Jawan: ನೀನು ಸೇಡು ತೀರಿಸಿಕೊಳ್ಳಬಹುದು, ಆದರೆ ನನ್ನ ಹುಡುಗಿಯರು ನಿಂಗೆ ಸಿಗಲ್ಲ; ವಿಜಯ್‌ಗೆ ಶಾರುಖ್ ಟಾಂಗ್!
ಜುಲೈ 10ರಂದು ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಜವಾನ್ ಚಿತ್ರದ ಟ್ರೈಲರ್ ಅನ್ನು ಚಿತ್ರತಂಡ ಜವಾನ್ ಪ್ರಿವ್ಯೂ ಎಂಬ ವಿಶೇಷ ಹೆಸರಿನ ಅಡಿಯಲ್ಲಿ ಬಿಡುಗಡೆಗೊಳಿಸಿತ್ತು. ಇದೇ ಮೊದಲ ಬಾರಿಗೆ ತಮಿಳು ನಿರ್ದೇಶಕ ಅಟ್ಲಿ ಹಿಂದಿ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಾಲಿವುಡ್ ಪ್ರವೇಶ ಮಾಡಿದ್ದಾರೆ. ಅತ್ತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.
ಈ ಟ್ರೈಲರ್ ವೀಕ್ಷಿಸಿದ ಸಿನಿ ರಸಿಕರಿಗೆ ಹಾಗೂ ಶಾರುಖ್ ಖಾನ್ ಅಭಿಮಾನಿಗಳಿಗೆ ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಈ ವರ್ಷದ ಆರಂಭದಲ್ಲಿ ಪಠಾಣ್ ಚಿತ್ರದ ಮೂಲಕ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ಕೊಳ್ಳೆ ಹೊಡೆದ ಶಾರುಖ್ ಖಾನ್ ನಟನೆಯ ಮುಂದಿನ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದು, ಪ್ರಿಯಾಮಣಿ ಸಹ ಚಿತ್ರದ ತಾರಾಗಣದಲ್ಲಿದ್ದಾರೆ.

ಇನ್ನು ಜವಾನ್ ಸೆಪ್ಟೆಂಬರ್ ಮೊದಲ ವಾರ ತೆರೆಗೆ ಬರಲು ಸಿದ್ಧವಾಗಿದೆ. ಹೌದು, ಸೆಪ್ಟೆಂಬರ್ 7ರಂದು ಜವಾನ್ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು, ಬಿಡುಗಡೆಗೆ ಇನ್ನೊಂದು ವಾರ ಬಾಕಿ ಇರುವಾಗ ಜವಾನ್ ಚಿತ್ರತಂಡ ಪ್ರಿ ರಿಲೀಸ್ ಈವೆಂಟ್ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮಾಡಿದೆ.
ನಿನ್ನೆ ( ಆಗಸ್ಟ್ 30 ) ನಡೆದ ಈ ಪ್ರಿ ರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ನಟ ಶಾರುಖ್ ಖಾನ್ ಹಾಗೂ ವಿಜಯ್ ಸೇತುಪತಿ ನಡುವೆ ನಡೆದ ಸಂಭಾಷಣೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಹೌದು, ವಿಜಯ್ ಸೇತುಪತಿ ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡು ಆ ಸಮಯದಲ್ಲಿ ಶಾರುಖ್ ಖಾನ್ ತನ್ನ ಜೀವನದಲ್ಲಿ ಯಾವ ರೀತಿಯ ಪ್ರಭಾವವನ್ನು ಬೀರಿದ್ರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ತಮ್ಮ ಶಾಲಾ ದಿನಗಳಲ್ಲಿ ಹುಡುಗಿಯೋರ್ವಳನ್ನು ಪ್ರೀತಿಸಿದ್ದನ್ನು ಹಾಗೂ ಆಕೆ ಶಾರುಖ್ ಖಾನ್ ಅಭಿಮಾನಿಯಾಗಿದ್ದಳು ಎಂಬುದನ್ನು ವಿಜಯ್ ಸೇತುಪತಿ ಹಂಚಿಕೊಂಡಿದ್ದು ಆ ಕುರಿತಾಗಿಯೇ ಟಾಂಗ್ ಒಂದನ್ನೂ ಸಹ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶಾರುಖ್ ಖಾನ್ ಸಹ ವಿಜಯ್ ಸೇತುಪತಿ ಕಾಲೆಳೆದಿದ್ದಾರೆ.
"ನನ್ನ ಶಾಲಾ ದಿನಗಳಲ್ಲಿ ಒಂದು ಹುಡುಗಿ ಮೇಲೆ ನನಗೆ ದೊಡ್ಡ ಮಟ್ಟದಲ್ಲಿ ಕ್ರಶ್ ಇತ್ತು. ಆದರೆ ಆಕೆಗೆ ಶಾರುಖ್ ಖಾನ್ ಮೇಲೆ ಪ್ರೀತಿಯಿತ್ತು. ಹೀಗಾಗಿ ಜವಾನ್ ಚಿತ್ರದಲ್ಲಿ ಖಳನಾಯಕನಾಗುವ ಮೂಲಕ ನಾನು ಶಾರುಖ್ ಖಾನ್ ವಿರುದ್ಧ ಸೇಡು ತೀರಿಸಿಕೊಂಡಿದ್ದೇನೆ ಎಂದೆನಿಸುತ್ತೆ" ಎಂದು ವಿಜಯ್ ಸೇತುಪತಿ ಹೇಳಿಕೊಂಡಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಶಾರುಖ್ ಖಾನ್ "ನೀವು ಸೇಡು ತೀರಿಸಿಕೊಳ್ಳಬಹುದು, ಆದರೆ ನನ್ನ ಹುಡುಗಿಯರು ನಿನಗೆ ಸಿಗಲ್ಲ" ಎಂದು ಹೇಳುವ ಮೂಲಕ ವಿಜಯ್ ಸೇತುಪತಿಗೆ ಟಾಂಗ್ ಕೊಟ್ಟಿದ್ದಾರೆ.


Click it and Unblock the Notifications











