ಶಾರುಖ್ ಖಾನ್ ಅವರ ಜವಾನ್ ಚಿತ್ರದ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆ: ದೂರು ದಾಖಲು

ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅವರು ಈ ವರ್ಷದ ಎರಡನೇ ಅತಿ ದೊಡ್ಡ ಹಿಟ್ ಕೊಡಲು ಕಾಯುತ್ತಿದ್ದಾರೆ. ಬಹುನಿರೀಕ್ಷಿತ ಜವಾನ್ ಬಿಡುಗಡೆಗೆ ಸಜ್ಜಾಗಿದ್ದಾರೆ. ಚಿತ್ರಕ್ಕಾಗಿ ಈಗಾಗಲೇ ಪ್ರಚಾರದಲ್ಲಿ ತೊಡಗಿಕೊಂಡಿರುವ ನಟ ಮತ್ತು ಚಿತ್ರತಂಡಕ್ಕೆ ಕೆಟ್ಟ ಸಮಾಚಾರ ಬಂದಿದೆ. ಸಿನಿಮಾದ ಕೆಲವು ವಿಡಿಯೋ ಕ್ಲಿಪ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ.

ನಟ ಶಾರುಖ್ ಖಾನ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪತ್ನಿ ಗೌರಿ ಖಾನ್ ಅವರು ತಮ್ಮ ಮುಂಬರುವ ಚಲನಚಿತ್ರದ ವಿಡಿಯೋ ತುಣುಕುಗಳನ್ನು ಕದ್ದು ಸೋರಿಕೆ ಮಾಡಿದ್ದಾರೆ ಎಂದು ಆರೋಪಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

Jawan movie clips leaked online, Gauri Khan lodges complaint

ಜವಾನ್ ಚಿತ್ರದ ತುಣುಕುಗಳು ಆನ್‌ಲೈನ್‌ನಲ್ಲಿ ಸೋರಿಕೆ

ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ಶಾರುಖ್ ಖಾನ್ ಅವರ ಮುಂಬರುವ ಚಲನಚಿತ್ರದ ಕ್ಲಿಪ್‌ಗಳನ್ನು ಯಾರೋ ಕದ್ದಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಳ್ಳತನದ ಆರೋಪದ ಮೇಲೆ ಆಗಸ್ಟ್ 10, ಗುರುವಾರ ಮುಂಬೈನಲ್ಲಿ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್‌ನ ಪ್ರಕಾರ, ಶಾರುಖ್ ಖಾನ್ ಅಭಿನಯದ ಚಿತ್ರದ 'ಕದ್ದ' ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಕೆಲವು ಟ್ವಿಟರ್ ಬಳಕೆದಾರರು ಜವಾನ್ ಸಿನಿಮಾದ ವಿಡಿಯೋ ಕ್ಲಿಪ್‌ಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡಿರುವುದನ್ನು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಹೌಸ್ ಪತ್ತೆ ಮಾಡಿದೆ ಎಂದು ತಿಳಿಸಿದೆ.

ದೂರು ದಾಖಲಾದ ಬಳಿಕ, ತನಿಖೆ ನಡೆಸಿದ್ದು, ಐದು ಟ್ವಿಟರ್ ಹ್ಯಾಂಡಲ್‌ಗಳನ್ನು ಗುರುತಿಸಲಾಗಿದೆ. ಈ ಐದು ಖಾತೆಗಳ ಮೂಲಕ ಚಿತ್ರದ ವಿಡಿಯೋ ಕ್ಲಿಪ್‌ಗಳು ಸೋರಿಕೆಯಾಗಿದೆ. ಹೀಗಾಗಿ ಆರೋಪಿಗಳಿಗೆ ಕಾನೂನಿನ ಪ್ರಕಾರ ಸಮನ್ಸ್ ಕಳುಹಿಸಲಾಗಿದೆ, ಆದರೂ, ಟ್ವಿಟರ್ ಬಳಕೆದಾರರಲ್ಲಿ ಒಬ್ಬರು ಮಾತ್ರ ಸಮನ್ಸ್ ಅಂಗೀಕರಿಸಿದ್ದಾರೆ ಎಂದು ತಿಳಿದು ಬಂದಿದೆ.

Jawan movie clips leaked online, Gauri Khan lodges complaint

ಇದಕ್ಕೂ ಮೊದಲು, ರೆಡ್ ಚಿಲ್ಲಿಸ್ ವಿಡಿಯೋ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ವಾಣಿಜ್ಯ ಮೊಕದ್ದಮೆ ಹೂಡಿತು. ಜವಾನ್‌ನ ಸೋರಿಕೆಯಾದ ವಿಡಿಯೋಗಳನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗೆ ನಿರ್ದೇಶನ ನೀಡುವಂತೆ ಮನವಿ ಮಾಡಿ ಗೆದ್ದಿದೆ. ಚಿತ್ರತಂಡದ ಹಕ್ಕುಗಳ ಪ್ರಕಾರ, ವಿಡಿಯೋ ಕ್ಲಿಪ್‌ಗಳ ಕಳ್ಳತನವು ಚಲನಚಿತ್ರಕ್ಕೆ ಹಾನಿಯನ್ನುಂಟುಮಾಡಿದೆ, ಅದಲ್ಲದೆ ಹಕ್ಕುಸ್ವಾಮ್ಯ ಕಾಯ್ದೆಯನ್ನು ಉಲ್ಲಂಘಿಸಿದೆ.

ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 (ಕಳ್ಳತನ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 43 ಬಿ ಅಡಿಯಲ್ಲಿ ಅಕ್ರಮ ಡೇಟಾ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ. ಇದೆ ಜೊತೆಗೆ, ಜವಾನ್‌ನ ಕ್ಲಿಪ್‌ಗಳು ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಅಟ್ಲಿ ನಿರ್ದೇಶನದ ಸಿನಿಮಾದ ತುಣುಕುಗಳು ಈ ಹಿಂದೆಯೂ ಎರಡು ಬಾರಿ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದವು.

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಜವಾನ್

ತಮಿಳು ನಿರ್ದೇಶಕ ಅಟ್ಲೀ ಕುಮಾರ್ ನಿರ್ದೇಶನದ ಬಹು ನಿರೀಕ್ಷಿತ ಜವಾನ್ ಆಕ್ಷನ್-ಥ್ರಿಲ್ಲರ್ ಆಗಿದೆ. ಜವಾನ್ ಸಿನಿಮಾಕ್ಕೆ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಮತ್ತು ಗೌರವ್ ಗುಪ್ತಾ ಅವರು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ಸಹ-ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಅಲ್ಲದೆ, ಸೂಪರ್‌ಸ್ಟಾರ್‌ಗಳಾದ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಒಂದು ಹಾಡು ಜಿಂದಾ ಬಂದಾ ಬಿಡುಗಡೆಯಾಗಿದ್ದು, ಮತ್ತೊಂದು ಹಾಡು ಚಲೇಯಾ ಆಗಸ್ಟ್ 14 ರಂದು ಬಿಡುಗಡೆಯಾಗಲಿದೆ.

More from Filmibeat

English summary
Jawan movie clips leaked online, Gauri Khan lodges complaint
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X