಲಾವಿದರು, ತಂತ್ರಜ್ಞರನ್ನು ಸೇರಿಸಿಕೊಂಡು ಅಟ್ಲಿ 'ಜವಾನ್' ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಅಟ್ಲಿ ಜೊತೆಗೆ ಅನಿರುದ್ದ್, ನಯನತಾರಾ, ಛಾಯಾಗ್ರಹಕ ಜಿ. ಕೆ ವಿಷ್ಣು ಬಾಲಿವುಡ್ ಪ್ರವೇಶಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇವರೆಲ್ಲಾ ಹಿಂದಿ ಸಿನಿಮಾಗಳನ್ನು ಮತ್ತಷ್ಟು ಅವಕಾಶ ಗಿಟ್ಟಿಸುವ ಸಾಧ್ಯತೆಯಿದೆ.

More from Filmibeat

English summary
Atlee- ShahRukh Khan's Jawan enters Rs 300-crore club
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X