ಆದಿಪುರುಷ್, ಕೆಜಿಎಫ್ ಚಾಪ್ಟರ್ 2 ಟ್ರೈಲರ್ ವ್ಯೂಸ್ ದಾಖಲೆ ಮುರಿಯುವಲ್ಲಿ ಎಡವಿದ 'ಜವಾನ್'!
ನಿನ್ನೆಯಷ್ಟೇ ( ಜುಲೈ 10 ) ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಜವಾನ್ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಜವಾನ್ ಪ್ರಿವ್ಯೂ ಎಂಬ ವಿಶೇಷ ಹೆಸರಿನ ಅಡಿಯಲ್ಲಿ ಬಿಡುಗಡೆಗೊಳಿಸಿತು. ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಪ್ರವೇಶ ಮಾಡಿದ್ದು, ಅತ್ತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
ಇನ್ನು ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರಿಗೆ ಹಾಗೂ ಶಾರುಖ್ ಖಾನ್ ಅಭಿಮಾನಿಗಳಿಗೆ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. 2 ನಿಮಿಷ 12 ಸೆಕೆಂಡುಗಳ ನಾನ್‌ಸ್ಟಾಪ್ ಗೂಸ್‌ಬಂಪ್ಸ್ ದೃಶ್ಯಗಳನ್ನೊಳಗೊಂಡ ಟ್ರೈಲರ್ ಇದಾಗಿದ್ದು ಬಿಡುಗಡೆಗೊಂಡ ಬಳಿಕ ಸಾಮಾಜಿಕ ಜಾಲತಾಣದ ತುಂಬಾ ಜವಾನ್ ಜಪ ಶುರುವಾಗಿದೆ.

ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ.
ಇನ್ನು ಈ ಚಿತ್ರದ ಟ್ರೈಲರ್ ಬಿಡುಗಡೆಯಾದ ಬಳಿಕ ಹಲವಾರು ದಾಖಲೆಗಳನ್ನು ಬರೆಯುತ್ತಿದ್ದು, 24 ಗಂಟೆಗಳಲ್ಲಿ ಯುಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್ ಎಲ್ಲಾ ವೇದಿಕೆಯೂ ಸೇರಿದಂತೆ ಒಟ್ಟು 122 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಪೈಕಿ ಯುಟ್ಯೂಬ್ ಒಂದರಲ್ಲಿಯೇ ಜವಾನ್ ಚಿತ್ರದ ಟ್ರೈಲರ್ 45.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡು 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಹಿಂದಿ ಟ್ರೈಲರ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ಆದಿಪುರುಷ್ ಹಾಗೂ ಕೆಜಿಎಫ್ ಚಾಪ್ಟರ್ 2 ವೀಕ್ಷಣೆಗಳ ದಾಖಲೆಯನ್ನು ಹಿಂದಿಕ್ಕುವಲ್ಲಿ ವಿಫಲವಾಗಿದೆ.
ಹಾಗಿದ್ದರೆ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ಯುಟ್ಯೂಬ್ ವ್ಯೂಸ್ ಪಡೆದುಕೊಂಡ ಹಿಂದಿ ಟ್ರೈಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ...
1. ಆದಿಪುರುಷ್ - 52.3 ಮಿಲಿಯನ್ ವ್ಯೂಸ್
2. ಥೂ ಜೂತಿ ಮೈನ್ ಮಕ್ಕರ್ - 52.3 ಮಿಲಿಯನ್ ವ್ಯೂಸ್
3. ಕೆಜಿಎಫ್ ಚಾಪ್ಟರ್ 2 - 52.3 ಮಿಲಿಯನ್ ವ್ಯೂಸ್
4. ಜವಾನ್ - 52.3 ಮಿಲಿಯನ್ ವ್ಯೂಸ್
5. ಸರ್ಕಸ್ - 52.3 ಮಿಲಿಯನ್ ವ್ಯೂಸ್
ಎಲ್ಲಾ ಭಾಷೆಗಳ ಟ್ರೈಲರ್ ಸೇರಿದಂತೆ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡ ಟ್ರೈಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ..
1. ಕೆಜಿಎಪ್ ಚಾಪ್ಟರ್ 2 - 106.5 ಮಿಲಿಯನ್ ವ್ಯೂಸ್
2. ಆದಿಪುರುಷ್ - 74 ಮಿಲಿಯನ್ ವ್ಯೂಸ್
3. ರಾಧೆ ಶ್ಯಾಮ್ - 57.5 ಮಿಲಿಯನ್ ವ್ಯೂಸ್
4. ಜವಾನ್ - 55 ಮಿಲಿಯನ್ ವ್ಯೂಸ್
5. ಆರ್ ಆರ್ ಆರ್ - 51.1 ಮಿಲಿಯನ್ ವ್ಯೂಸ್
6. ಥೂ ಜೂತಿ ಮೈನ್ ಮಕ್ಕರ್ - 50.9 ಮಿಲಿಯನ್ ವ್ಯೂಸ್
7. ಸಾಹೋ - 49 ಮಿಲಿಯನ್ ವ್ಯೂಸ್


Click it and Unblock the Notifications











