Jawan Prevue: ಹೀರೊ ಅಲ್ಲ, ನಿರ್ದೇಶಕ ಅಲ್ಲ, ಜವಾನ್ ಪ್ರಿವ್ಯೂ ವೀಕ್ಷಿಸಿದ ಪ್ರತಿಯೊಬ್ಬರ ಜೈಕಾರವೂ ಈತನಿಗೆ!

ಇಂದು ( ಜುಲೈ 10 ) ಜವಾನ್ ಚಿತ್ರತಂಡ ಯುಟ್ಯೂಬ್‌ನಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಭಾನುವಾರದ ಮಜಾ ದಿನವನ್ನು ಕಳೆದು ಸೋಮವಾರ ಕೆಲಸ, ಕಾಲೇಜು ಎಂದು ಸೋಮವಾರವನ್ನು ಆರಂಭಿಸಿದವರಿಗೆ ಜವಾನ್ ಟೀಮ್ ಭರ್ಜರಿ 'ಪ್ರಿವ್ಯೂ' ಹೆಸರಿನಲ್ಲಿ ಟ್ರೈಲರ್ ಬಿಡುಗಡೆ ಮಾಡಿ ಕಿಕ್ಕೇರಿಸಿದೆ.

2 ನಿಮಿಷ 12 ಸೆಕೆಂಡುಗಳ ನಾನ್‌ಸ್ಟಾಪ್ ಗೂಸ್‌ಬಂಪ್ಸ್ ದೃಶ್ಯಗಳನ್ನೊಳಗೊಂಡ ಟ್ರೈಲರ್ ಇದಾಗಿದ್ದು ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದ ತುಂಬಾ ಜವಾನ್ ಜಪ ಶುರುವಾಗಿದೆ. ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

jawan-anirudh

ಗೌರಿ ಖಾನ್ ನಿರ್ಮಾಣ ಚಿತ್ರಕ್ಕಿದ್ದು, ಚಿತ್ರವನ್ನು ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಶಾರುಖ್ ಖಾನ್ ನಾಯಕನಾಗಿ ಕಾಣಿಸಿಕೊಂಡಿದ್ದರೆ, ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ, ವಿಜಯ್ ಸೇತುಪತಿ, ಸಹ ಚಿತ್ರದ ತಾರಾಗಣದಲ್ಲಿದ್ದಾರೆ.

ಇನ್ನು ಈ ಚಿತ್ರದ ಮೂಲಕ ನಿರ್ದೇಶಕ ಅಟ್ಲಿ ಬಾಲಿವುಡ್‌ಗೆ ಕಾಲಿಡಲಿದ್ದು, ಚಿತ್ರ ಸೆಟ್ಟೇರಿದಾಗಿನಿಂದಲೂ ಸಹ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ. ಟ್ರೈಲರ್ ವೀಕ್ಷಿಸಿ ಬಳಿಕ ಈ ನಿರೀಕ್ಷೆ ಡಬಲ್ ಆಗಿದ್ದು, ಚಿತ್ರ ಯಾವಾಗ ಬಿಡುಗಡೆಯಾಗುತ್ತೋ ಎಂದು ಶಾರುಖ್ ಖಾನ್ ಫ್ಯಾನ್ಸ್ ಕಾತರತೆಯಿಂದ ಕಾಮೆಂಟ್ ಮಾಡುತ್ತಿದ್ದಾರೆ. ಹೀಗೆ ಬಿಡುಗಡೆಗೊಂಡ ಕೆಲವೇ ನಿಮಿಷಗಳಲ್ಲಿ ಹಿಟ್‌ಲಿಸ್ಟ್ ಸೇರಿರುವ ಜವಾನ್ ಟ್ರೈಲರ್‌ನಲ್ಲಿ ಶಾರುಖ್ ಖಾನ್ ವಿಭಿನ್ನ ಲುಕ್ ಹಾಗೂ ಅಟ್ಲಿ ನಿರ್ದೇಶನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಈ ಇಬ್ಬರಿಗಿಂತಲೂ ತಂಡದ ಮತ್ತೋರ್ವ ಕಲಾವಿದ ಹೆಚ್ಚು ಮೆಚ್ಚುಗೆಯನ್ನು ಗಿಟ್ಟಿಕೊಳ್ಳುತ್ತಿದ್ದಾರೆ.

ಹೌದು, ಜವಾನ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ಅನಿರುದ್ ರವಿಚಂದರ್ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಟ್ರೈಲರ್ ಆರಂಭದಿಂದ ಕೊನೆಯವರೆಗೂ ರೋಮಾಂಚನಕಾರಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ನೀಡುವುದರಲ್ಲಿ ಅನಿರುದ್ಧ್ ಯಶಸ್ವಿಯಾಗಿದ್ದಾರೆ.

ಟ್ರೈಲರ್ ವೀಕ್ಷಿಸಿದ ಬಳಿಕ ಯುಟ್ಯೂಬ್‌ನಲ್ಲಿ ಟ್ರೈಲರ್ ಹೇಗಿದೆ ಎಂದು ಕಾಮೆಂಟ್ ಮಾಡುತ್ತಿರುವ ಪ್ರತಿಯೊಬ್ಬರೂ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ವಿಮರ್ಶೆ ಮಾಡುತ್ತಿರುವ ಎಲ್ಲರೂ ಅನಿರುದ್ಧ್ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಕಿಂಗ್ ಆಫ್ ಬಿಜಿಎಂ, ಎಂತಹ ಅದ್ಭುತ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಎಂದು ನೆಟ್ಟಿಗರು ಹೊಗಳುತ್ತಿದ್ದು, ಶಾರುಖ್ ಖಾನ್ ಅಭಿಮಾನಿಗಳು ವಿಶೇಷವಾಗಿ ಟ್ರೈಲರ್‌ನ ಮಧ್ಯದಲ್ಲಿ ಬರುವ ಕಿಂಗ್ ಖಾನ್ ಎಂಬ ಪದವನ್ನೊಳಗೊಂಡ ಹಾಡಿಗೆ ಮನ ಸೋತಿದ್ದಾರೆ.

ಈ ಮೂಲಕ ಅನಿರುದ್ಧ್ ಸಂಗೀತ ನಿರ್ದೇಶನ ಮಾಡಿರುವ ಮೊದಲ ಹಿಂದಿ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಕೇವಲ ಟ್ರೈಲರ್ ಕಾರಣದಿಂದಾಗಿಯೇ ಬಾಲಿವುಡ್ ಸಿನಿ ರಸಿಕರಿಂದ ದೊಡ್ಡ ಸ್ವಾಗತವನ್ನು ಪಡೆದುಕೊಂಡಿದ್ದಾರೆ. ಸೌತ್‌ನಲ್ಲಿ ಈಗಾಗಲೇ ದೊಡ್ಡ ದೊಡ್ಡ ಹಿಟ್ ಹಾಡುಗಳು ಹಾಗೂ ಹಿನ್ನೆಲೆ ಸಂಗೀತವನ್ನು ನೀಡಿ ನಂಬರ್ ಒನ್ ಸ್ಥಾನದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಬ್ಬರಿಸುತ್ತಿರುವ ಅನಿರುದ್ಧ್ ಇದೀಗ ಬಾಲಿವುಡ್‌ನಲ್ಲೂ ಸಹ ತಮ್ಮ ಆಳ್ವಿಕೆಯನ್ನು ಆರಂಭಿಸಿರುವುದಂತೂ ಪಕ್ಕಾ..

More from Filmibeat

English summary
Jawan Prevue: Netizens praising Anirudh for his firework BGM for the movie Jawan. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X