For Quick Alerts
  ALLOW NOTIFICATIONS  
  For Daily Alerts

  47 ದಿನದಲ್ಲಿ ಜೆರ್ಸಿ ಚಿತ್ರೀಕರಣ ಮುಗಿಸಿದ ಶಾಹೀದ್ ಕಪೂರ್

  |

  ಬಾಲಿವುಡ್ ನಟ ಶಾಹೀದ್ ಕಪೂರ್ ನಟಿಸುತ್ತಿರುವ ಜೆರ್ಸಿ ಸಿನಿಮಾದ ಚಿತ್ರೀಕರಣ ಕೇವಲ 47 ದಿನದಲ್ಲಿ ಮುಕ್ತಾಯವಾಗಿದೆ. ಈ ಕುರಿತು ಪೋಸ್ಟ್ ಹಾಕಿರುವ ನಟ ಶಾಹೀದ್ ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

  ಕೊರೊನಾ ವೈರಸ್ ಸಮಯದಲ್ಲಿ ತಮ್ಮ ಜೀವ ಭಯದ ನಡುವೆಯೂ ಇಡೀ ತಂಡ ಶ್ರದ್ಧೆಯಿಂದ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್ ಸ್ಟೇಡಿಯಂನಲ್ಲಿ ಶಾಹೀದ್ ಕಪೂರ್ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

  ಶಾಹಿದ್ ಕಪೂರ್ ಹೊಸ ಸಿನಿಮಾ: ಸಂಭಾವನೆಯಲ್ಲಿ 8 ಕೋಟಿ ಕಟ್!ಶಾಹಿದ್ ಕಪೂರ್ ಹೊಸ ಸಿನಿಮಾ: ಸಂಭಾವನೆಯಲ್ಲಿ 8 ಕೋಟಿ ಕಟ್!

  ''ಇಡೀ ತಂಡದ ಬಗ್ಗೆ ನನಗೆ ಹೆಮ್ಮೆ ಇದೆ. ಇದೊಂದು ರೀತಿ ಪವಾಡ ಎನ್ನಬಹುದು. ಕೊರೊನಾ ಎಂಬ ಅಪಾಯಕ್ಕೆ ಸಿಲುಕಿದರೂ ನಾವು ಇಷ್ಟಪಡುವ ಕೆಲಸವನ್ನು ಧೈರ್ಯದಿಂದ ಮಾಡಿ ಮುಗಿಸಿದ್ದೇವೆ. ಈ ಸಂದರ್ಭದಲ್ಲಿ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದು ಶಾಹೀದ್ ಕಪೂರ್ ಪೋಸ್ಟ್ ಹಾಕಿದ್ದಾರೆ.

  ವರ್ಷದ ಆರಂಭದಲ್ಲಿ ಚಿತ್ರೀಕರಣ ಶುರುವಾಗಬೇಕಿತ್ತು. ಆದ್ರೆ, ಲಾಕ್‌ಡೌನ್ ಕಾರಣದಿಂದ ಮುಂದೂಡಲಾಗಿತ್ತು. ಈಗ ಕೊರೊನಾ ನಡುವೆಯೂ ಶೂಟಿಂಗ್ ಮಾಡಿ ಮುಗಿಸಿದೆ ಚಿತ್ರತಂಡ. ಉತ್ತರಾಖಂಡ, ಚಂಡಿಘಡ್. ಮೋಹಾಲಿಯಲ್ಲಿ ಶೂಟಿಂಗ್ ಮಾಡಲಾಗಿದೆ.

  14 ವರ್ಷ ಹಿಂದಿನ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ!14 ವರ್ಷ ಹಿಂದಿನ ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ ನಟಿ!

  Mission Impossible 7 ಸಿಬ್ಬಂದಿ ವಿರುದ್ಧ ಕೂಗಾಡಿದ Tom Cruise | Filmibeat Kannada

  ಅಂದ್ಹಾಗೆ, ತೆಲುಗಿನಲ್ಲಿ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ನಟಿಸಿದ್ದ ಜೆರ್ಸಿ ರೀಮೇಕ್ ಇದಾಗಿದ್ದು, ಶಾಹೀದ್ ಕಪೂರ್ ಹಾಗೂ ಮೃನಾಲ್ ಠಾಕೂರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗು ಸಿನಿಮಾ ನಿರ್ದೇಶಿಸಿದ್ದ ಗೌತಮ್ ಈ ಚಿತ್ರಕ್ಕೂ ಡೈರೆಕ್ಟ್ ಮಾಡಿದ್ದಾರೆ. ಅಲ್ಲು ಅರವಿಂದ್ ಮತ್ತು ದಿಲ್ ರಾಜು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

  English summary
  Bollywood actor Shahid kapoor starrer jersey hindi film shoot completed in 47 days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X