Jawan Trailer: ತಮಿಳಿನಲ್ಲಿ ವಿಜಯ್, ಕನ್ನಡದಲ್ಲಿ ಯಾವ ನಟನಿಂದ ಜವಾನ್ ಟ್ರೈಲರ್ ಲಾಂಚ್?

ಜುಲೈ 10ರಂದು ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಜವಾನ್ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಜವಾನ್ ಪ್ರಿವ್ಯೂ ಎಂಬ ವಿಶೇಷ ಹೆಸರಿನ ಅಡಿಯಲ್ಲಿ ಬಿಡುಗಡೆಗೊಳಿಸಿತ್ತು. ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಪ್ರವೇಶ ಮಾಡಿದ್ದು, ಅತ್ತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.

ಇನ್ನು ಅಂದು ಬಿಡುಗಡೆಗೊಂಡಿದ್ದ ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರಿಗೆ ಹಾಗೂ ಶಾರುಖ್ ಖಾನ್ ಅಭಿಮಾನಿಗಳಿಗೆ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗೊಳಿಸಿತ್ತು. 2 ನಿಮಿಷ 12 ಸೆಕೆಂಡುಗಳ ನಾನ್‌ಸ್ಟಾಪ್ ಗೂಸ್‌ಬಂಪ್ಸ್ ದೃಶ್ಯಗಳನ್ನೊಳಗೊಂಡ ಈ ಟ್ರೈಲರ್ ಬಿಡುಗಡೆಗೊಂಡ ಬಳಿಕ ಸಾಮಾಜಿಕ ಜಾಲತಾಣದ ತುಂಬಾ ಜವಾನ್ ಜಪ ಶುರುವಾಗುವಂತೆ ಮಾಡಿತ್ತು.

Jawan trailer: Yash likey to release Jawan trailer by sharing link on social media

ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದಿದ್ದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ.

ಹೀಗೆ ಮೊದಲ ಟ್ರೈಲರ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದ್ದ ಜವಾನ್ ಚಿತ್ರದ ಎರಡನೇ ಟ್ರೈಲರ್ ಇಂದು ( ಆಗಸ್ಟ್ 28 ) ಬಿಡುಗಡೆಯಾಗಲಿದೆ. ಇನ್ನು ಜವಾನ್ ಚಿತ್ರದ ಎರಡನೇ ಟ್ರೈಲರ್ ಅನ್ನು ವಿವಿಧ ಚಿತ್ರರಂಗಗಳ ಸ್ಟಾರ್ ನಟರು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಯಲ್ಲಿ ಲಿಂಕ್ ಹಂಚಿಕೊಳ್ಳುವ ಮೂಲಕ ಬಿಡುಗಡೆ ಮಾಡಲಿದ್ದಾರೆ.

ತಮಿಳಿನಲ್ಲಿ ದಳಪತಿ ವಿಜಯ್ ಜವಾನ್ ಚಿತ್ರದ ಟ್ರೈಲರ್ ಲಾಂಚ್ ಮಾಡಲಿದ್ದರೆ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಬಿಡುಗಡೆ ಮಾಡಲಿದ್ದಾರೆ. ಇನ್ನು ಜವಾನ್ ಚಿತ್ರದ ಟ್ರೈಲರ್ ಲಿಂಕ್ ಅನ್ನು ಕನ್ನಡದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗ್ತಿದೆ. ಚಿತ್ರದ ಐಎಂಡಿಬಿ ವೆಬ್ ಪೇಜ್‌ನಲ್ಲಿ ಚಿತ್ರತಂಡದ ಧನ್ಯವಾದ ಕೆಟಗರಿ ಅಡಿಯಲ್ಲಿ ರಾಕಿಂಗ್ ಸ್ಟಾರ್ ಹೆಸರೂ ಸಹ ಇದೆ. ಹೀಗಾಗಿ ಯಶ್ ಜವಾನ್ ಟ್ರೈಲರ್ ಲಾಂಚ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಅಂದಹಾಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗುತ್ತಿರುವ ಜವಾನ್ ಕನ್ನಡ ಭಾಷೆಗೆ ಡಬ್ ಆಗುತ್ತಿಲ್ಲ. ಹೀಗಾಗಿ ಯಶ್ ಜವಾನ್ ಟ್ರೈಲರ್ ಲಿಂಕ್ ಹಂಚಿಕೊಂಡರೆ ಯಾವ ಅವತರಣಿಕೆಯ ಲಿಂಕ್ ಹಂಚಿಕೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಇನ್ನು ಈ ಹಿಂದೆ ಕೆಜಿಎಫ್ ಚಾಪ್ಟರ್ 1 ಎದುರು ಇದೇ ಶಾರುಖ್ ಖಾನ್ ನಟನೆಯ ಜೀರೋ ಚಿತ್ರ ಬಿಡುಗಡೆಗೊಂಡು ಹೀನಾಯವಾಗಿ ಸೋತಿತ್ತು. ಆಗಿನಿಂದ ಯಶ್ ಎಂದರೆ ಶಾರುಖ್‌ಗೆ ಅಷ್ಟಕ್ಕಷ್ಟೇ ಎಂಬ ಮಾತುಗಳೂ ಸಹ ಕೇಳಿಬಂದಿದ್ದವು. ಆದರೆ ಈ ಟ್ರೈಲರ್ ಲಾಂಚ್ ಮೂಲಕ ಶಾರುಖ್‌ಗೆ ಯಶ್ ಸಾಥ್ ನೀಡಲಿದ್ದಾರೆ.

More from Filmibeat

English summary
Jawan trailer: Yash likey to release Jawan trailer by sharing link on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X