ಡಬಲ್ ಮೀನಿಂಗ್ ಜೋಕ್ಸ್ ವಿರುದ್ಧ ಜಯಮ್ಮ ಗರಂ
ಬಾಲಿವುಡ್ ತಾರೆ ಹಾಗೂ ರಾಜ್ಯಸಭಾ ಸದಸ್ಯೆ ಜಯ ಬಚ್ಚನ್ ಅವರು ಎಫ್ಎಂ ಚಾನಲ್ ಗಳ ವಿರುದ್ಧ ಗರಂ ಆಗಿದ್ದಾರೆ. ಇತ್ತೀಚೆಗೆ ಚಾನಲ್ ಗಳಲ್ಲಿ ಪ್ರಸಾರವಾಗುತ್ತಿರುವ ಅಶ್ಲೀಲ ಹಾಗೂ ಡಬಲ್ ಮೀನಿಂಗ್ ಜೋಕ್ಸ್ ಬಗ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಅವರು ಗುರುವಾರ (ಆ.14) ರಾಜ್ಯಸಭೆಯಲ್ಲಿ ಧ್ವನಿ ಎತ್ತಿದರು. ಸರ್ಕಾರ ಮಧ್ಯ ಪ್ರವೇಶಿಸಿ ಎಫ್ಎಂ ಚಾನಲ್ ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ತಾವು ವಿಡಂಬನೆಯ ವಿರೋಧಿ ಅಲ್ಲ, ಆದರೆ ಅವರು ಬಳಸುತ್ತಿರುವ ಭಾಷೆಯನ್ನು ಖಂಡಿಸುತ್ತೇನೆ. ಇದು ನನ್ನ ಮನಸ್ಸಿಗೆ ಹಿಡಿಸುತ್ತಿಲ್ಲ" ಎಂದಿದ್ದಾರೆ.

ರೇಡಿಯೋ ಜಾಕಿಗಳು ಮೊದಲು ಆಕ್ಷೇಪಾರ್ಹ ಭಾಷೆ ಹಾಗೂ ಮಾಹಿತಿಯನ್ನು ಪರಿಶೀಲಿಸಿ ಪ್ರಸಾರ ಮಾಡಲಿ. ಮನೆಯಲ್ಲಿ ಕುಳಿತಿರುವಂತಹ ನಮ್ಮಂತಹವರ ಬಗ್ಗೆ ಅವರಿಗೆ ಗೌರವ ಇರಲಿ. ನಾಯಕರನ್ನು ಮಿಮಿಕ್ರಿ ಮಾಡಿ ಲೇವಡಿ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಜಯಮ್ಮನ ಆಕ್ಷೇಪವನ್ನು ಒಪ್ಪಿರುವ ವಾರ್ತಾ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವೇದ್ ಕರ್ ರೇಡಿಯೋ ಜಾಕಿಗಳ ವಿರುದ್ಧ ಕ್ರಮಕೊಳ್ಳುವ ಭರವಸೆ ನೀಡಿದ್ದಾರೆ. ಇಷ್ಟಕ್ಕೂ ಜಯಮ್ಮ ಅದ್ಯಾವ ಎಫ್ಎಂ ಚಾನಲ್ಲಿನಲ್ಲಿ ಅದ್ಯಾವ ಜೋಕು ಕೇಳಿದರೋ ಎಂಬುದು ಗೊತ್ತಿಲ್ಲ. (ಏಜೆನ್ಸೀಸ್)


Click it and Unblock the Notifications











