ಜಾಹ್ನವಿ ಕಪೂರ್ ಮಾಡಿದ ಆ ಒಳ್ಳೆಯ ಕೆಲಸಕ್ಕೆ ಭಾರಿ ಮೆಚ್ಚುಗೆ

ನಟಿ ಶ್ರೀದೇವಿ ಮಗಳು ಜಾಹ್ನವಿ ಕಪೂರ್ ತಮ್ಮ ತಾಯಿಯಂತೆ ಹೆಚ್ಚು ಖ್ಯಾತಿ ಹೊಂದುತ್ತಿದ್ದಾರೆ. ಸಿನಿಮಾ ಆಗಿರಬಹುದು ಅಥವಾ ಸಿನಿಮಾದಿಂದ ಹೊರಗೆ ಆಗಿರಬಹುದು ಪ್ರತಿಯೊಂದು ಕೆಲಸದಲ್ಲೂ ತಾಯಿಯ ಗುಣದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅದಕ್ಕೆ ಪುಷ್ಠಿ ಕೊಡುವಂತೆ ಘಟನೆಯೊಂದು ನಡೆದಿದೆ. ಜಿಮ್ ನಿಂದ ಹೊರಗೆ ಬಂದ ಜಾಹ್ನವಿ ಕಪೂರ್ ಗೆ ಬಾಲಕನೊಬ್ಬ ಎದುರು ಸಿಕ್ಕಿದ್ದಾನೆ. ತನ್ನ ಬಳಿ ಇದ್ದ ಮ್ಯಾಗಜಿನ್ ಖರೀದಿಸಿ ಎಂದು ಹಿಂಬಾಲಿಸಿದ್ದಾನೆ.

ತನ್ನ ಹಿಂದೆಯೇ ಬರುತ್ತಿದ್ದ ಬಾಲಕನ ಮನವಿ ಕೇಳಿ ಮನಸ್ಸು ಕರಗಿದ ಜಾಹ್ನವಿ ಕಪೂರ್, ತನ್ನ ಕಾರಿನ ಡ್ರೈವರ್ ಬಳಿ ದುಡ್ಡು ತೆಗೆದುಕೊಂಡು ಆ ಬಾಲಕನಿಗೆ ನೀಡಿದ್ದಾರೆ.

 Jhanvi Kapoor Has Gave 500 Rupees To Child

ಇದಕ್ಕು ಮೊದಲು ಕಾರಿನಲ್ಲಿದ್ದ ತನ್ನ ಪರ್ಸ್ ತೆಗೆದುಕೊಂಡು ಅದರಲ್ಲಿ ದುಡ್ಡು ಇದ್ಯಾ ಎಂದು ಹುಡುಕಿದರು. ಆದರೆ, ಜಾಹ್ನವಿ ಪರ್ಸ್ ನಲ್ಲಿ ದುಡ್ಡು ಇರಲಿಲ್ಲ. ನಂತರ ಪಕ್ಕದಲ್ಲಿ ಡ್ರೈವರ್ ಬಳಿ 500 ರೂಪಾಯಿ ದುಡ್ಡು ಪಡೆದು, ಆ ಬಾಲಕನಿಗೆ ನೀಡಿದ್ದಾರೆ.

ಆ ಬಾಲಕ ರಸ್ತೆಯಲ್ಲಿ ಮ್ಯಾಗಜಿನ್ ಮಾರಾಟ ಮಾಡುತ್ತಿದ್ದ. ಜಾಹ್ನವಿ ಕಪೂರ್ ಅವರನ್ನ ನೋಡಿದ ತಕ್ಷಣ, ಹಿಂಬಾಲಿಸುತ್ತಾ ಅಕ್ಕ ಮ್ಯಾಗಜಿನ್ ತಗೊಳ್ಳಿ ಅಥವಾ ದುಡ್ಡು ಆದರೂ ಕೊಡಿ ಎಂದು ಮನವಿ ಮಾಡಿದ.

ಆ ಬಾಲಕ ಮನವಿಗೆ ಹೃದಯ ಕರಗಿದ ಜಾಹ್ನವಿ ಕಪೂರ್ 500 ರೂಪಾಯಿ ದುಡ್ಡು ನೀಡಿ ಹೋದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಕಂಡ ನೆಟ್ಟಿಗರು ಜಾಹ್ನವಿ ಕಪೂರ್ ಗೆ ಶ್ಲಾಘಿಸುತ್ತಿದ್ದಾರೆ.

''ನೀನು ಈಗ ವಯಸ್ಸಿನಲ್ಲಿ ಚಿಕ್ಕವಳಾಗಿರಬಹುದು. ಆದರೆ, ಭವಿಷ್ಯದಲ್ಲಿ ನೀನು ನಿನ್ನ ತಾಯಿಯಂತೆ ಒಳ್ಳೆಯ ಕೆಲಸಗಳನ್ನ ಮಾಡುತ್ತೀಯಾ'' ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಕಾಮೆಂಟ್ ಮಾಡಿದ್ದು ''ಇದು ಶ್ರೀದೇವಿ ಅವರ ಪ್ರತಿರೂಪ. ಸ್ವರ್ಗದಿಂದ ನಿಮ್ಮ ತಾಯಿ ನೋಡಿ ಸಂತಸಗೊಂಡಿರುತ್ತಾರೆ'' ಎಂದಿದ್ದಾರೆ.

More from Filmibeat

English summary
Bollywood actress jhanvi kapoor has gave 500 rupees to child in road.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X