'ಜವಾನ್' ಫೈಟ್ ಸೀನ್ ಲೀಕ್, 'ಮೆರ್ಸಲ್' ಸಿನಿಮಾದಲ್ಲೂ ಇದೆ ಅಂಥದ್ದೇ ಸೀನ್; ಮತ್ತೊಂದು 500 ಕೋಟಿ ಫಿಕ್ಸ್!
2018ರಲ್ಲಿ ಜೀರೊ ಎಂಬ ಸಿನಿಮಾ ಮಾಡಿ ಹೀನಾಯವಾಗಿ ಸೋತಿದ್ದ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಐದು ವರ್ಷಗಳ ಸುದೀರ್ಘ ಗ್ಯಾಪ್ ತೆಗೆದುಕೊಂಡು ಈ ವರ್ಷ ಪಠಾಣ್ ಮೂಲಕ ಅಬ್ಬರದ ಕಮ್ ಬ್ಯಾಕ್ ಮಾಡಿದ್ದಾರೆ. ಬಾಯ್‌ಕಟ್, ಅಪಪ್ರಚಾರ ಹೀಗೆ ಸಾಕಷ್ಟು ಅಡೆತಡೆಗಳನ್ನು ಮೆಟ್ಟಿ ನಿಂತ ಪಠಾಣ್ ವಿಶ್ವದಾದ್ಯಂತ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಹಾಗೂ ಹಿಂದಿ ವರ್ಷನ್ 500 ಕೋಟಿಗೂ ಹೆಚ್ಚು ಗಳಿಸಿ ಬಾಹುಬಲಿ 2 ಹಿಂದಿ ವರ್ಷನ್ ಮಾಡಿದ್ದ ಕಲೆಕ್ಷನ್ ಅನ್ನು ಹಿಂದಿಕ್ಕಿ ಬಾಲಿವುಡ್‌ನ ನೂತನ ಇಂಡಸ್ಟ್ರಿ ಹಿಟ್ ಆಗಿದೆ.
ಹೀಗೆ ಡ್ರೀಮ್ ಕಮ್ ಬ್ಯಾಕ್ ಮಾಡಿರುವ ಶಾರುಖ್ ಖಾನ್ ಅವರ ಮುಂದಿನ ಸಿನಿಮಾಗಳ ಮೇಲೆ ಇದ್ದ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಇದೇ ವರ್ಷದ ಜೂನ್ 2 ರಂದು ಈ ಚಿತ್ರ ತೆರೆಗೆ ಬರಲಿದೆ. ಈ ಚಿತ್ರ ಅನೌನ್ಸ್ ಆದಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಈ ನಿರೀಕ್ಷೆ ಪಠಾಣ್ ಗೆಲುವಿನ ಬಳಿಕ ದುಪ್ಪಟ್ಟಾಗಿದ್ದು, ಸದ್ಯ ಲೀಕ್ ಆಗಿರುವ ಈ ಚಿತ್ರದ ಫೈಟಿಂಗ್ ದೃಶ್ಯವೊಂದರ ತುಣುಕೊಂದು ಶಾರುಖ್ ಅಭಿಮಾನಿಗಳು ಹಾಗೂ ಸಿನಿ ರಸಿಕರನ್ನು ಹುಚ್ಚೆಬ್ಬಿಸಿದೆ.

ಹೌದು, ಟ್ವಿಟರ್‌ನಲ್ಲಿ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಜವಾನ್ ಸಾಹಸ ದೃಶ್ಯದ ತುಣುಕೊಂದು ಹರಿದಾಡುತ್ತಿದೆ. ಈ ದೃಶ್ಯದಲ್ಲಿ ಶಾರುಖ್ ಖಾನ್ ಸಿಕ್ಕಾಪಟ್ಟೆ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಬೆಲ್ಟ್‌ನಿಂದ ವಿಲನ್‌ಗಳಿಗೆ ಬಾರಿಸುತ್ತಿದ್ದಾರೆ. ಸಿಗರೇಟ್ ಸೇದುತ್ತಾ ಶಾರುಖ್ ಖಾನ್ ಫೈಟ್ ಮಾಡುತ್ತಿರುವ ಈ ಆರು ಸೆಕೆಂಡುಗಳ ವಿಡಿಯೊ ಚಿತ್ರದ ಮೇಲಿದ್ದ ನಿರೀಕ್ಷೆ ಎಂಬ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಈ ತುಣುಕನ್ನು ಕಂಡ ಬಾಲಿವುಡ್ ಮಂದಿ ಪಠಾಣ್ ರೀತಿಯೇ ಜವಾನ್ ಸಹ ಹಿಂದಿ ವರ್ಷನ್ ಒಂದರಲ್ಲಿಯೇ 500 ಕೋಟಿ ಗಳಿಸುವುದು ಪಕ್ಕಾ ಎನ್ನುತ್ತಿದ್ದಾರೆ.
ಚಿತ್ರತಂಡ ಲೀಕ್ ಆಗಿರುವ ಈ ವಿಡಿಯೊವನ್ನು ತೆಗೆದು ಹಾಕಲು ಯತ್ನಿಸುತ್ತಿದ್ದರೂ ಸಹ ವೇಗವಾಗಿ ಈ ದೃಶ್ಯ ಎಲ್ಲೆಡೆ ತಲುಪಿಬಿಟ್ಟಿದೆ. ಇನ್ನು ಈ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೇ ಅಟ್ಲಿ ತಮಿಳು ನಟ ವಿಜಯ್‌ಗೆ ನಿರ್ದೇಶಿಸಿದ್ದ ಮೆರ್ಸಲ್ ಸಿನಿಮಾದಲ್ಲಿಯೂ ವಿಜಯ್ ಇದೇ ರೀತಿ ಸಿಗರೇಟ್ ಸೇದುತ್ತಾ ಎದುರಾಳಿಗಳ ಜತೆ ಸೆಣಸಾಡುವ ದೃಶ್ಯವಿದೆ. ಈ ಎರಡೂ ದೃಶ್ಯಗಳನ್ನು ಕೆಲವರು ಹೋಲಿಸಿ ಮಾತನಾಡುತ್ತಿದ್ದು, ಅಟ್ಲಿ ಈ ಬಾರಿಯೂ ಗೆಲ್ಲಲಿದ್ದಾರೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ನಯನತಾರಾ ನಟಿಸುತ್ತಿದ್ದು, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ, ವಿಜಯ್ ಸೇತುಪತಿ ಹಾಗೂ ಯೋಗಿ ಬಾಬು ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ತಮಿಳು ನಟ ದಳಪತಿ ವಿಜಯ್ ಸಹ ಈ ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಹ ಇದ್ದು, ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಂತೂ ಪಕ್ಕಾ..


Click it and Unblock the Notifications










