twitter
    For Quick Alerts
    ALLOW NOTIFICATIONS  
    For Daily Alerts

    ಡ್ರಗ್ಸ್ ಪ್ರಕರಣ: ಜಯಾ ಬಚ್ಚನ್ ಹೇಳಿಕೆಗೆ ನಟಿ ಜಯಪ್ರದಾ ಆಕ್ಷೇಪ

    |

    ಡ್ರಗ್ಸ್ ಮಾಫಿಯಾ ಪ್ರಕರಣವನ್ನು ನಟಿ ಮತ್ತು ಸಂಸದೆ ಜಯಾ ಬಚ್ಚನ್ ರಾಜಕೀಯಗೊಳಿಸುತ್ತಿದ್ದಾರೆ ಎಂದು ನಟ ಮತ್ತು ಬಿಜೆಪಿ ಲೋಕಸಭಾ ಸದಸ್ಯ ರವಿ ಕಿಶನ್ ಹೇಳಿದ್ದ ಹೇಳಿಕೆಗೆ ನಟಿ ಜಯಪ್ರದಾ ಬೆಂಬಲ ನೀಡಿದ್ದಾರೆ.

    ಜಯಾ ಬಚ್ಚನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜಯಪ್ರದಾ, "ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸುವ ವಿಷಯವಾಗಿ ನಾನು ರವಿ ಕಿಶನ್ ಹೇಳಿಕೆಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಮಾದಕ ವಸ್ತು ಬಳಕೆಯ ವಿರುದ್ಧ ನಾವು ಧ್ವನಿ ಎತ್ತಬೇಕು, ಯುವಕರನ್ನು ಕಾಪಾಡಬೇಕು. ಜಯಾ ಬಚ್ಚನ್ ಭಾವನೆಯನ್ನು ಗೌರವಿಸುತ್ತೇನೆ. ಆದರೆ ಈ ವಿಚಾರವನ್ನು ರಾಜಕೀಯಗೊಳಿಸಿವುದು ಸರಿಯಲ್ಲ" ಎಂದು ಹೇಳಿದ್ದಾರೆ. ಮುಂದೆ ಓದಿ..

    ಸಂಸತ್ ಭಾಷಣದ ಬೆನ್ನಲ್ಲೇ ಜಯಾ ಬಚ್ಚನ್ ನಿವಾಸಕ್ಕೆ ಪೊಲೀಸ್ ಭದ್ರತೆಸಂಸತ್ ಭಾಷಣದ ಬೆನ್ನಲ್ಲೇ ಜಯಾ ಬಚ್ಚನ್ ನಿವಾಸಕ್ಕೆ ಪೊಲೀಸ್ ಭದ್ರತೆ

    ಸುಶಾಂತ್ ಸಿಂಗ್ ಹಾಗೆ ಮತ್ತೊಂದು ಪ್ರಕರಣ ಆಗಬಾರದು

    ಸುಶಾಂತ್ ಸಿಂಗ್ ಹಾಗೆ ಮತ್ತೊಂದು ಪ್ರಕರಣ ಆಗಬಾರದು

    "ಜಯಾ ಬಚ್ಚನ್ ಅವರು ಈ ವಿಷಯವನ್ನು ವೈಯಕ್ತಿಕವಾಗಿ ಏಕೆ ತೆಗೆದುಕೊಳ್ಳುತ್ತಿದ್ದಾರೆ. ಸುಶಾಂತ್ ಸಿಂಗ್ ಹಾಗೆ ಮತ್ತೊಂದು ಪ್ರಕರಣ ಆಗದ ಹಾಗೆ ಯುವಕರನ್ನು ಉಳಿಸುವ ಬಗ್ಗೆ ಮಾತನಾಡಬೇಕು. ಸುಶಾಂತ್ ಸಿಂಗ್ ಈಗ ನಮ್ಮೊಂದಿಗೆ ಇಲ್ಲ. ಇಡೀ ದೇಶ ಅವರ ಕುಟುಂಬಕ್ಕೆ ನ್ಯಾಯ ಒದಗಿಸುತ್ತಿದೆ." ಎಂದು ಜಯಪ್ರದಾ ಹೇಳಿದ್ದಾರೆ.

    ರವಿ ಕಿಶನ್ ಹೇಳಿಕೆ ಖಂಡಿಸಿದ್ದ ಜಯಾ ಬಚ್ಚನ್

    ರವಿ ಕಿಶನ್ ಹೇಳಿಕೆ ಖಂಡಿಸಿದ್ದ ಜಯಾ ಬಚ್ಚನ್

    ಗ್ರಡ್ಸ್ ಮಾಫಿಯಾದ ವಿಚಾರವಾಗಿ ನಟ ಮತ್ತು ಬಿಜೆಪಿ ನಾಯಕ ರವಿ ಕಿಶನ್ ಬಾಲಿವುಡ್ ನಲ್ಲಿ ಡ್ರಾಗ್ಸ್ ದಂಧೆ ನಡೆಯುತ್ತಿದೆ, ಅನೇಕರು ಡ್ರಗ್ಸ್ ವ್ಯಸನಿಗಳಾಗಿದ್ದಾರೆ ಎಂದು ಹೇಳಿದ್ದರು. ರವಿ ಕಿಶನ್ ಹೇಳಿಕೆಯನ್ನು ಖಂಡಿಸಿ ಜಯಾ ಬಚ್ಚನ್, ಚಿತ್ರರಂಗಕ್ಕೆ ಕಳಂಕ ಉಂಟು ಮಾಡಲು ವ್ಯವಸ್ಥಿತವಾದ ಪಿತೂರಿ ನಡೆಯುತ್ತಿದೆ ಎಂದಿದ್ದರು. ಲೋಕಸಭೆ ಸದಸ್ಯರರೊಬ್ಬರು, ಚಿತ್ರೋದ್ಯಮದ ವಿರುದ್ಧ ಮಾತನಾಡಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದು ಆಹಾರ ನೀಡಿದ ಕೈಯನ್ನೆ ಕಚ್ಚಿದಂತೆ ಎಂದು ಜಯಾ ಬಚ್ಚನ್ ಹೇಳಿದ್ದರು.

    ಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶಡ್ರಗ್ಸ್ ಪ್ರಕರಣ: ನಟಿ ಕಂಗನಾ ಮತ್ತು ರವಿ ಕಿಶನ್ ವಿರುದ್ಧ ಜಯಾ ಬಚ್ಚನ್ ಆಕ್ರೋಶ

    ಜಯಾ ಬಚ್ಚನ್ ಹೇಳಿಕೆಗೆ ವಿರೋಧ

    ಜಯಾ ಬಚ್ಚನ್ ಹೇಳಿಕೆಗೆ ವಿರೋಧ

    ಜಯಾ ಬಚ್ಚನ್ ಹೇಳಿಕೆ ದೇಶದಾದ್ಯಂತ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅನೇಕರು ಜಯಾ ಬಚ್ಚನ್ ಅವರನ್ನು ಟ್ರೋಲ್ ಮಾಡುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಜಯಾ ಬಚ್ಚನ್ ಕಾಲೆಳೆಯುತ್ತಿದ್ದಾರೆ. ಆದರೆ ಇನ್ನು ಕೆಲವು ನಟಿಯರು ತಾಪ್ಸಿ ಪನ್ನು, ದಿಯಾ ಮಿರ್ಜಾ, ಸೋನಂ ಕಪೂರ್ ಸೇರಿದಂತೆ ಕೆಲವರು ಜಯಾ ಬಚ್ಚನ್ ಗೆ ಬೆಂಬಲ ನೀಡಿದ್ದಾರೆ.

    Recommended Video

    ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
    ಬಚ್ಚನ್ ನಿವಾಸಕ್ಕೆ ಭದ್ರತೆ

    ಬಚ್ಚನ್ ನಿವಾಸಕ್ಕೆ ಭದ್ರತೆ

    ಸಂಸತ್ ಭಾಷಣದ ಬೆನ್ನಲ್ಲೇ ಜಯಾ ಬಚ್ಚನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಜಯಾ ಬಚ್ಚನ್ ನಿವಾಸಕ್ಕೆ ಭದ್ರತೆ ನೀಡಲಾಗಿದೆ ಎಂದು ವರದಿಯಾಗಿದೆ. ನಟ ರವಿ ಕಿಶನ್ ಹೇಳಿಕೆ ಮತ್ತು ಕಂಗನಾ ರಣಾವತ್ ಹೇಳಿಕೆಯನ್ನು ಖಂಡಿಸಿ ಚಿತ್ರರಂಗದ ಪರ ಮಾತನಾಡಿದ್ದರು. ಚಿತ್ರೋದ್ಯಮದ ವಿರುದ್ಧ ನಿರಂತವಾಗಿ ನಡೆಯುತ್ತಿರುವ ದಾಳಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದರಿಂದ ಅನೇಕರು ಜಯಾ ಬಚ್ಚನ್ ವಿರುದ್ಧ ಮುಗಿಬಿದ್ದಿದ್ದರು. ಹಾಗಾಗಿ ಜುಹದಲ್ಲಿರುವ ಬಚ್ಚನ್ ಅವರ ಜಲ್ಸಾ ಬಂಗಲೆಗೆ ಮುಂಬೈ ಪೊಲೀಸರು ಭದ್ರತೆ ನೀಡಿದ್ದಾರೆ.

    English summary
    Senior Actress And BJP leader Jaya Prada Slams Jaya bachchan for politics over drug issue in parliament speech.
    Thursday, September 17, 2020, 15:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X