For Quick Alerts
  ALLOW NOTIFICATIONS  
  For Daily Alerts

  ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

  By Bharath Kumar
  |
  ಶ್ರೀದೇವಿ ಮಗಳು ಜಾಹ್ನವಿ ಕಪೂರ್ ಗೆ ನೆನ್ನೆ ಅಮ್ಮನಿಲ್ಲದ ಮೊದಲ ಹುಟ್ಟುಹಬ್ಬ | FIlmibeat Kannada

  ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ ಇಂದು (ಮಾರ್ಚ್ 7) 21ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಮ್ಮನೊಂದಿಗೆ 20 ವರ್ಷಗಳ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಜಾಹ್ನವಿ ಇದೇ ಮೊದಲ ಭಾರಿಗೆ ಅಮ್ಮನಿಲ್ಲದ ಬರ್ತಡೇಯನ್ನ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ.

  ಜಾಹ್ನವಿ ಕಪೂರ್ ತನ್ನ 21ನೇ ಹುಟ್ಟುಹಬ್ಬವನ್ನ ವೃದ್ಧಾಶ್ರಮದಲ್ಲಿ ಆಚರಿಸಿಕೊಂಡಿರುವುದು ವಿಶೇಷ. ಅಮ್ಮನನ್ನ ಕಳೆದುಕೊಂಡ ಜಾಹ್ನವಿಗೆ ಹಲವು ಅಮ್ಮಂದಿರು ಶುಭಕೋರಿರುವ ವಿಡಿಯೋ ಈಗ ವೈರಲ್ ಆಗಿದೆ. ಈ ಪ್ರೀತಿಯನ್ನ ನೋಡಿದ ಜಾಹ್ನವಿ ಒಂದು ಕ್ಷಣ ಭಾವುಕರಾದಂತೆ ಕಂಡಿದೆ.

  ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ ಶ್ರೀದೇವಿ ಪಾರ್ಥಿವ ಶರೀರ ಭಾರತಕ್ಕೆ ತರಲು ಈ ವ್ಯಕ್ತಿಯೇ ಕಾರಣ

  ಇನ್ನು ಮನಸ್ತಾಪಗಳಿಂದ ದೂರವಾಗಿದ್ದ ಕಪೂರ್ ಕುಟುಂಬ ಶ್ರೀದೇವಿ ಸಾವಿನ ಬಳಿಕ ಒಂದಾಗಿದ್ದರು. ಅದರ ಮುಂದುವರೆದ ಭಾಗದಂತೆ ಶ್ರೀದೇವಿ ಮಗಳ ಹುಟ್ಟುಹಬ್ಬವನ್ನ ಕಪೂರ್ ಕುಟುಂಬದ ಕುಡಿಗಳೆಲ್ಲ ಒಟ್ಟಿಗೆ ಸೇರಿ ವಿಶೇಷವಾಗಿರಿಸಿದ್ದಾರೆ. ಮುಂದೆ ಓದಿ....

  ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ

  ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಣೆ

  ಜಾಹ್ನವಿ ಕಪೂರ್ ವೃದ್ಧಾಶ್ರಮದಲ್ಲಿ ತಮ್ಮ 21ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು, ಮೂರು ವಿಭಿನ್ನ ಬಗೆಯ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  ಸಹೋದರಿ ಬರ್ತಡೇ ಸಂಭ್ರಮಿಸಿದ ಕಪೂರ್ ಸಿಸ್ಟರ್ಸ್

  ಸಹೋದರಿ ಬರ್ತಡೇ ಸಂಭ್ರಮಿಸಿದ ಕಪೂರ್ ಸಿಸ್ಟರ್ಸ್

  ಜಾಹ್ನವಿ ಕಪೂರ್ ಹುಟ್ಟುಹಬ್ಬವನ್ನ ಆಚರಿಸಿಲು ಇಡೀ ಕಪೂರ್ ಕುಟುಂಬದ ಕುಡಿಗಳು ಒಟ್ಟಾಗಿದ್ದಾರೆ. ಜಾಹ್ನವಿ ಸಹೋದರಿಯರೆಲ್ಲ ಸೇರಿ ಹಲವು ಕೇಕ್ ಗಳನ್ನ ಕತ್ತರಿಸಿ ಸಂಭ್ರಸಿದ್ದಾರೆ.

  ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!ಶ್ರೀದೇವಿ ರೂಮಿನಲ್ಲಿ ಆ ದಿನ ಏನಾಯ್ತು.? ಕೋಮಲ್ ನೆಹ್ತಾ ಬಿಚ್ಚಿಟ್ಟ ಅಸಲಿ ಕಥೆ.!

  ಕಪೂರ್ ಸಹೋದರಿಯರು

  ಕಪೂರ್ ಸಹೋದರಿಯರು

  ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್, ಸೋನಂ ಕಪೂರ್, ಬೋನಿ ಕಪೂರ್ ಮೊದಲ ಪತ್ನಿಯ ಮಗಳು ಅನ್ಷುಲಾ ಕಪೂರ್, ಶನಾಯಾ ಕಪೂರ್, ಜಹಾನ ಕಪೂರ್, ರಿಯಾ ಕಪೂರ್ ಎಲ್ಲರೂ ಸೇರಿ ಜನುಮದಿನ ಕೊಂಡಾಡಿದ್ದಾರೆ.

  ಮಗಳ ಸಂಭ್ರಮಕ್ಕೆ ತಂದೆ ಸಾಕ್ಷಿ

  ಮಗಳ ಸಂಭ್ರಮಕ್ಕೆ ತಂದೆ ಸಾಕ್ಷಿ

  ಇನ್ನು ಶ್ರೀದೇವಿ ಅಗಲಿಕೆಯಿಂದ ನೋವಿನಲ್ಲಿರುವ ಕುಟುಂಬದಲ್ಲಿ ಜಾಹ್ನವಿ ಕಪೂರ್ ಹುಟ್ಟುಹಬ್ಬ ಸಂತಸ ತಂದಿದೆ. ಮಗಳ ಈ ಸಂತಸದ ಕ್ಷಣಕ್ಕೆ ತಂದೆ ಬೋನಿ ಕಪೂರ್ ಕೂಡ ಸಾಕ್ಷಿಯಾಗಿದ್ದಾರೆ.

  ಮನಸ್ತಾಪ ಮರೆತು ಒಂದಾದ ಕುಟುಂಬ

  ಮನಸ್ತಾಪ ಮರೆತು ಒಂದಾದ ಕುಟುಂಬ

  ಬೋನಿ ಕಪೂರ್ ಮೊದಲ ಪತ್ನಿಯ ಮಕ್ಕಳು ಅರ್ಜುನ್ ಕಪೂರ್ ಮತ್ತು ಅಕ್ಷುಲಾ, ತಮ್ಮ ತಾಯಿಯ ನಿಧನದ ನಂತರ ಬೋನಿ ಕಪೂರ್ ಅವರ ನೆರವು ಪಡೆಯಲಿಲ್ಲ. ಆದ್ರೆ, ಶ್ರೀದೇವಿ ನಿಧನದ ನಂತರ ಈಗ ಎಲ್ಲರೂ ಒಂದಾಗಿದ್ದಾರೆ. ಬೋನಿ ಕಪೂರ್ ಗೆ ಸಹಾಯವಾಗಿ ನಿಂತಿದ್ದಾರೆ. ಮಕ್ಕಳು ಎಲ್ಲರೂ ಒಟ್ಟಿಗೆ ಇರುವುದು ಬೋನಿಗೆ ಖುಷಿಕೊಟ್ಟಿದೆ.

  ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

  ಅಮ್ಮನ ಕೊನೆ ಕ್ಷಣದಲ್ಲಿ ಮಗಳು ಇರಲಿಲ್ಲ

  ಅಮ್ಮನ ಕೊನೆ ಕ್ಷಣದಲ್ಲಿ ಮಗಳು ಇರಲಿಲ್ಲ

  ಶ್ರೀದೇವಿ ಅವರು ಫೆಬ್ರವರಿ 24ರಂದು ದುಬೈನ ಹೋಟೆಲ್ ನಲ್ಲಿ ಅಕಾಲಿಕ ಮರಣ ಹೊಂದಿದ್ದರು. 54 ವರ್ಷದ ಶ್ರೀದೇವಿ ಸಂಬಂಧಿಕರ ಮದುವೆಗೆ ಹೋಗಿ ಅಲ್ಲಿಯೇ ಕೊನೆಯುಸಿರೆಳೆದರು. ಆ ವೇಳೆ ಜಾಹ್ನವಿ ಕಪೂರ್ ಅಮ್ಮನ ಜೊತೆಯಲ್ಲಿ ಇರಲಿಲ್ಲ. ಯಾಕಂದ್ರೆ ಜಾಹ್ನವಿ ಅಭಿನಯದ ಚೊಚ್ಚಲ ಸಿನಿಮಾ 'ದಡಕ್' ಚಿತ್ರದ ಚಿತ್ರೀಕರಣದಲ್ಲಿ ಭಾಗಯಾಗಿದ್ದರು. ಹೀಗಾಗಿ, ಅಮ್ಮನ ಕೊನೆಯ ಕ್ಷಣಗಳು ಜಾಹ್ನವಿ ನೋಡಲು ಸಾಧ್ಯವಾಗಲಿಲ್ಲ.

  English summary
  On the eve of Sridevi's daughter Janhvi Kapoor's birthday, the Kapoor daughters, Sonam, Rhea, Anshula, Shanaya and Khushi got together to make the day special for their sister.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X